24 ಸಾವಿರ ಕಿ.ಮೀ ಜರ್ನಿ, 10 ರಾಜ್ಯ, 20 ಜೈಲು! ಒಂದುವರೆ ವರ್ಷ! ಮಾರ್ಕೆಟ್ ಲೋಕಿ ನಾ ಹಿಡಿದ್ದಿದ್ದೇಗೆ?

Do you know how shivamogga police tried to nab market loki?

24 ಸಾವಿರ ಕಿ.ಮೀ ಜರ್ನಿ, 10 ರಾಜ್ಯ, 20 ಜೈಲು! ಒಂದುವರೆ ವರ್ಷ! ಮಾರ್ಕೆಟ್ ಲೋಕಿ ನಾ ಹಿಡಿದ್ದಿದ್ದೇಗೆ?
Do you know how shivamogga police tried to nab market loki?

ಮಲೆನಾಡಿನ ಪಾತಕ ಲೋಕದಲ್ಲಿ ಒಂದಿಷ್ಟು ಕುಖ್ಯಾತಿಯನ್ನ ಆತ ತನ್ನದಾಗಿಸಿಕೊಂಡಿದ್ದ. ಆ ನಟೋರಿಯಸ್ ರೌಡಿಯನ್ನು ಹಿಡಿಯುವುದು ಶಿವಮೊಗ್ಗ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.ಮಾರ್ಕೇಟ್ ಗಿರಿಯ ಕೊಲೆಯಾದ ಬೆನ್ನಲ್ಲೆ, ಆತ ಎಸ್ಕೇಪ್ ಆಗಿದ್ದ. ಒಂದುವರೆ ವರ್ಷ ಕಳೆದರೂ ಆತನ ಇರುವಿಕೆಯ ಒಂದು ಕ್ಲೂ ಕೂಡ ಪೊಲಿಸರಿಗೆ ಸಿಕ್ಕಿರಲಿಲ್ಲ. ಆ ನಟೋರಿಯಸ್ ರೌಡಿ ಹಿಡಿಯಲು ಪೊಲೀಸರು ಸವೆಸಿದ ಹಾದಿ ಬರೋಬ್ಬರಿ ಇಪ್ಪತ್ತು ನಾಲ್ಕು ಸಾವಿರ ಕಿಲೋಮೀಟರ್! ಅಥವಾ ಅದಕ್ಕಿಂತ ಹೆಚ್ಚು.

ಒಟ್ಟಾರೆ ಸುತ್ತಿದ್ದು 10 ರಾಜ್ಯ.

ಆತನ ನೆಟ್ ವರ್ಕ್ ಇರುವ ರೌಡಿಗಳನ್ನು ಟಚ್ ಮಾಡಲು ಭೇಟಿ ನೀಡಿದ್ದು  20 ಕ್ಕೂ ಹೆಚ್ಚು ಜೈಲುಗಳನ್ನು.

ಮೂರು ಎಸ್​ಪಿಗಳು ಬದಲಾದರೂ ಆ ಟ್ರಮಂಡಸ್ ರೌಡಿಯ ಜಾಡು ಭೇದಿಸಲು ಸಾಧ್ಯವಾಗಿರಲಿಲ್ಲ.

ಇಷ್ಟೆಲ್ಲದರ ಹೊರತಾಗಿಯು ಆ ರೌಡಿ ಸಿಗುತ್ತಾನೆ. ಶಿವಮೊಗ್ಗ ಪೊಲೀಸರು ಆತನನ್ನ ಬಂಧಿಸುತ್ತಾರೆ.  ಈ ಕಾರ್ಯಾಚರಣೆ  ಕ್ರೈಂ ರೆಕಾರ್ಡ್​ನಲ್ಲಿಯೇ ದೊಡ್ಡ ದೊಡ್ಡ ಅಕ್ಷರಗಳಲ್ಲಿ ದಾಖಲಾಗುತ್ತದೆ. 

ಅಂದಹಾಗೆ ಆ ರೌಡಿಯ ಹೆಸರು ಮಾರ್ಕೆಟ್ ಲೋಕಿ

ಲೋಕಿಯ ಜಾಡನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದೇ ಒಂದು ರೋಚಕ ಕಥೆ.

