ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ

The sound of the bell in the temple of Isur rang out the trumpet of freedom!!

ದೇಗುಲದ ಆ  ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ
The sound of the bell in the temple of Isur rang out the trumpet of freedom!!

 temple of Isur  ದೇಗುಲದ ಆ ಘಂಟೆಯ ಸದ್ದಿನಿಂದ ಮೊಳಗುತ್ತಿತ್ತು ಸ್ವಾತಂತ್ರ್ಯ ಕಹಳೆ!! ಇವತ್ತಿಗೂ ಅದಕ್ಕಾಗಿ ಹಾತೊರೆಯುತ್ತಿದ್ದಾರೆ ಜನ! ಸ್ವಾತಂತ್ರ್ಯಕ್ಕೂ ಮೊದಲೇ ಸ್ವತಂತ್ರವಾದ ಊರಿನ ವೀರ ಕಥೆಯಿದು! ಬ್ರಿಟೀಷರ ವಿರುದ್ಧ ಸೆಟೆದು ನಿಂತ ಇಲ್ಲಿನ ಗ್ರಾಮಸ್ಥರು ದೇಶದಲ್ಲಿಯೇ ಪ್ರಥಮ ಬಾರಿ ತಮ್ಮ ಗ್ರಾಮವನ್ನು ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ್ರು.ಸ್ವತಂತ್ರ ಸರ್ಕಾರವನ್ನು ರಚಿಸಿದರು,ಬ್ರಿಟೀಷ್ ಸರ್ಕಾರಕ್ಕೆ ಕರವನ್ನು ನೀಡಲು ನಿರಾಕರಿಸಿದರು. ನಂತರ ನಡೆದಿದ್ದೆಲ್ಲಾ ಹೋರಾಟ ತ್ಯಾಗ ಬಲಿದಾನವೇ.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಂದೇ ಗ್ರಾಮದ ಐದು ಮಂದಿ ಯುವಕರು ಕೊನೆಗೆ ನೇಣುಗಂಬವೇರಿದರು.

ಈಸೂರು ದಂಗೆ- 1942

ಏಸೂರು ಕೊಟ್ಟರೂ ಈಸೂರು ಕೊಡೆವು

ಇದು ಬ್ರಿಟೀಷರ ವಿರುದ್ಧ ಸೆಡ್ಡುಹೊಡೆದು ಕರವನ್ನು ನೀಡಲು ನಿರಾಕರಿಸಿ,ಸ್ವತಂತ್ರ ಗ್ರಾಮವೆಂದು ಘೋಷಿಸಿಕೊಂಡ ಗ್ರಾಮಸ್ಥರ ದೇಶಪ್ರೇಮದ ಕಥೆ…

ದೇಶಕ್ಕಾಗಿ ತ್ಯಾಗ ಬಲಿದಾನವಾದವರ ವ್ಯಥೆ.ಹೌದು 1942 ಆಗಸ್ಟ್ 2 ರಂದು ಮುಂಬೈ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಹಾತ್ಮಗಾಂದೀಜಿಯವರು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಘೋಷಿಸಿದಾಗ ಅದರ ಮಾರ್ಧನಿ ಅಪ್ಪಳಿದ್ದು,ಈ ಗ್ರಾಮವನ್ನು.

ಗಾಂದೀಜಿಯವರ ಘೋಷಣೆಯ ಕಾವು ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದವರೆಗೂ ಪಸರಿಸಿತು.ಇಂತಹ ಸಂದರ್ಭದಲ್ಲಿ ಈಸೂರಿನ ಜನತೆ ಒಂದು ಹೆಜ್ಜೆ ಮುಂದೆ ಇಟ್ಟರು.

