ಹೊಸನಗರ ಬಸ್‌ ನಿಲ್ದಾಣದಲ್ಲಿ ಭೇಟಿಯಾದ Teddybear | ಇಲ್ಲೊಂದು ವಿಶೇಷವಿದೆ

Meet Teddybear at Hosanagar Bus Stand There is something special here. Hosnagar Taluk, Hosnagar News,

ಹೊಸನಗರ ಬಸ್‌ ನಿಲ್ದಾಣದಲ್ಲಿ ಭೇಟಿಯಾದ Teddybear | ಇಲ್ಲೊಂದು ವಿಶೇಷವಿದೆ
Meet Teddybear at Hosanagar Bus Stand, There is something special here. Hosnagar Taluk, Hosnagar News,

SHIVAMOGGA | MALENADUTODAY NEWS | Apr 27, 2024  

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರಿ ಸಂಸ್ಥೆಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಪಾಲಿಕೆ, ನಗರಸಭೆ, ಪುರಸಭೆ ಹೀಗೆ ಸ್ಥಳೀಯ ಆಡಳಿತಗಳು ನಾನಾ ರೀತಿಯ ಪ್ರಯತ್ನಗಳನ್ನು ನಡೆಸುತ್ತವೆ. ಸ್ವೀಪ್‌ ಸಮಿತಿಗಳು ಜನರೊಂದಿಗೆ ಬೆರೆತು ಈ ಹಿಂದೆ ಕಡಿಮೆ ಮತದಾನವಾದ ಪ್ರದೇಶಗಳಲ್ಲಿ  ಹೆಚ್ಚಿನ ಜಾಗೃತಿ ಮೂಡಿಸುವ ಪ್ರಯತ್ನಗಳನ್ನ ಮಾಡುತ್ತವೆ. ಆದರೆ ಇಂತಹದ್ದೊಂದು ಪ್ರಯತ್ನವನ್ನು ಯಾವೊಂದು ನಿರೀಕ್ಷೆಯಿಲ್ಲದ ಖಾಸಗಿ ವ್ಯಕ್ತಿಗಳು ವಿಭಿನ್ನವಾಗಿ ಮಾಡುತ್ತಿರುವ ದೃಶ್ಯವೊಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ಕಂಡು ಬಂದಿದೆ. 

ಹೊಸನಗರ ತಾಲ್ಲೂಕಿನ ವಿವಿದೆಡೆ ಟೆಡ್ಡಿಬೇರ್‌ನ ಡ್ರೆಸ್‌ ಹಾಕಿಕೊಂಡ ವ್ಯಕ್ತಿಗಳು ನಮ್ಮ ಮತ ನಮ್ಮ ಭಾರತದ ಭವಿಷ್ಯ, ಮತದಾನದಲ್ಲಿ ಭಾಗವಹಿಸೋಣ, ಪ್ರಜಾಪ್ರಭುತ್ವನ್ನು ಬೆಂಬಲಿಸೋಣ ಎಂಬ ಬಿತ್ತಿಪತ್ರ ಹಿಡಿದು ಪ್ರಚಾರ ನಡೆಸ್ತಿದ್ದಾರೆ. ನೋಡೋಕೆ ಕ್ಯೂಟ್‌ ಆಗಿ ಕಾಣುವ ಟೆಡ್ಡಿಬೇರ್‌ನನ್ನ ನೋಡುವ ಜನರು ಅದರ ಹತ್ತಿರ ಬಂದು ಮಾತನಾಡಿಸುತ್ತಿದ್ದಾರೆ. ಮತದಾನದ ಜಾಗೃತಿ ವಿಚಾರ ತಿಳಿಯುವ ಜೊತೆಗೆ ಟೆಡ್ಡಿ ಜೊತೆಗೆ ಸೆಲ್ಫಿ ಗಿಟ್ಟಿಸಿಕೊಳ್ತಿದ್ದಾರೆ. 

ಜಾಗೃತಿ ಮೂಡಿಸುವ ಕಾರ್ಯಕ್ರಮವಾದರೂ, ಅದಕ್ಕೊಂದು ಟ್ವಿಸ್ಟ್‌ ಇಮೇಜ್‌ ಕೊಟ್ಟು, ಇವೆಂಟ್‌ನ್ನ ಆಕರ್ಷಣೀಯವಾಗಿ ಮಾಡಿದ ಪ್ರಯತ್ನದ ಫಲವಾಗಿ ಟೆಡ್ಡಿಬೇರ್‌ ಮತಜಾಗೃತಿಗೆ ವಿಶೇಷ ರೆಸ್ಪಾನ್ಸ್‌ ಬರುತ್ತಿದೆಯಂತೆ. ಅಂದಹಾಗೆ ಇದರ ಹಿಂದಿರೋದು ಟೆಡ್ಡಿ ವೈಬ್ಸ್ ಹೆಸರಿನ instagram ತಂಡ