ಮಲೆನಾಡಿನ ರಕ್ತ ಚರಿತ್ರೆಯಲ್ಲಿ ಕೊಲೆಯಾದವರ ಸಾಲಿನಲ್ಲಿ ಹಂದಿ ಅಣ್ಣಿಯ ಹತ್ಯೆಗಿಂತಲೂ ಹೆಚ್ಚು ಸದ್ದು ಮಾಡಿದ್ದು ಶಿವಮೊಗ್ಗದ ಮಾರ್ಕೇಟ್ ಗಿರಿ ಕೊಲೆ ಕೇಸ್.

ಮಾರ್ಕೇಟ್ ಗಿರಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದು  ರೌಡಿ ಲೋಕಿ ಅಲಿಯಾಸ್ ಮಾರ್ಕೇಟ್ ಲೋಕಿ ಅಂಡ್ ಗ್ಯಾಂಗ್ ಎಂದು ಕೇಸ್​ ಫೈಲ್​ ಆಗಿತ್ತು. 

ಕೌಟುಂಬಿಕ ದ್ವೇಷ ಎರಡು ಕುಟುಂಬಗಳ ವಂಶದ ಕುಡಿಗಳನ್ನು ಸರಣಿ ರೂಪದಲ್ಲಿ ಬಲಿಪಡೆಯುತ್ತಿತ್ತು.

ಲೋಕಿ ಮತ್ತು ಗಿರಿ ಕುಟುಂಬದ ಕೌಟುಂಬಿಕ ದ್ವೇಷದಲ್ಲಿ  ಮಾರ್ಕೇಟ್ ಗಿರಿ ಕೊಲೆಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ, ಲೋಕಿಯ ಸಹೋದರ ಮಾರ್ಕೇಟ್ ಗೋವಿಂದನ ಕೊಲೆಯಾಗಿತ್ತು.

ಹಿಡಿಯಲೇ ಬೇಕು ಎಂದು ಪಣ ತೊಟ್ಟಿದ್ದರು ಶಿವಮೊಗ್ಗ ಪೊಲೀಸ್

ಇದರ ನಡುವೆ ಲೋಕಿ ಮತ್ತೆ ಪ್ರತೀಕಾರಕ್ಕೆ ಸ್ಕೆಚ್ ಹಾಕಿದ್ದನೆಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಹಿಡಿದು ಅಂದರ್ ಮಾಡಬೇಕು ಎಂದು ಪೊಲೀಸರು ಪಣ ತೊಟ್ಟಿದ್ದರು.

11-02-20 ರಂದು ತಮಿಳುನಾಡಿನ ಕೊಯಮತ್ತೂರಿನ ತಿರುಪೂರು ಗ್ರಾಮದಲ್ಲಿ ಮನೆಯೊಂದರಲ್ಲಿ ಆಶ್ರಯ ಪಡೆದಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಾರ್ಕೇಟ್ ಲೋಕಿಯನ್ನು ಬಂಧಿಸಿದ್ದರು.

ಪೊಲೀಸರಿಗೆ ಕ್ಲೂ ಕೊಟ್ಟು ದಾರಿ ತಪ್ಪಿಸ್ತಿದ್ದ

ಆದರೆ, ಈ ಬಂಧನ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ಸಮಯ ಬಹಳಷ್ಟು ಕಳೇದುಹೋಗಿತ್ತು.  ಒಂದುವರೆ ವರ್ಷದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ಬಂದಿದ್ದ ಲೋಕಿ. ತಾನಿರುವ ಜಾಗಗಳಲ್ಲಿ ಎವಿಡೆನ್ಸ್ ಗಳನ್ನು ಬಿಟ್ಟು ಹೋಗುತ್ತಿದ್ದ ಬಿಟ್ಟರೆ. ತನ್ನ ಜಾಡನ್ನು  ಆತ ಎಲ್ಲೂ ಬಿಟ್ಟುಕೊಡುತ್ತಿರಲಿಲ್ಲ.

