ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ, ತಾಳಗುಪ್ಪ -ಮೈಸೂರು ಎಕ್ಸ್​ಪ್ರೆಸ್​ ರೈಲು ಹತ್ತುವಾಗ, ಕಾಲು ಜಾರಿ ಬಿದ್ದ ಪ್ರಯಾಣಿಕ

ಜನರು ಹಾಗೂ ರೈಲ್ವೆ ಪೊಲೀಸರು ತಕ್ಷಣ ಓಡಿ ಬಂದಿದ್ದಾರೆ. ಅಲ್ಲದೆ ಕೆಳಕ್ಕೆ ಬಿದ್ದಿದ್ದ ಪ್ರಯಾಣಿಕನನ್ನ ರಕ್ಷಿಸಿ, ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನ ರೈಲಿನಲ್ಲಿ ಕಳುಹಿಸಿಕೊಟ್ಟಿದ್ಧಾರೆ.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ, ತಾಳಗುಪ್ಪ -ಮೈಸೂರು ಎಕ್ಸ್​ಪ್ರೆಸ್​ ರೈಲು ಹತ್ತುವಾಗ, ಕಾಲು ಜಾರಿ ಬಿದ್ದ ಪ್ರಯಾಣಿಕ

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ನಿನ್ನೆ ಒಂದು ಘಟನೆ ಸಂಭವಿಸಿದೆ. ತಾಳಗುಪ್ಪ-ಮೈಸೂರು ಎಕ್ಸ್​ಪ್ರೆಸ್​ ರೈಲು (Train No. 16221 Ex:TLGP-MYS Express) ಹತ್ತುವ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಕಾಲು ಜಾರಿ ಬಿದ್ದಿದ್ದಾರೆ.

ಇದನ್ನು ಸಹ ಓದಿ : ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಅದೃಷ್ಟಕ್ಕೆ ಇದನ್ನ ನೋಡಿದ ಮಂಜುನಾಥ್​ ಎಂಬವರು ತಕ್ಷಣ ಅವರ ಸಹಾಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಸುತ್ತಮುತ್ತಲಿದ್ದ ಜನರು ಹಾಗೂ ರೈಲ್ವೆ ಪೊಲೀಸರು ತಕ್ಷಣ ಓಡಿ ಬಂದಿದ್ದಾರೆ. ಅಲ್ಲದೆ ಕೆಳಕ್ಕೆ ಬಿದ್ದಿದ್ದ ಪ್ರಯಾಣಿಕನನ್ನ ರಕ್ಷಿಸಿ, ಆತನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರನ್ನ ರೈಲಿನಲ್ಲಿ ಕಳುಹಿಸಿಕೊಟ್ಟಿದ್ಧಾರೆ.

ಇದನ್ನು ಸಹ ಓದಿ : SHIMOGA BREAKING | ಕಲ್ಲಾಪುರದಲ್ಲಿ ಭೀಕರ ಆಕ್ಸಿಡೆಂಟ್​’ | ಸ್ಥಳದಲ್ಲಿಯೇ ಮೂವರ ದುರ್ಮರಣ

ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರೈಲ್ವೆ ಪೊಲೀಸ್ ಮೈಸೂರು ವಿಭಾಗದ ಟ್ವಿಟ್ಟರ್​ನಲ್ಲಿ (RPF MYSURU DIV@rpfswrmys) ವಿಡಿಯೋವನ್ನು ಹಾಕಲಾಗಿದೆ. ರೈಲನ್ನು ಹತ್ತುವಾಗ ಅದು ಹೊರಡುವರೆಗೂ ಕಾಯದೇ ಮೊದಲೆ ಹತ್ತುವುದು ಕ್ಷೇಮ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯಾಣಿಕರು ಮುನ್ನೆಚ್ಚರಿಕೆಯನ್ನು ವಹಿಸಬೇಕಿದೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link