ಬೆಂಗಳೂರು-ತಾಳಗುಪ್ಪ ಟ್ರೈನ್​ಗೆ ಸಿಲುಕಿ ಯುವಕ ಸಾವು! ನಡೆದಿದ್ದೇನು?

A young man died after being hit by the Bangalore-Talaguppa train near Arasalu in Hosanagar taluk! what happened

ಬೆಂಗಳೂರು-ತಾಳಗುಪ್ಪ ಟ್ರೈನ್​ಗೆ ಸಿಲುಕಿ ಯುವಕ ಸಾವು! ನಡೆದಿದ್ದೇನು?
Bangalore-Talaguppa train , Arasalu ,Hosanagar

Shivamogga Mar 9, 2024   Bangalore-Talaguppa train , Arasalu ,Hosanagar  ವಿದ್ಯಾರ್ಥಿನಿಯೊಬ್ಬಳು ಮೈಸೂರು-ತಾಳಗುಪ್ಪ ಟ್ರೈನ್​ಗೆ   ತಲೆಕೊಟ್ಟು ಸಾವನ್ನಪ್ಪಿರುವ ಬೆನ್ನಲ್ಲೆ ಅಂತಹುದ್ದೆ ಇನ್ನೊಂದು ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅರಸಾಳುವಿನಲ್ಲಿ ನಡೆದಿದೆ 

ಅರಸಾಳು ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ರಿಪ್ಪನ್‌ಪೇಟೆ  ಸಮೀಪ ಸಿಗುವ ಅರಸಾಳು ಗ್ರಾಮದ ಅರಣ್ಯ ಇಲಾಖೆ ಕಛೇರಿಯ ಮುಂಭಾಗದ ರೈಲ್ವೆ ಹಳಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಅಲ್ಲದೆ ಮೃತರು ಯಾರು ಎಂಬುದು ಸಹ ಗೊತ್ತಾಗಿಲ್ಲ.  

ಇವತ್ತು  ಬೆಳಿಗ್ಗೆ 7.45 ಕ್ಕೆ ಬರುವ  ಬೆಂಗಳೂರು - ತಾಳಗುಪ್ಪ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಘಟನೆಯಲ್ಲಿ ವ್ಯಕ್ತಿಯ ಅಂಗಾಂಗಗಳು ಛಿದ್ರವಾಗಿದ್ದು ಗುರುತು ಸಿಗುತ್ತಿಲ್ಲ. ಸ್ಥಳೀಯರು ಇದೊಂದು ಆತ್ಮಹತ್ಯೆ ಪ್ರಕರಣ ಇರಬಹುದು ಎಂದು ಶಂಕಿಸಿದ್ದಾರೆ.