ಬ್ರಿಟೀಷರ ಆಡಳಿತದ ವಿರುದ್ದ ಸೆಟೆದು ನಿಂತರು. ಕರವನ್ನು ಕಟ್ಟಲು ನಿರಾಕರಿಸಿದರು.ಅಲ್ಲದೆ ತಮ್ಮ ಗ್ರಾಮದಲ್ಲಿ ಸ್ವತಂತ್ರ ಸರ್ಕಾರ ಘೋಷಿಸಿಕೊಂಡು ಆಳರಸರ ವಿರುದ್ಧ ರಣ ಕಹಳೆ ಊದಿದರು.

ಏಸೂರ ಕೊಟ್ಟರು ಈಸೂರ ಕೊಡೆವು ಎಂಬ ಘೋಷವಾಕ್ಯ ಗ್ರಾಮದ ಪ್ರತಿಯೊಬ್ಬರ ಕಿವಿಯಲ್ಲೂ ಮಾರ್ಧನಿಸತೊಡಗಿದವು.

ದೇಶಭಕ್ತಿಗೆ ವೀರಭದ್ರ ಸ್ವಾಮಿ ದೇವಸ್ಥಾನವೇ ಕಾರ್ಯಸ್ಥಾನ

ಈಸೂರಿನಲ್ಲಿ ಸ್ವಾತಂತ್ರ್ಯದ ಮಂಗಳ ಘೋಷ ಆರಂಭವಾಗುವುದೇ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ .

ಈ ಗುಡಿಯೇ ಸಂಗ್ರಾಮದ ಕೇಂದ್ರ.ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿದ ಇದೇ ಸ್ಥಳದಲ್ಲಿ ರಕ್ತಸಿಕ್ತ ಅಧ್ಯಾಯವು ಕೊನೆಗೊಳ್ಳುವುದು ವಿಶೇಷ.

ಇದೇ ದೇವಸ್ಥಾನದಲ್ಲಿ ಪ್ರಭಾತ್ ಪೇರಿ ನಡೆಯುತ್ತಿತ್ತು.ಗ್ರಾಮದ ಎಲ್ಲರೂ ದೇವಸ್ಥಾನದ ಗಂಟೆ ಬಾರಿಸುತ್ತಿದ್ದಂತೆ ಒಂದೆಡೆ ಜಮಾಯಿಸುತ್ತಿದ್ದರು.

ಇಂದಿಗೂ ವೀರಭದ್ರ ದೇವಸ್ಥಾನದಲ್ಲಿ ನಿಂತರೇ ಅಲ್ಲಿನ ನೆನಪುಗಳು ಸ್ವಾತಂತ್ರ್ಯ ಪೂರ್ವಕ್ಕೆ ನಮ್ಮನ್ನು ಕರೆದೊಯ್ಯುತ್ತದೆ.

1942 ನೇ ಸೆಪ್ಟಂಬರ್ 30 ರಂದು ಈಸೂರನ್ನು ಸ್ವತಂತ್ರ ಗ್ರಾಮವೆಂದು ಇದೇ ದೇವಸ್ಥಾನದ ಅಂಗಳದಲ್ಲಿ ಸರ್ವಸಮ್ಮತವಾಗಿ ಘೋಷಿಸಲಾಯಿತು.

ಸ್ವತಂತ್ರ ಗ್ರಾಮಕ್ಕೆ ಅಮಲ್ದಾರನಾಗಿ ಜಯಣ್ಣ,ಸಬ್ ಇನ್ಸ್ ಪೆಕ್ಟರ್ ಆಗಿ ಮಲ್ಲಣ್ಣರನ್ನು ಜನರು ಆಯ್ಕೆ ಮಾಡಿ ಗ್ರಾಮದ ರಕ್ಷಣೆ ಮಾಡುವ ಹೊಣೆಯನ್ನು ಹೊರಿಸಿದರು.

