Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

Shivamogga Crime News | to hori habba matter A dispute in another town, a fight in one's own town! | Man forged wife's signature | Shimoga Crime Reports

Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ!  | ಪತ್ನಿ ಸಹಿ ನಕಲಿ ಮಾಡಿದ ಪತಿ |  ಶಿವಮೊಗ್ಗದ ಕ್ರೈಂ ವರದಿಗಳು
Shivamogga Crime News | ಹೋರಿ ಹಬ್ಬದ ವಿಚಾರಕ್ಕೆ ಪರ ಊರಿನಲ್ಲಿ ಜಗಳ, ಸ್ವಂತಊರಿನಲ್ಲಿ ಹೊಡೆದಾಟ! | ಪತ್ನಿ ಸಹಿ ನಕಲಿ ಮಾಡಿದ ಪತಿ | ಶಿವಮೊಗ್ಗದ ಕ್ರೈಂ ವರದಿಗಳು

MALENADUTODAY.COM | SHIVAMOGGA  | #KANNADANEWSWEB

ಹೋರಿ ಹಬ್ಬದ ವಿಚಾರವಾಗಿ ಬೇರೆ ಊರಿ8ನಲ್ಲಿ ನಡೆದ ಗಲಾಟೆ ಸಂಬಂದ ಹೊಡೆದಾಟ ನಡೆದಿದ್ದು, ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ನಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳು ಸೊರಬ ತಾಲ್ಲೂಕಿನ ಶಾಂತಗೇರಿಯಲ್ಲಿ ನಡೆದ ಹೋರಿಹಬ್ಬಕ್ಕೆ ತೆರಳಿದ್ದರು. ಅಲ್ಲಿ ಹೋರಿಹಬ್ಬದ ವಿಚಾರವಾಗಿ ಕೆಲವರ ನಡುವೆ ಜಗಳವಾಗಿದೆ . ಬಳಿಕ ಅಲ್ಲಿಂದ ವಾಪಸ್ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ ಲಿಮಿಟ್​ನ ಸ್ವಗ್ರಾಮಕ್ಕೆ ವಾಪಸ್​ ಬಂದಾಗ , ಅದೇ ಜನರ ನಡುವೆ ಹೊಡೆದಾಟ ನಡೆದಿದೆ.

READ | shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ಈ ಸಂಬಂಧ ಬೇರೆ ಊರಿನಲ್ಲಿ ನಮ್ಮ ಊರಿನವರ ಜೊತೆ ಜಗಳ ತೆಗೆಯುತ್ತೀರಾ ಎಂದು ಹಲ್ಲೆಯಾಗಿದೆ ಎಂದು ಒಂದು ಕಡೆಯವರು ದೂಡಿದ್ದಾರೆ.  ಇನ್ನೊಂದಡೆ ನಿಂತವರ ಮೇಲೆ ಬಂದು ಏಕಾಯೇಕಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನೂ ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರಿಗೆ ಶಿರಾಳಕೊಪ್ಪ ಹಾಗೂ ಶಿವಮೊಗ್ಗದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. 

READ | ರಾಜ್ಸ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ

ಪತ್ನಿ ಹೆಸರಲ್ಲಿದ್ದ ವೆಹಿಕಲ್​ನ್ನ ಮಾರಿದ ಪತಿ!  ಇಬ್ಬರಿಬ್ಬರ ಮೇಲೆ ಕಂಪ್ಲೆಂಟ್ ಕೊಟ್ಟ ಪತ್ನಿ

ಶಿವಮೊಗ್ಗದ ಪ್ರಿಯಾಂಕ್ ಲೇಔಟ್ ನಿವಾಸಿಯೊಬ್ಬರು ತಮ್ಮ ಪತಿಯ ವಿರುದ್ಧ ತಮ್ಮ ಸಹಿ ಪೋರ್ಜರಿ ಮಾಡಿ, ತಮ್ಮ ಹೆಸರಿನಲ್ಲಿದ್ದ ವಾಹನವನ್ನು ಮಾರಿದ ಆರೋಪ ಹೊರಿಸಿದ್ದಾರೆ. ಅಲ್ಲದೆ ಈ ಸಂಬಂಧ ಒಂದು ವಾಹನವನ್ನು ಖರೀದಿಸಿದ ಶೋರೂಮ್​ ವೊಂದರ ಮೇಲೆಯು ದೂರು ದಾಖಲಿಸಿದ್ದು ಎಫ್​ಐಆರ್ ಸಹ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ. ವಾಹನವನ್ನು ಸರ್ವೀಸ್​ಗೆ ಬಿಡಬೇಕು ಎಂದು ಹೇಳಿಕೊಂಡೊಯ್ದ ಪತಿ, ತಮ್ಮ ಹೆಸರಿನಲ್ಲಿದ್ದ ವಾಹನದ ದಾಖಲಾತಿಯನ್ನು ನಕಲು ಮಾಡಿ, ಸಹಿ ಫೋರ್ಜರಿ ಮಾಡಿ ಮಾರಿದ್ದಾರೆ ಎಂಬುದು ಆರೋಪವಾಗಿದೆ. 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga