ಅಪ್ರಾಪ್ತೆಯನ್ನು ಪ್ರೀತಿಸಿ ಜೈಲು ಸೇರಿದ್ದ ಆತ! ಅವನಿಗಾಗಿಯೇ 5 ವರ್ಷ ಕಾದಿದ್ದಳು ಈಕೆ! ರಿಯಲ್​ ಲವ್​ ಕಹಾನಿ!

Shimoga Jail Love Story, ...

ಅಪ್ರಾಪ್ತೆಯನ್ನು ಪ್ರೀತಿಸಿ ಜೈಲು ಸೇರಿದ್ದ ಆತ!  ಅವನಿಗಾಗಿಯೇ 5 ವರ್ಷ ಕಾದಿದ್ದಳು ಈಕೆ! ರಿಯಲ್​ ಲವ್​ ಕಹಾನಿ!
Shimoga Jail Love Story, ...

Shimoga Jail Love Story,  ..Malenadu today story / SHIVAMOGGA

ಪ್ರೀತಿಸಿದ ತಪ್ಪಿಗೆ ಪ್ರಿಯಕರನಿಗಾಯ್ತು ಹತ್ತು ವರ್ಷ ಸಜೆ

.ಪ್ರೀತಿ ಮಾಡು ತಪ್ಪೇನಿಲ್ಲ ಎನ್ನುವ ಪ್ರೇಮಿಗಳ ಪಾಲಿಗೆ ಈ ಸ್ಟೋರಿ ದುರಂತ ಕಥೆಯಾಗಿದೆ.ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ ತಪ್ಪಿಗೆ ನ್ಯಾಯಾಲಯ ಯುವಕನಿಗೆ ಹತ್ತು ವರ್ಷ ಸಜೆಯನ್ನು ನೀಡಿತು.ಕಳೆದ ಐದು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಗ್ರಾಮವೊಂದರ ಶಿವು (ಕಾಲ್ಪನಿಕ ಹೆಸರು ) ಎಂಬಾತ ಲಕ್ಷ್ಮಿ (ಕಾಲ್ಪನಿಕ ಹೆಸರು) ಎಂಬ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದ .ಬಾಲಕಿಯ ವಯಸ್ಸು 16 ವರ್ಷ ಇದ್ದ ಕಾರಣ…ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿ ಶಿವು ನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಶಿವುಗೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.ಇತ್ತ ಅಪ್ರಾಪ್ತಳಾಗಿದ್ದ ಲಕ್ಷ್ಮಿಯನ್ನು ಪೊಲೀಸರು ಸ್ವೀಕಾರ ಕೇಂದ್ರದಲ್ಲಿರಿಸಿದ್ದರು.ಹದಿನೆಂಟು ವರ್ಷ ತುಂಬಿದ ಬಳಿಕ ಲಕ್ಷ್ಮಿ ತನ್ನ ಪೋಷಕರ ಮನೆಗೆ ಹೋಗದೆ ಪ್ರೇಮಿಯ ಪೋಷಕರ ಮನೆ ಸೇರಿದಳು..ಆಗ ಶಿವು ಪೋಷಕರು..ಲಕ್ಷ್ಮಿಯನ್ನು ಪ್ರೀತಿಯಿಂದಲೇ ಬರಮಾಡಿಕೊಂಡರು.

ಪ್ರಿಯಕರನ ಪೋಷಕರ ಮನೆಯಲ್ಲಿದ್ದೇ ಪ್ರೇಮಿಯ ಬಿಡುಗಡೆಗಾಗಿ ಕಾದು ಕೂತಳು ಪ್ರೇಯಸಿ.

ತನ್ನ ತಪ್ಪಿನಿಂದಾಗಿ ಶಿವುಗೆ ಹತ್ತು ವರ್ಷ ಜೈಲು ಶಿಕ್ಷೆಯಾಯಿತಲ್ಲಾ ಎಂದು ಮನನೊಂದಿದ್ದ ಲಕ್ಷ್ಮಿ..ಆತನ ಬಿಡುಗಡೆಗಾಗಿ ಜಾತಕ ಪಕ್ಷಿಯಂತೆ ಕಾದು ಕೂತಿದ್ದಳು..ಇತ್ತ ಶಿವು ಐದು ವರ್ಷ ಸೆರೆವಾಸ ಪೂರೈಸಿದ್ದ.ಜೈಲಿನಲ್ಲಿರುವಾಗಲೇ..ತನ್ನ ಸನ್ನಡತೆಯಿಂದ ಎಲ್ಲರ ಮನಗೆದ್ದಿದ್ದ.ಹೀಗಾಗಿಯೇ ಅಂದಿನ ಜೈಲು ಮುಖ್ಯ ಅಧೀಕ್ಷಕ ರಂಗನಾಥ್ ರವರು ಶಿವುನನ್ನು ಕಛೇರಿಯಲ್ಲಿ ಜವಾನನ್ನಾಗಿ ಕರ್ತವ್ಯಕ್ಕೆ ನಿಯೋಜಿಸಿದ್ದರು.ಶಿವುನ ಸನ್ನಡತೆಯನ್ನು ಗಮನಿಸಿದ,ರಂಗನಾಥ್ ಕೋರೋನಾ ಲಾಕ್ ಡೌನ್ ಸಡಿಲಿಕೆ ನಂತರ. ಒಂದು ವಾರ ಪೆರೋಲ್ ಮೇಲೆ ಬಿಡುಗಡೆ ಗೊಳಿಸಿ ಮನೆಗೆ ಹೋಗಿ ಸಕಾಲದಲ್ಲಿ ಜೈಲಿಗೆ ವಾಪಾಸ್ಸಾಗುವಂತೆ ಸೂಚನೆ ನೀಡಿದರು.