ಆದರೆ ಇವರಿಬ್ಬರು ಪುಟ್ಟ ಬಾಲಕರು.ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಗೆ ಚಾಲನೆ ನೀಡಿದ್ದು,ಈ ಗ್ರಾಮದ ಮಕ್ಕಳು ಹೆಂಗಸರಲ್ಲಿ ಸಹ ದೇಶಭಕ್ತಿ ಮನೆ ಮಾಡುವಂತೆ ಮಾಡಿತ್ತು.

ಈ ಸಂದರ್ಭದಲ್ಲಿ ಗಂಡು ಹೆಣ್ಣು ಮಕ್ಕಳು ಹಿರಿಯರು ಕಿರಿಯರು ಎಂಬ ಬೇದವಿಲ್ಲದೆ ಎಲ್ಲರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಳುಗಿದರು.

ಬೆಳಿಗ್ಗೆ ಹೊಲಗದ್ದೆಗಳನ್ನು ಕೆಲಸ ಮಾಡಿದರೆ ರಾತ್ರಿಯಾದೊಡನೆ ವೀರಭದ್ರ ದೇವಸ್ಥಾನದಲ್ಲಿ ರಹಸ್ಯ ಸಭೆ ಸೇರಿ ಮುಂದಿನ ನಡೆಗಳ ಬಗ್ಗೆ ಚರ್ಚಿಸುತ್ತಿದ್ದರು.ಅಂದಿನ ಘಟನಾವಳಿಗೆ ವೀರಭದ್ರ ದೇವಸ್ಥಾನ ಇಂದಿಗೂ ಸಾಕ್ಷಿಭೂತವಾಗಿದೆ.

ಕೀರ್ತನೆ ಹರಕಥೆ ಲಾವಣಿ ನೆಪದಲ್ಲಿ ರಾಷ್ಟ್ರದ ರಾಜಕೀಯ ವಿಶ್ಲೇಷಣೆ ಕ್ರಾಂತಿಗೆ ಪ್ರಚೋಧನೆ ನೀಡಲಾಗುತ್ತಿತ್ತು.

ಗ್ರಾಮದ ಪ್ರತಿಮನೆಯಲ್ಲೂ ಸ್ವಾತಂತ್ರ್ಯ ಹೋರಾಟಗಾರರಿದ್ದರು.ಒಳ್ಳೆಯದಕ್ಕೂ ಕೆಟ್ಟದಕ್ಕೂ ವೀರಭದ್ರ ದೇವಸ್ಥಾನ ಸ್ವಾಮಿ ಗಂಟೆ ಜಾಗಟೆಗಳೇ ಜನರಿಗೆ ಕರೆಕೊಡುತ್ತಿದ್ದವು.

ಶಬ್ದಗಳ ಹಿನ್ನಲೆಯಲ್ಲಿ ಗ್ರಾಮಸ್ಥರು ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಗ್ರಾಮಕ್ಕೆ ರಕ್ಷಣೆ.ಬ್ರಿಟೀಷರು ಗ್ರಾಮಕ್ಕೆ ಬರದಂತೆ ತಡೆಯಬೇಕಾದ ಕ್ರಮಗಳು ಭೂಗತ ಹೋರಾಟಗಳ ನಿರ್ದಾರಗಳೆಲ್ಲವೂ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಆಗುತ್ತಿದ್ದವು.

ದೇವಸ್ಥಾನದಲ್ಲಿ ಮೊದಲ ಗಂಟೆ ಭಾರಿಸಿದರೆ ಜನರು ಸಾಮಾನ್ಯವಾಗಿ ಸಭೆ ಸೇರುತ್ತಿದ್ದರು.ಎರಡನೇ ಗಂಟೆ ಬಾರಿಸಿದರೆ ಗಂಭೀರ ಚರ್ಚೆ ಎಂದು ಜನರು ಜಮಾಯಿಸುತ್ತಿದ್ದರು.