ಸ್ಥಳದಲ್ಲಿ ದೊರೆತ ಎವಿಡೆನ್ಸ್ ಗಳನ್ನು ಪೊಲೀಸರು ನಂಬುವಂತೆ ಮಾಡುತ್ತಿದ್ದ ಆತನ ಐಡಿಯಾಗಳಿಗೆ ಪೊಲೀಸರು ದಿಕ್ಕುತಪ್ಪುತ್ತಿದ್ದರು.  

 ಮೆಂಟಲ್ ಸೀನಾನ ಕೊಲೆ ಕೇಸಿನಲ್ಲಿ ಲೋಕಿ ತಪ್ಪಿಸಿಕೊಂಡಾಗ. ಶಿವಮೊಗ್ಗ ಪೊಲೀಸ್ರು.ಆತನ ಹೆಡೆಮುರಿ ಕಟ್ಟೋದಕ್ಕೆ ದೊಡ್ಡ ಸಾಹಸವನ್ನು ಮಾಡಿ ಸಿನಿಮೀಯ ಮಾದರಿಯಲ್ಲಿ ಹಿಡಿದುಕರೆತಂದಿತ್ತು.

ಈ ಕಾರಣಕ್ಕಾಗಿಯೇ  ಮಾರ್ಕೇಟ್ ಗಿರಿ ಕೊಲೆ ಮಾಡಿ ನಾಪತ್ತೆಯಾಗಿದ್ದ ಲೋಕಿ ಮತ್ತೆಂದು ಪೊಲೀಸರಿಗೆ ಸಿಗಬಾರದೆಂದು ಬಹಳ ತಂತ್ರಗಳನ್ನೇ ಹೂಡಿದ್ದ

ಒಂದುವರೆ ವರ್ಷ ಕೈಗೆ ಸಿಗದ ಲೋಕಿ

11-09-2018 ರಂದು ಮಾರ್ಕೇಟ್ ಗಿರಿಯನ್ನು ಬರ್ಬರವಾಗಿ ಹತ್ಯೆಗಿದು ಪರಾರಿಯಾಗಿದ್ದ ಲೋಕಿ ಒಂದುವರೆ ವರ್ಷ ಯಾರಿಗೂ ಸುಳಿವು ನೀಡಿರಲಿಲ್ಲ.

ಎಸ್ಪಿ ಶಾಂತರಾಜು ಹಾಗು ಅಡಿಷನಲ್ ಎಸ್ಪಿ ಶೇಖರ್ ರವರ ಮಾರ್ಗದರ್ಶನದಲ್ಲಿ ಡಿಸಿಬಿ ಮತ್ತು ದೊಡ್ಡಪೇಟೆ ಪೊಲೀಸರು ಹಗಲು ರಾತ್ರಿ ಲೋಕಿ  ಬೆನ್ನಹಿಂದೆ ಬಿದ್ದಿದ್ರು.

ಲೋಕಿ ಶತಾಯಗತಾಯ ಪೊಲೀಸರಿಗೆ ಸಿಕ್ಕಬೀಳಬಾರದೆಂದು ಪೂರ್ವಯೋಜಿತವಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡೇ ಎಸ್ಕೇಪ್ ಆಗಿದ್ದರಿಂದ, ಆತನ ಬಂಧನ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.

ಕೊಲೆ ನಂತರ ಮೊಬೈಲ್ ಪೋನ್ ಹಾಗು ಆನ್ ಲೈನ್ ಟ್ರಾಂಜಾಕ್ಷನ್, ಅಕೌಂಟ್ ಟ್ರಾಂಜಕ್ಷನ್​ಗೆ ವಿದಾಯ ಹೇಳಿದ್ದ ಲೋಕಿ, ಏಕಾಂಗಿಯಾಗಿ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸ್ತಾ ಆರಾಮಾಗಿರೋ ಮಾಹಿತಿ ಮಾತ್ರ ಪೊಲೀಸ್ರಿಗೆ ಸಿಕ್ಕಿತ್ತು.