ಲಾಕ್ ಡೌನ್ ಸಂದರ್ಭದಲ್ಲಿ ಪೋರೋಲ್ ಮೇಲೆ ಬಿಡುಗಡೆಯಾದಾಗ ಏನಾಯ್ತು?

ಜೈಲಿನಿಂದ ಹೊರಬರುತ್ತಲೇ ಶಿವು..ತನ್ನ ಪ್ರೇಯಸಿಯನ್ನು ನೋಡಬೇಕೆಂಬ ತವಕದಲ್ಲಿದ್ದ,ಯಾವ ಆತುರದಲ್ಲಿ ಶಿವು ತನ್ನೂರಿಗೆ ಹೋದನೋ..ಅಷ್ಟೆ ವೇಗವಾಗಿ ಮತ್ತೆ ಜೈಲಿಗೆ ವಾಪಸ್ಸಾಗಿ ಬಾಗಿಲು ಬಡಿದ. ಇತ್ತ ಜೈಲು ಅಧಿಕಾರಿ ಸಿಬ್ಬಂದಿಗಳು…ಯಾಕೆ ಶಿವು ಏನಾಯ್ತು..ಎಂದು ವಿಚಾರಿಸಿದಾಗ…ಶಿವು ತನ್ನೂರಿಗೆ ಹೋದಾಗ ನಡೆದ ಘಟನೆಯನ್ನು ವಿವರಿಸಿದ.

ಪ್ರೇಯಸಿ ಸಾವನ್ನಪ್ಪಿ ತಿಂಗಳೇ ಕಳೆದಿತ್ತು.

ಹೌದು ಶಿವು ಯಾವ ತವಕದಲ್ಲಿ ಪೋಷಕರ ಮನೆ ಸೇರಿದನೋ..ಆಗಲೇ ಅವನಿಗೆ ಆಘಾತ ಕಾದಿತ್ತು..ತನ್ನನ್ನು ಬರಮಾಡಿಕೊಳ್ಳಬೇಕಿದ್ದ ಪ್ರೇಯಸಿ ಲಕ್ಷ್ಮಿ ಅಲ್ಲಿರಲಿಲ್ಲ..ಪೋಷಕರನ್ನು ಕೇಳಿದಾಗ…ಆಕೆ ಬಾರದ ಲೋಕಕ್ಕೆ ತೆರಳಿದ್ದಾಳಪ್ಪಾ ಅಂದಾಗ ಶಿವುಗೆ ಗರಬಡಿದಂಗಾಯಿತು.ಲಕ್ಷ್ಮಿ ಕೆಲ ತಿಂಗಳಿನಿಂದ ಅನಾರೋಗ್ಯಕ್ಕೆ ತುತ್ತಾಗಿ ಪೋಷಕರ ಮನೆಗೆ ಹೋಗಿದ್ದಳು…ಪೋಷಕರ ಮನೆಯಲ್ಲೇ ಆಕೆ ಸಾವನ್ನಪ್ಪಿದಳು..ನಾವೆಲ್ಲಾ ಅಂತ್ಯಸಂಸ್ಕಾರಕ್ಕೆ ಹೋಗಿದ್ದೆವು ಎಂದು ಪೋಷಕರು ಹೇಳಿದರು. ಮತ್ತೆ ನನಿಗ್ಯಾಕೆ ವಿಷಯ ತಿಳಿಸಲಿಲ್ಲ ಎಂದಾಗ ಪೋಷಕರು….ನಿರುತ್ತರರಾದರು.

ಶಿವು ಜೈಲಿನಿಂದ ಪೆರೋಲ್ ನ ಮೇಲೆ ಬಿಡುಗಡೆಯಾಗುವ ಎರಡು ತಿಂಗಳ ಮೊದಲೇ ಆತನ ಪ್ರೇಯಸಿ ಲಕ್ಷ್ಮಿ ಸಾವನ್ನಪ್ಪಿದ್ದಳು.ಆದರೆ ಎರಡು ಕುಟುಂಬಸ್ಥರು ಜೈಲಿನ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿರಲಿಲ್ಲ.ಪ್ರೇಯಸಿಗಾಗಿ ಹತ್ತು ವರ್ಷ ಜೈಲುವಾಸ ಅನುಭವಿಸಿದ ಶಿವು..ಮತ್ತೆ ಜೈಲಿಗೆ ವಾಪಸ್ಸಾದಾಗ….ವಿಷಯ ಕೇಳಿದ ಅಧಿಕಾರಿ ಸಿಬ್ಬಂದಗಳ ಕಣ್ಣಾಲೆಗಳು ಒದ್ದೆಯಾಗಿದ್ದವು.ಮತ್ತೆ ಜೈಲಿನಲ್ಲಿ ಶಿವು ಎಂದಿನಂತೆ..ಜವಾನನ ಕಾಯಕ ಮುಂದುವರೆಸಿದ್ದಾನೆ..ಅತ್ತ ಪ್ರೇಯಸಿಯೂ ಸಿಗದೆ..ಇತ್ತ ಶಿಕ್ಷೆಯಿಂದಲೂ ಮುಕ್ತನಾಗದೆ…ಅತಂತ್ರವಾಗಿರುವ ಶಿವು ಜೈಲುಹಕ್ಕಿಯಾಗಿ ಉಳಿದಿದ್ದು..ದುರಂತವೇ ಸರಿ,

ರಿಯಲ್​ ಕಹಾನಿ: ಜಸ್ಟ್ ಶಿವಮೊಗ್ಗ.