ಮೂರನೇ ಘಂಟೆ ಭಾರಿಸಿದರೆ ಗ್ರಾಮಕ್ಕೆ ಆಘಾತ ಕಾದಿದೆ ಎಂಬ ಸೂಚನೆ ನೀಡುತ್ತಿತ್ತು.ನಾಲ್ಕನೇ ಗಂಟೆ ಭಾರಿಸಿದರೆ ಎಲ್ಲರೂ ಹೋರಾಟಕ್ಕೆ ಸಿದ್ದರಾಗಿ ಬನ್ನಿ ಎಂದೇ ಗಂಟೆಯ ಸದ್ದು ಎಚ್ಚರಿಕೆಯನ್ನು ನೀಡುತ್ತಿತ್ತು

ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಪೂರ್ತಿ ಈ ದೊಡ್ಡಮನೆ

ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಒಂದು ಕಿಡಿ ದೊಡ್ಡ ಜ್ವಾಲೆಯಾಗಿ ಚಿಮ್ಮುವುದಕ್ಕೆ ಸಾಹುಕಾರ್ ಬಸವಣ್ಯಪ್ಪ ಹಾಗು ಪತ್ನಿ ಹಾಲಮ್ಮ ಪ್ರಮುಖವಾಗಿ ಕಾರಣರಾಗುತ್ತಾರೆ.

ಈಸೂರಿನ ಸ್ವಾತಂತ್ರ್ಯ ಹೋರಾಟಗಾರಿಗೆಲ್ಲಾ ಇವರೇ ಸ್ಪೂರ್ತಿ,ಆದರ್ಶ,ಹಣಕಾಸಿನ ನೆರವು ಎಲ್ಲವನ್ನು ನೀಡುತ್ತಿದ್ದರು.

ನೂರಾರು ಎಕರೆಯ ಜಮಿನ್ದಾರ್ ಆಗಿದ್ದರೂ, ದೇಶಭಕ್ತಿ ಇವರಲ್ಲಿ ಬೆಟ್ಟದಷ್ಟಿತ್ತು.ಈಸೂರು ಗ್ರಾಮಕ್ಕೆ ಬಸವಣ್ಯಪ್ಪನವರದ್ದೇ ದೊಡ್ಡಮನೆ.

ಈಗಲೂ ಈ ಗ್ರಾಮಕ್ಕೆ ಹೋದರೆ ದೊಡ್ಡ ಮನೆ ಎಂದರೆ ಯಾರು ಬೇಕಾದರೂ ತೋರಿಸುತ್ತಾರೆ.ಆದರೆ ಈಗ ಮನೆ ಸ್ವಲ್ಪ ಮಾರ್ಪಾಡಾಗಿದೆ.

ಸ್ವಾತಂತ್ರಕ್ಕಾಗಿ ಹೋರಾಡಿ ಸಾನಪ್ಪಿದ್ದ ಬಸವಣ್ಣ್ಯಪ್ಪ ಮತ್ತು ಮಕ್ಕಳ ಭಾವಚಿತ್ರಗಳು ಕಾಣಬಹುದಾಗಿದೆ.

ಕರವಸೂಲಿಗೆ ಬಂದ ಶಾನುಭೋಗ,ಇಲ್ಲಿಂದ ಆರಂಭವಾಯಿತು ರಕ್ತಸಿಕ್ತ ಅದ್ಯಾಯ.

ಸ್ವತಂತ್ರ ಗ್ರಾಮವೆಂದು ಘೋಷಣೆ ಮಾಡಿಕೊಂಡು ತಮ್ಮದೆ ಸರ್ಕಾರ ರಚಿಸಿಕೊಂಡು ಆಡಳಿತ ಮಾಡುತ್ತಿದ್ದ ಈಸೂರು ಗ್ರಾಮಕ್ಕೆ ಕರವಸೂಲಿಗೆ ಬಂದ ಶಾನುಭೋಗರನ್ನು ಗ್ರಾಮಸ್ಥರು ಹೊರಗಟ್ಟುತ್ತಾರೆ.