 ಕೇವಲ ಎರಡೆರಡು ದಿನಗಳ ಅಂತರದಲ್ಲಿ ತಪ್ಪಿಸಿಕೊಳ್ತಿದ್ದ ಲೋಕಿ

ಕರ್ನಾಟಕ, ಕೇರಳ ತಮಿಳುನಾಡು, ಆಂದ್ರ ಪ್ರದೇಶ, ಮಹಾರಾಷ್ಟ್ರ  ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಏಕಾಂಗಿಯಾಗಿ ಸಂಚರಿಸುತ್ತಿದ್ದ. ಕೊನೆಯದಾಗಿ ಆತನ ಜಾಡು ಕಠ್ಮಂಡುವಿನಲ್ಲಿ ಪತ್ತೆಯಾಗಿತ್ತು.

ಪೊಲೀಸರಿಗೂ ಆತನಿಗೂ ಕೇವಲ ಎರಡೆರೆಡು ದಿನಗಳ ಅಂತರದ ಗ್ಯಾಪ್ ಇರ್ತಿತ್ತು.

ಲೋಕಿಯ ಬಂಧನಕ್ಕೆ ಶಿವಮೊಗ್ಗ ಡಿಸಿಬಿ ಪೊಲೀಸರು ದೇಶಾದ್ಯಂತ ಸಂಚರಿಸಿದಂತಾಗಿದ್ದು, ಬರೋಬ್ಬರಿ 24 ಸಾವಿರಕ್ಕೂ ಅಧಿಕ ಕಿಲೋಮೀಟರ್  ಸುತ್ತಿದ್ದರು.

ಲೋಕಿ ಕಠ್ಮಂಡುವಿಗೆ ಹೋದ..ಶ್ರೀಲಂಕಾಕ್ಕೆ ಹೋದ

ಲೋಕಿ ಕಠ್ಮಂಡುವಿಗೆ ಹೋದ..ಶ್ರೀಲಂಕಾಕ್ಕೆ ಹೋದ ಎಂಬುದನ್ನು ಪೊಲೀಸರಿಗೆ ಮನವರಿಕೆ ಮಾಡಿಕೊಡಲು, ಆತ ತನ್ನ ಜಾಡನ್ನು ಅಲ್ಲಲ್ಲಿ ಬಿಟ್ಟು ಹೋಗುತ್ತಿದ್ದ.

ಮಾರ್ಕೇಟ್ ಗಿರಿ ಕೊಲೆ ಪ್ರತಿಕಾರದ ಭಾಗವಾಗಿ ಕರಾಬ್ ಶಿವು ಸಹೋದರರು ಲೋಕಿ ಸಹೋದರ ಮಾರ್ಕೇಟ್ ಗಿರಿಯನ್ನು ಬರ್ಬರವಾಗಿ ಕೊಲೆ ಮಾಡಿದಾಗ, ಅಣ್ಣನ ಕೊಲೆಗೆ ಪ್ರತಿಕಾರಕ್ಕಾಗಿ ಕಾಯುತ್ತಿದ್ದ ಆತ ಶರಣಾಗುವ ಯಾವುದೇ ಲಕ್ಷಣಗಳಿರಲಿಲ್ಲ.

ಭಯ..ಭಯ

ಒಂದೆಡೆ ಎನ್ಕೌಂಟರ್ ಭಯ, ಮತ್ತೊಂದೆಡೆ ಎದುರಾಳಿ ರೌಡಿಗಳಿಂದ ಕೊಲೆಯಾಗುವ ಭೀತಿಯಲ್ಲಿದ್ದ ಲೋಕಿ, ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ತಿರಲಿಲ್ಲ,

ಮೊಬೈಲ್ ಸ್ವಿಚ್ ಆಫ್..ವಾಟ್ಸಾಪ್ ಕಾಲ್ ಗಳನ್ನು ಮಾಡ್ತಿದ್ದ ಲೋಕಿ ನಂತರದಲ್ಲಿ ಅದಕ್ಕೂ ವಿದಾಯ ಹೇಳಿದೆ.

