BREAKING NEWS : ಏಳು ಕೋಟಿಯ ರೇಡ್​ ಬೆನ್ನಲ್ಲೆ ಅಲರ್ಟ್ ಆದ ಜನ! ಇವತ್ತೆ ದಾಖಲಾಯ್ತು ದೂರು

BREAKING NEWS: People on alert after 7 crore raids! The complaint was filed today, the raid took place, the officer was caught while accepting the bribe. Lokayukta's swift action in Shimoga

BREAKING NEWS  : ಏಳು ಕೋಟಿಯ ರೇಡ್​ ಬೆನ್ನಲ್ಲೆ ಅಲರ್ಟ್ ಆದ ಜನ! ಇವತ್ತೆ ದಾಖಲಾಯ್ತು ದೂರು
lokayukta,lokayukta raid,

MALENADUTODAY.COM  |SHIVAMOGGA| #KANNADANEWSWEB

ರಾಜ್ಯದಲ್ಲಿ ಲೋಕಾಯುಕ್ತ ರೇಡ್ ದೊಡ್ಡ ಸದ್ದು ಮಾಡುತ್ತಿರುವಂತೆ ಶಿವಮೊಗ್ಗದಲ್ಲಿಯು ಲೋಕಾಯುಕ್ತ ರೇಡ್ ನಡೆದಿದೆ.  30 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ರೇಡ್ ನಡೆದಿದೆ. ಅಲ್ಲದೆ ಲಂಚ ಪಡೆದ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಕಾರ್ಯನಿರ್ವಾಹಕ ವಿಠಲ್ ನಾಯ್ಕ್ರನ್ನ ಬಂಧಿಸಲಾಗಿದೆ. 

ಶಿವಮೊಗ್ಗ  ನಗರದ ವಿನೋಬನಗರ ವಾಸಿ ರಾಕೇಶ್ ಪಟೇಲ್ ಎಂಬುವವರ ಪಟೇಲ್ ಟೆಕ್ ಇಂಜಿನಿಯರಿಂಗ್ ಪ್ರೈ.ಲಿ ಎಂಬ ಕಾರ್ಖಾನೆಯ ಲೈಸನ್ಸ್‍ನ್ನು ರದ್ದುಪಡಿಸಲು ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್  ಲಂಚ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತ ರೇಡ್ ನಡೆದಿದೆ. 

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ರಾಕೇಶ್ ಪಟೇಲ್ ವಿಠಲ್​ ನಾಯ್ಕ್​ರ ಕಛೇರಿಗೆ ಭೇಟಿ ನೀಡಿ ತಮ್ಮ ಕಾರ್ಖಾನೆಯ ಲೈಸನ್ಸ್ ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು ಕೋರಿದ್ದರಂತೆ. ಈ  ಸಮಯದಲ್ಲಿ ಕಛೇರಿಯ ಸೂಪರ್‍ವೈಸರ್ ಆದ ವಿಠಲನಾಯ್ಕ  15,000/-ರೂಪಾಯಿ ಪಡೆದಿದ್ದರಂತೆ. ಆದಾಗ್ಯು ಲೈಸನ್ಸ್ ರದ್ದತಿ ಪ್ರಮಾಣ ಪತ್ರ ನೀಡಿಲ್ಲ. ಈ ಬಗ್ಗೆ  ವಿಚಾರಿಸಿದಾಗ ಮತ್ತೆ 30,000 ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ಧಾರೆ. ಮೊದಲೇ ನಷ್ಟದಲ್ಲಿರುವ ತಮಗೆ ಇನ್ನಷ್ಟು ಲಂಚ ಕೇಳಿದ್ದಕ್ಕೆ ರಾಕೇಶ್​ ರವರು,  ಇವತ್ತು ಲೋಕಾಯುಕ್ತ ಕಛೇರಿಗೆ ಬಂದು ಮಾಹಿತಿ ನೀಡಿ   ದೂರು ಕೊಟ್ಟಿದ್ಧಾರೆ. 

ಇನ್ನೂ ದೂರು ದಾಖಲಿಸುತ್ತಲೇ ಅಲರ್ಟ್ ಆಗಿ ರೇಡ್​ಗೆ ಇಳಿದ ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಕಛೇರಿ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮತ್ತು ಉಮೇಶ ಈಶ್ವರ ನಾಯ್ಕ ಪೊಲೀಸ್​  ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ  ಹೆಚ್. ರಾಧಕೃಷ್ಣ  ಪೊಲೀಸ್​ ನಿರೀಕ್ಷಕರು, ಕ.ಲೋ., ಶಿವಮೊಗ್ಗ ದಾಳಿ ನಡೆಸಿದ್ದಾರೆ. ಅಲ್ಲದೆ 30 ಸಾವಿರ ರೂಪಾಯಿ ಲಂಚವನ್ನು ಪಡೆಯುತ್ತಿರುವಾಗಲೇ ಅಧಿಕಾರಿಯನ್ನು ಹಿಡಿದು ಬಂಧಿಸಲಾಗಿದೆ.

ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ಯಾ? ಶಿವಮೊಗ್ಗ ಮಹಾನಗರ ಪಾಲಿಕೆ ಕೈಗೊಳ್ಳುತ್ತಿದೆ ಕ್ರಮ! ಏನದು ? ವಿವರ ಇಲ್ಲಿದೆ ಓದಿ

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #shivamoggaairport