28-10-42 ರಂದು ಸ್ವತಂತ್ರ ಗ್ರಾಮದ ಸರ್ಕಾರವನ್ನು ಹತ್ತಿಕ್ಕಲು ಪೊಲೀಸ್ ಇನ್ಸ್ ಪೆಕ್ಟರ್ ಕೆಂಚೆಗೌಡ ಹಾಗು ಅಮಲ್ದಾರ್ ಚನ್ನ ಕೃಷ್ಣಯ್ಯ ಗ್ರಾಮಕ್ಕೆ ಬಂದ ಸಂದರ್ಭದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗುತ್ತಾರೆ.

ಈ ಸನ್ನಿವೇಶಕ್ಕೆ ಸಾಕ್ಷಿಯಾಗುವುದು ಮತ್ತದೇ ವೀರಭದ್ರ ದೇವಸ್ಥಾನ.ಸ್ವತಂತ್ರ್ಯ ಸರ್ಕಾರದ ಬಗ್ಗೆ ಅವಹೇಳನಕಾರಿಯಾಗಿ ಇವರಿಬ್ಬರು ಮಾತನಾಡಿದರೆಂದು ಗ್ರಾಮಸ್ಥರು ಕೆರಳಿ ದೋಣ್ಣೆ ಕೋಲುಗಳಿಂದ ಬಡಿದು ಇವರನ್ನು ಸಾಯಿಸುತ್ತಾರೆ.

ನಂತರ ಬ್ರಿಟೀಷ್ ಸರ್ಕಾರ ಈ ಘಟನೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡು ಗ್ರಾಮಕ್ಕೆ ಪೊಲೀಸ್ ಪಡೆಯನ್ನು ನುಗ್ಗಿಸುತ್ತದೆ.

ನಂತರ ಹಳ್ಳಿಯಲ್ಲಿ ನಡೆದಿದ್ದು ಅಮಾನವೀಯ ಘಟನೆ. ಗ್ರಾಮದ ಜನತೆ ಮೇಲೆ ಪೊಲೀಸರು ಮನಸೋಯಿಚ್ಚೆ ದಾಳಿ ನಡೆಸಿ,ಕೇಸುಗಳನ್ನು ದಾಖಸಿ ಜೈಲಿಗಟ್ಟಿದರು. ಮನೆಗಳನ್ನು ಲೂಟಿ ಮಾಡಿದರು ಬೆಂಕಿ ಹಚ್ಚಿದರು.ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಐದು ಮಂದಿಗೆ ಗಲ್ಲುಶಿಕ್ಷೆ

ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ಜಿಲ್ಲಾಧಿಕಾರಿ ಹಾಗು ಮಿಲಿಟರಿ 11 ಜನರಿಗೆ ಮರಣದಂಡನೆ 24 ಜನರಿಗೆ ವಿವಿಧ ಬಗೆಯ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಈ ತೀರ್ಪಿನ ವಿರುದ್ಧ ಹಿರಿಯ ಕಾಂಗ್ರೇಸ್ ಮುಖಂಡರೊಡನೆ ಆರೋಪಿಗಳು ಹೈ ಕೋರ್ಟ್ ಗೆ ಅಪೀಲ್ ಹೋದರು.

ನ್ಯಾಯಾದೀಶ ಸರ್ ರೈಲಿಯವರು ಗುರಪ್ಪ,ಮಲ್ಲಪ್ಪ,ಶಂಕರಪ್ಪ,ಹಾಲಪ್ಪ,ಸೂರ್ಯನಾರಾಯಣಾಚಾರಿ ಎಂಬುವರಿಗೆ ಗಲ್ಲು ಶಿಕ್ಷೆ ವಿಧಿಸಿದರು.

