ಶಿವಮೊಗ್ಗದಲ್ಲಿ ದಾವಣಗೆರೆಯ ಮೂಲದ ಮೂವರು ವಿದ್ಯಾರ್ಥಿಗಳ ದುರ್ಮರಣ | ಘಟನೆಗೆ ಕಾರಣವೇನು?

ಶಿವಮೊಗ್ಗದ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.  ಘಟನೆಯಲ್ಲಿ ಮೃತಪಟ್ಟವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದಾರೆ. ದಾವಣಗೆರೆಯ ನಿವಾಸಿಗಳಾಗಿದ್ದು, ಅಲ್ಲಿನ ಪ್ರತಿಷ್ಟಿತ ಕಾಲೇಜಿನಲ್ಲಿ ಓದುತ್ತಿದ್ದಾರೆ. ಫಸ್ಟ್​ ಹಾಗೂ ಸೆಕಂಡ್​ ಇಯರ್​ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ಬಂದಿದ್ದರು. 

ಶಿವಮೊಗ್ಗದಲ್ಲಿ ಸ್ನೇಹಿತರೊಬ್ಬನನ್ನ ಭೇಟಿಯಾಗಿ ದಾವಣಗೆರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸೇರಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ಧಾರೆ. ಮೂವರು ವಿದ್ಯಾರ್ಥಿಗಳು ಸಹ 20 -25 ವಯಸ್ಸಿನವರು. ಇವರೆಲ್ಲರು ಗಾಯಾಳು ರುದ್ರೇಶ್​ ಜೊತೆಗೆ ಶಿವಮೊಗ್ಗಕ್ಕೆ ಫ್ರೆಂಡ್​ನ್ನ ಮೀಟ್ ಮಾಡೋದಕ್ಕೆ ಅಂತಾ ಬಂದಿದ್ದರು. 

ಘಟನೆ ಸಂಭವಿಸಿದ ಸ್ಥಳ ಕಾರು ಮತ್ತು ಬೊಲೆರೋ

ಇದನ್ನು ಸಹ ಓದಿ : SHIMOGA BREAKING | ಕಲ್ಲಾಪುರದಲ್ಲಿ ಭೀಕರ ಆಕ್ಸಿಡೆಂಟ್​’ | ಸ್ಥಳದಲ್ಲಿಯೇ ಮೂವರ ದುರ್ಮರಣ

ಬೆಳಗಿನ ಜಾವ ನಡೆದಿದ್ದು ಏನು? 

ಮೂಲಗಳ ಪ್ರಕಾರ, ಬೆಳಗ್ಗಿನ ಜಾವ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎದುರಿನಿಂದ ಗೂಡ್ಸ್​ ಲಾರಿ ಬರುತ್ತಿದೆ. ಲಾರಿ ಆಕ್ಸಿಡೆಂಟ್ ಆಗಿ ನಿಂತ ಸ್ಥಳವೂ ಎಡಬದಿಯಲ್ಲಿಯೇ ಇದೆ. ಇನ್ನೂ ಎದುರಿಗೆ ಬರುತ್ತಿದ್ದ ಲಾರಿಯನ್ನು ಗಮನಿಸದ ವಿದ್ಯಾರ್ಥಿಗಳು, ತಮ್ಮ ಮುಂದೆ ಸಾಗುತ್ತಿದ್ದ ಇನ್ನೊಂದು ವಾಹನವನ್ನು ಓವರ್​ ಟೇಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ವಾಹನದ ಒಂದು ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಬಹುತೇಕ ನುಜ್ಜುಗುಜ್ಜಾಗಿದೆ. ನಿದ್ರೆಯಲ್ಲಿದ್ದ ರುದ್ರೇಶ್ ಪಾಟೀಲ್ ಮಾತ್ರ ಬದುಕುಳಿದಿದ್ದು, ಘಟನೆಯಿಂದ ಆತ ಬೆಚ್ಚಿಬಿದ್ದಿದ್ದಾನೆ.  ಕಲ್ಲಾಪುರದಲ್ಲಿ ಸಂಭವಿಸಿದೆ ಭೀಕರ ಅಪಘಾತ

ಗಾಯಗೊಂಡವರು : ರುದ್ರೇಶ್​ ಪಾಟೀಲ್​ S/o  ಲಿಂಗರಾಜ್​ , ವಯಸ್ಸು 20 , ಮೊದಲ ವರ್ಷದ ಸಿವಿಲ್​  ಇಂಜಿನಿಯರಿಂಗ್ ವಿದ್ಯಾರ್ಥಿ, ದಾವಣಗೆರೆಯ ಜಯನಗರ, ಬಿ ಬ್ಲಾಕ್ ನಿವಾಸಿ

ಮೃತರು :

  • ವಿವೇಕ್​ , (25)  ದಾವಣಗೆರೆ ನಿವಾಸಿ,  ವಿದ್ಯಾರ್ಥಿ
  • ಕಾರ್ತಿಕ್​ (ಡ್ರೈವರ್​) (21) ಬಿಐಇಟಿ ಕಾಲೇಜ್​ ವಿದ್ಯಾರ್ಥಿ ದಾವಣಗೆರೆ 
  • ಮೋಹನ (21)  ಬಿಇಇಟಿ ಕಾಲೇಜಿನ ವಿದ್ಯಾರ್ಥಿ ಬಿಸಿಎ  ಸೆಕೆಂಡ್​ ಇಯರ್​

ಗಾಯಳು ರುದ್ರೇಶ್​ (ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ)

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

Leave a Comment