ಸಿಮ್ ಗಳನ್ನು ಸರಣಿ ರೂಪದಲ್ಲಿ ಬದಲಿಸುತ್ತಿದ್ದ. ತನ್ನ ಸಹಚರರ ಸಂಪರ್ಕವನ್ನೇ ತೊರೆದಿದ್ದ ಲೋಕಿ. ಕೊನೆಯದಾಗಿ ತಮಿಳುನಾಡಿನ ಕೊಯಮತ್ತೂರಿನ ಬಳಿಯ ತಿರುಪೂರು ಬಳಿ ಮನೆಯನ್ನು ಮಾಡಿಕೊಂಡಿದ್ದ.

ಆನ್ ಲೈನ್ ಶಾಪಿಂಗ್ ಮಾಡಲು ಹೋಗಿ ಸಿಕ್ಕಿಬಿದ್ದ ಲೋಕಿ.

ಅಂದು ಯಾವುದೇ ಮೊಬೈಲ್ ಸಿಡಿಆರ್ ಗೆ ಮೊರೆಹೋಗದ ಶಿವಮೊಗ್ಗ ಪೊಲೀಸರು.ಲೋಕಿಯ ಅಕೌಂಟ್ ಮೇಲೆ ಕಣ್ಣು ನೆಟ್ಟು.ಆರೋಪಿ ಪತ್ತೆಗೆ ಬಲೆಬೀಸಿದ್ದರು.

ಲೋಕಿ ಎಲ್ಲಿ ಯಾವಾಗ ಎಟಿಎಂ ನಲ್ಲಿ ಹಣ ಡ್ರಾ ಮಾಡುತ್ತಾನೆ.ಅದು ಯಾವ ಊರು ಎಂಬ ಜಾಡಿನ ಮೇಲೆಯೇ ನಾಲ್ಕು ತಂಡಗಳು ಕಾರ್ಯಾಚರಣೆ ಮಾಡಿದ್ದವು.

ಪೊಲೀಸರು ತನ್ನ ಬೆನ್ನು ಬಿದ್ದಿದ್ದಾರೆಂದು ಅರಿತಿದ್ದ ಲೋಕಿ ಎಲ್ಲೂ ಮೊಬೈಲ್ ಬಳಸುತ್ತಿರಲಿಲ್ಲ.ಆದರೆ ಪೊಲೀಸರು ಆತನ ಅಕೌಂಟ್​ಗಳ ಹಿಂದೆ ಬಿದ್ದಿದ್ದರು,

ಲೋಕಿ ಯಾವ ಹೆಸರಿನಲ್ಲಿ ಗ್ರಾಮದಲ್ಲಿ ವ್ಯವಹರಿಸುತ್ತಿದ್ದಾನೆಂದು ಪೊಲೀಸರು ಖಾತರಿ ಮಾಡಿಕೊಳ್ಳೋದಕ್ಕೆ, 

ಗ್ಯಾಸ್ ಕನೆಕ್ಷನ್, ಮೊಬೈಲ್,  ಆನ್ ಲೈನ್ ಟ್ರಾಂಜಾಕ್ಷನ್, ಆನ್ ಲೈನ್ ಕೋರಿಯರ್ ಸರ್ವಿಸ್ ನಂತ ವ್ಯವಸ್ಥೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

ಆಗ ದಾಸ ಎಂಬ ಹೆಸರಿನಲ್ಲಿ  ಆನ್​ಲೈನ್​ನಲ್ಲಿ ಕೋರಿಯರ್ ಸರ್ವಿಸ್ ಹೋಗುತ್ತಿರುವ ಮಾಹಿತಿ ಖಚಿತವಾಗುತ್ತೆ. ಪೊಲೀಸ್ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಹೆಚ್ಚು ಅಲರ್ಟ್ ಆಗ್ತಾರೆ.