ಹಾಲಮ್ಮ ಸಿದ್ದಮ್ಮ ಪಾರ್ವತಮ್ಮ ಎಂಬ ಮಹಿಳೆಯರಿಗೆ ಜೀವಾವದಿ ಶಿಕ್ಷೆ ವಿಧಿಸಿದರೆ ಮತ್ತೆ ಕೆಲವರಿಗೆ ಕಠಿಣ ಶಿಕ್ಷೆ ತೀರ್ಪು ವಿಧಿಸಿದರು.ನಾಡಿನ ಪತ್ರಿಕೆಗಳಲ್ಲಿ ಈ ತೀರ್ಪು ಪ್ರಕಟಗೊಂಡಾಗ ಕನ್ನಡಿಗರ ಹೃದಯಗಳು ಕಂಬನಿ ಮಿಡಿದವು.

1943 ನೇ ಏಪ್ರಿಲ್ 6,7,8 ನೇ ದಿನಗಳು ಕನ್ನಡ ನಾಡಿನ ಇತಿಹಾಸದಲ್ಲಿ ಮರೆಯಲಾರದ ದಿನಗಳು.ಕನ್ನಡ ನಾಡಿನ ವೀರಪರಂಪರೆ ತ್ಯಾಗಬಲಿದಾನಗಳಿಗೆ ಆ ಮೂರು ದಿನಗಳು ಸಾಕ್ಷಿಯಾಗಿದ್ದವು.

ಬ್ರಿಟೀಷ್ ಸರ್ಕಾರ ನೀಡಿದ ಮರಣದಂಡನೆಗೆ ಗುರಪ್ಪ, ಮಲ್ಲಪ್ಪ, ಶಂಕರಪ್ಪ ,ಹಾಲಪ್ಪ, ಸೂರ್ಯನಾರಾಯಣಾಚಾರಿ ಸ್ವಾತಂತ್ರ್ಯ ವೀರರು ನೇಣುಗಂಭಕ್ಕೇರಿ ಅಮರರಾದರು.ಅಚ್ಚರಿಯೆಂದರೆ ಸಾವನ್ನಪ್ಪಿದ ಐವರಿಗೂ 30 ರ ವಯಸ್ಸು ಮೀರಿರಲಿಲ್ಲ.

ಮುಂದೆ ಈ ಐವರ ವೀರಮರಣ ದೇಶದಲ್ಲಿ ಬಹುಚರ್ಚೆಯ ವಿಷಯವಾಗುತ್ತದೆ.

ಗಾಂಧೀಜಿಯವರು ಸಹ ತಮ್ಮ ಭಾಷಣದಲ್ಲೆಲ್ಲಾ ಈಸೂರು ಗ್ರಾಮದ ತ್ಯಾಗಬಲಿದಾನವನ್ನೇ ಪ್ರಧಾನ ವಿಷಯವನ್ನಾಗಿ ಪ್ರಸ್ಥಾಪಿಸುತ್ತಾರೆ.ನಮ್ಮ ತ್ಯಾಗದಿಂದ, ಮುಂದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆ.

ನಾವು ಗುಲಾಮ ರಾಜ್ಯದಲ್ಲಿದ್ದರೂ,ಮುಂದಿನ ಪೀಳಿಗೆ ಸ್ವತಂತ್ರ ರಾಜ್ಯದಲ್ಲಿರುತ್ತದೆ ಎಂಬ ನಂಬಿಕೆ ಗಲ್ಲಿಗೇರಿದ ಯುವಕಲ್ಲಿತ್ತು.

ಈಗಲೂ ಈಸೂರು ಗ್ರಾಮಕ್ಕೆ ಬೇಟಿ ನೀಡಿದರೆ ಇತಿಹಾಸದ ಪುಟ ತೆರೆದುಕೊಳ್ಳುತ್ತದೆ.ಅದೇ ವೀರಭದ್ರಸ್ವಾಮಿ ದೇವಸ್ಥಾನ,ಬಸವಣ್ಯಪ್ಪರ ದೊಡ್ಡ ಮನೆ.ತ್ಯಾಗ ಬಲಿದಾನ ಮಾಡಿದ ಹುತಾತ್ಮರ ಸ್ಮಾರಕ ಎಲ್ಲವನ್ನು ನೋಡುತ್ತಿದ್ದರೆ ನರನಾಡಿಗಳಲ್ಲಿ ದೇಶಭಕ್ತಿಯ ಸಂಚಲನವಾಗುತ್ತದೆ.

