ಶಿವಪ್ಪನಾಯಕ ಸರ್ಕಲ್‌ ಬಳಿ ಸಿಟಿ ಬಸ್‌ಸ್ಟಾಪ್‌ನ ಬಳಿ ಅಪರಿಚಿತ ವ್ಯಕ್ತಿ ಸಾವು | ಗುರುತುಪತ್ತೆಗೆ ನೆರವಾಗಿ

An unidentified person died near city bus stop near Shivappanayaka circle Help with identification. Shimoga News, Shivappanayaka Circle Shimoga, City Bus Bildana, Ameer Ahmed Circle, Doddapet Police Station

ಶಿವಪ್ಪನಾಯಕ ಸರ್ಕಲ್‌ ಬಳಿ ಸಿಟಿ ಬಸ್‌ಸ್ಟಾಪ್‌ನ ಬಳಿ ಅಪರಿಚಿತ ವ್ಯಕ್ತಿ ಸಾವು | ಗುರುತುಪತ್ತೆಗೆ ನೆರವಾಗಿ
Shivappanayaka circle ‌,Shimoga News, Shivappanayaka Circle Shimoga, City Bus Bildana, Ameer Ahmed Circle, Doddapet Police Station

SHIVAMOGGA | MALENADUTODAY NEWS | May 4, 2024    ‌ 

ಅನಾಮಿಕ ಮೃತ ವ್ಯಕ್ತಿಯ ವಾರಸ್ಸುದಾರರ ಪತ್ತೆಗೆ ಮನವಿ

ಏ.29 ರಂದು ಶಿವಮೊಗ್ಗ ನಗರದ ಎನ್ ಶಿವಪ್ಪ ನಾಯಕ ಸರ್ಕಲ್ ಹತ್ತಿರದ ಸಿಟಿ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಮಲಗಿದ್ದ  ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ಪುರುಷ ಸಾವನ್ನಪ್ಪಿದ್ದಾನೆ. ಆತನನ್ನ  ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಆತ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಸದ್ಯ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. 

ಮೃತನು ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, 05.06 ಅಡಿ ಎತ್ತರವಿರುತ್ತಾರೆ. ಬಲ ಕಿಬ್ಬೊಟ್ಟೆಯ ಮೇಲೆ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. ಮೃತನು ಸುಮಾರು 02 ಇಂಚು ಉದ್ದದ ಬಿಳಿ ಕಪ್ಪು ಮಿಶ್ರಿತ ಕೂದಲು ಇದೆ.  ಮೈಮೇಲೆ ಕಪ್ಪು, ಬಿಳಿ, ಕೆಂಪು ಮಿಶ್ರಿತ  ಬಣ್ಣದ ಅರ್ಧ ತೋಳಿನ ಟೀಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಟವೆಲ್ ಧರಿಸಿರುತ್ತಾನೆ. ಈ ಅಪರಿಚಿತ ಮೃತನ ವಾರಸುದಾರರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಮಾಹಿತಿಯನ್ನು ನೀಡಲು ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಫೋನ್‌ ನಂಬರ್‌  08182 -261414 ಅಥವಾ 9611761255 ಗಳನ್ನು ಸಂಪರ್ಕಿಸಲು ಕೋರಿದೆ.      

Shivappanayaka circle ‌,Shimoga News, Shivappanayaka Circle Shimoga, City Bus Bildana, Ameer Ahmed Circle, Doddapet Police Station