ಇತ್ತ ಶಿವಮೊಗ್ಗದಿಂದ ಎಸ್ಪಿ ಶಾಂತರಾಜು ಮತ್ತು ಅಡಿಷನಲ್ ಎಸ್ಪಿ ಶೇಖರ್,  ತನಿಖಾ ತಂಡಕ್ಕೆ ಬೇಸಿಕ್ ಪೊಲೀಸಿಂಗ್ ಮಾಡಿಯೇ ಆರೋಪಿಯನ್ನು ಹಿಡಿಯಬೇಕು ಎಲ್ಲೂ ಎಚ್ಚರ ತಪ್ಪುವಂತಿಲ್ಲ ಎಂದು ಸೂಚನೆ ನೀಡ್ತಾರೆ.

ಡೆಲಿವರಿ ಬಾಯ್ ಆಗಿ ಬಾಗಿಲು ತಟ್ಟುತ್ತಾರೆ ಪೊಲೀಸರು

ಲೋಕಿ ದಾಸ ಎಂಬ ಹೆಸರಿನಲ್ಲಿ ಪ್ಲಿಪ್ ಕಾರ್ಟ್ ನಲ್ಲಿ ಪೆಪ್ಪರ್ ಸ್ಪ್ರೇಯೊಂದನ್ನು ಬುಕ್ ಮಾಡಿರುತ್ತಾನೆ.ದಾಸನಿಗೆ ಇವತ್ತು ಬುದ್ದಿ ಕಲಿಸಲೇಬೇಕೆಂದು ಪೊಲೀಸರು ಡೆಲವರಿ ಬಾಯ್ ರೂಪದಲ್ಲಿ ಹೋಗಿ, ಲೋಕಿ ಇದ್ದ ಮನೆಯ ಬೆಲ್ ಬಡಿಯುತ್ತಾರೆ.

ಮುಂದಿನದ್ದು ಅರೆಸ್ಟ್ ಸೀನ್​.. ಕೇವಲ ಅಕೌಂಟ್ ಟ್ರಾಂಜೆಕ್ಷನ್ ಮೇಲೆ ಕಣ್ಣು ನೆಟ್ಟು ರೌಡಿಯೊಬ್ಬನನ್ನು ಹೇಗೆ ಭೇಟೆಯಾಡಬಹುದು ಎಂದು ಶಿವಮೊಗ್ಗ ಪೊಲೀಸರು ಅವತ್ತು ತೋರಿಸಿಕೊಟ್ಟಿದ್ದರು.

ಶಿವಮೊಗ್ಗ ಪೊಲೀಸರ ಈ ಅಕೌಂಟ್​ ಡಿಟೇಲ್ಸ್​ ಇನ್ವೆಸ್ಟಿಗೇಷನ್​ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ.  

ಲಾಸ್ಟ್​ ಬೈಟ್​ : ರಾಜ್ಯದಲ್ಲಿ ಹೆಸರು ತಂದುಕೊಟ್ಟಿತ್ತು ಈ ಕೇಸ್​

ಶಿವಮೊಗ್ಗ ಪೊಲೀಸರಿಗೆ ಹೆಸರು ತಂದುಕೊಟ್ಟ ತನಿಖಾ ಪ್ರಕರಣ ಇದಾಗಿತ್ತು.

ಅಷ್ಟೆಅಲ್ಲದೆ ಈ ಪ್ರಕರಣವನ್ನು ಅಧಿಕಾರಿಗಳ ಟ್ರೈನಿಂಗ್​ನಲ್ಲಿಯು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿದೆ. ಈ ಕಾರ್ಯಾಚರಣೆ ಮೂಲಕ ಪೊಲೀಸರು ಲೋಕಿಯ ಕ್ರೈಂಗಳನ್ನು ತಪ್ಪಿಸಿದ್ರು.

ಆದರೆ, ಶಿವಮೊಗ್ಗದಲ್ಲಿ ನಡೆವ ರೌಡಿ ಕೊಲೆಗಳನ್ನು ತಪ್ಪಿಸಲು ಸಾಧ್ಯವಾಗದು, ಯಾಕೆಂದರೆ, ಮನಸ್ಸುಗಳಲ್ಲಿ ದ್ವೇಷ ಹಾಗೂ ಸ್ವಾರ್ಥ  ನೆತ್ತರನ್ನೆ ಬಯಸುತ್ತಿರುತ್ತದೆ.

ಜೆ.ಪಿ.