ಈಸೂರಿನ ಹೋರಾಟವನ್ನು ಮೇಲಕು ಹಾಕುವ ಲಾವಣಿ ಪದಗಳನ್ನು ಇಲ್ಲಿನ ಗ್ರಾಮಸ್ಥರು ಇಂದಿಗೂ ಜೀವಂತವಾಗಿಟ್ಟಿದ್ದಾರೆ.ಅವರು ಹಾಡುತ್ತಿದ್ದರೆ ಮೈನವಿರೇಳುತ್ತದೆ

ವೀರಭದ್ರೇಶ್ವರ ದೇವಸ್ಥಾನದ ಗಂಟೆಯನ್ನು ಸೀಜ್ ಮಾಡಿದ್ದರು ಬ್ರಿಟೀಷರು.

ಹೌದು ಅಂದು ಈಸೂರಿನ ಕ್ರಾಂತಿಕಾರಿ ಹೋರಾಟಕ್ಕೆ ಜನರನ್ನು ಸಜ್ಜುಗೊಳಿಸುತ್ತಿದ್ದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಗಂಟೆಯನ್ನು ಬ್ರಿಟೀಷರು ಅಂದು ಸೀಜ್ ಮಾಡಿದ್ದರು.

ಈಸೂರಿನ ಎಲ್ಲಾ ಘಟನೆಗೂ ಜನರಿಗೆ ದಾರಿದೀಪವೇ ಈ ಗಂಟೆಯಾಗಿದೆ.ಈ ಗಂಟೆಯನ್ನು ವಶಪಡಿಸಿಕೊಂಡಿದ್ದ ಬ್ರಿಟೀಷರು ಅದನ್ನು ಸಾಗರದ ಕೋರ್ಟ್ ಗೆ ಹಾಜರು ಪಡಿಸಿದ್ದರು.

ಅಂದಿನಿಂದ ಇಂದಿನವರೆಗೂ ಆ ಗಂಟೆ ಸಾಗರದ ಕೋರ್ಟ್ ನಲ್ಲಿದೆ ಎನ್ನಲಾಗುತ್ತಿದೆ. ಮತ್ತೆ ಕೆಲವರು ಹೈಕೋರ್ಟ್ ಗೋದಾಮಿನಲ್ಲಿದೆ ಎಂದು ಹೇಳಲಾಗುತ್ತಿದೆ.

ಈ ಗಂಟೆಯನ್ನು ತರಬೇಕೆಂಬುದು ಈಸೂರು ಗ್ರಾಮಸ್ಥರ ಇಚ್ಚೆಯಾಗಿದೆ. ಗಂಟೆಯನ್ನು ತಂದು ಮತ್ತೆ ಈಸೂರಿನ ವೀರಭದ್ರ ದೇವಸ್ಥಾನದಲ್ಲಿ ಐತಿಹಾಸಿಕ ಸಾಕ್ಷಿಯನ್ನಾಗಿ ಪ್ರತಿಷ್ಠಾಪಿಸಬೇಕೆಂಬ ಕನಸು ಇಂದಿಗೂ ಇದೆ.

ಗೀತಾ ಶಿವರಾಜ್ ಕುಮಾರ್ ಗೆ ಸೂರ್ತಿ ನೀಡಿದ ಗ್ರಾಮ

ಈಸೂರು ಗ್ರಾಮದ ಹೆಸರು ಕೇಳಿದ್ರೆ.,ಯಾರಿಗೆ ತಾನೆ ಇಲ್ಲಿನ ಹೋರಾಟದ ಕಿಚ್ಚು ಹಚ್ಚಿಸುವುದಿಲ್ಲ ಹೇಳಿ..,ಇದಕ್ಕೆ ನಟ ಶಿವರಾಜ್ ಕುಮಾರ್ ಕೂಡ ಹೊರತಾಗಿಲ್ಲ.

ಶಿವಣ್ಣ ತಮ್ಮ ಪತ್ನಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಪಕ್ಷದಿಂದ ಚುನಾವಣಾ ಅಖಾಡಕ್ಕಿಳಿದ ಸಂದರ್ಭವದು.

2014 ರಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆ ಶಿವಮೊಗ್ಗದಲ್ಲಿ ಕಾವು ಪಡೆದುಕೊಂಡಿತ್ತು.ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆಗೆ ಸ್ಪರ್ಧಿಸಿದರೆ, ಕಾಂಗ್ರೇಸ್ ನಿಂದ ಮಂಜುನಾಥ್ ಬಂಡಾರಿ ಸ್ಪರ್ಧಾಕಣದಲ್ಲಿದ್ದರು.

ಜೆಡಿಎಸ್ ಪಕ್ಷದಿಂದ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದರು.ಪತ್ನಿಗೆ ಸಾಥ್ ನೀಡುವ ಸಲುವಾಗಿ ಶಿವಣ್ಣ ಸುಮಾರು 25 ದಿನಗಳ ಕಾಲ ಶಿವಮೊಗ್ಗ ಜಿಲ್ಲಾಧ್ಯಂತ ಚುನಾವಣಾ ಪ್ರಚಾರ ನಡೆಸಿದ್ದರು.

ಈ ಸಂದರ್ಭದಲ್ಲಿ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ಈಸೂರು ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಗ್ರಾಮದ ಇತಿಹಾಸ ತಿಳಿದು ಪುಳಕಿತರಾಗಿದ್ದರು.ಈಸೂರು ಗ್ರಾಮದ ಹೋರಾಟ ಶಿವಣ್ಣನಿಗೆ ಸ್ಪೂರ್ತಿ ನೀಡಿತು.

ಇದೇ ಸಂದರ್ಭದಲ್ಲಿ ಈಸೂರು ಗ್ರಾಮದ ಹೋರಾಟವನ್ನು ಸಾಕ್ಷ್ಯ ಚಿತ್ರ ಮಾಡಲು ಅಣಿಯಾಗಿದ್ದರು ವಿ.ಪಿ ಬಳಿಗಾರ್.

ಬಳಿಗಾರ್ ಕೂಡ ಶಿಕಾರಿಪುರದಲ್ಲಿ ಜೆಡಿಎಸ್ ಪಕ್ಷದಿಂದ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು.

ನಿವೃತ್ತ ಕೆ.ಎ.ಎಸ್ ಅಧಿಕಾರಿಯಾಗಿರುವ ಹೆಚ್.ಬಳಿಗಾರ್ ಗೆ ಈಸೂರು ಗ್ರಾಮದ ಹೋರಾಟವನ್ನು ಡಾಕ್ಯುಮೆಂಟರಿ ಮಾಡುವ ಇಚ್ಚೆಗೆ ಮತ್ತಷ್ಟು ಸ್ಪೂರ್ತಿ ನೀಡಿದವರು ಶಿವಣ್ಣ…ಸಾಕ್ಷ್ಯಚಿತ್ರವನ್ನು ಸಿನಿಮಾ ಮಾಡಲು ಬಳಿಗಾರ್ ಯೋಚಿಸಿದಾಗ,,,ಶಿವಣ್ಣ ಹಿಂದೆ ಮುಂದೆ ನೋಡದೆ ಕೇವಲ ಕಥೆಯ