shivamogga police | ಮೂತ್ರ ವಿಸರ್ಜನೆಗೆ ಅಂತಾ ಹೊರವಲಯಗಳಲ್ಲಿ ಬೈಕ್, ಕಾರು ನಿಲ್ಲಿಸಬೇಡಿ! ಜನವಿರದ ಕಡೆಯಲ್ಲಿ ನಡೆಯುತ್ತಿದೆ ದರೋಡೆ! ದಾಖಲಾಯ್ತು ಮತ್ತೊಂದು ಕೇಸ್

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM | SHIVAMOGGA  | #KANNADANEWSWEB

shivamogga police : ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಕಳೆದು ಮೂರು ತಿಂಗಳಿನಲ್ಲಿ ದರೋಡೆ ಹಾಗೂ ದರೋಡೆ ಯತ್ನ ಪ್ರಕರಣಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ ಘಟನೆಯೊಂದರ ಬಗ್ಗೆ ಮಲೆನಾಡುಟುಡೆ. ಕಾಂ | ಈ ಸುದ್ದಿ ಓದಿ: ಪ್ರಧಾನಿ ಕಾರ್ಯಕ್ರಮದ ಸಿದ್ಧತೆಯ ನಡುವೆ ಶಿವಮೊಗ್ಗ ಸಿಟಿಯಲ್ಲಿ ನಡೆಯಿತು ದರೋಡೆ  ಅಡಿಬರಹದಡಿಯಲ್ಲಿ ಸುದ್ದಿ ಮಾಡಿತ್ತು.ಇದರ ಬೆನ್ನಲ್ಲೆ ಮತ್ತೊಂದು ಘಟನೆ ಬಗ್ಗೆ ಎಫ್​ಐಆರ್ ದಾಖಲಾಗಿದೆ.  

Malenadu Today Shivamogga

ನಡೆದಿದ್ದೇನು? 

ಗ್ರಾಮ ಪಂಚಾಯಿತಿ ಒಂದರ ಪಿಡಿಒ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು,  ಕೇಸ್​ವೊಂದರ ವಿಚಾರವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದಾಗ ಅವರನ್ನ ದರೋಡೆ ಮಾಡಲಾಗಿದೆ.ಅವರು ಹಾಳುರು ಅನುಪಿನಕಟ್ಟೆ ರಸ್ತೆಯಲ್ಲಿ ಬೆತಲ್ ಚರ್ಚ ಹತ್ತಿರ ಬರುತ್ತಿದ್ದ ವೇಳೆ,  ಮೂತ್ರ ವಿಸರ್ಜನೆಗೆ ಅಂತಾ ಬೈಕ್​ ನಿಲ್ಲಿಸಿದ್ದಾರೆ. 

READ | ರಾಜ್ಸ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಂದಾಯ ಇಲಾಖೆ ನೌಕರರ ಸಂಘ ಬೆಂಬಲ

ಬಳಿಕ  ಮೂತ್ರ ವಿಸರ್ಜನೆ ಮುಗಿಸಿ ಬೈಕ್‌ ಹತ್ತಿಕೊಂಡಾಗ ಇಬ್ಬರು ಅಲ್ಲಿಗೆ ಪೋದಾರ್ ಶಾಲೆ ಕಡೆಯಿಂದ ನಡೆದುಕೊಂಡು ಬಂದಿದ್ದಾರೆ. ಅವರನ್ನು ಪಿಡಿಒ ಯಾರು ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ದುಷ್ಕರ್ಮಿಗಳು ಪಿಡಿಒರ ಕೊರಳಿಗೆ ಕೈ ಹಾಕಿ, ಚಾಕುವೊಂದನ್ನ ಕುತ್ತಿಗೆ ಹತ್ತಿರ ಹಿಡಿದಿದ್ದಾರೆ. ಅಲ್ಲದೆ  ಕೊರಳಲಿದ್ದ ಬಂಗಾರದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸರ ಕಟ್ ಆಗಿ ಕೆಳಕ್ಕೆ ಬಿದ್ದಿದೆ., ಈ ವೇಳೆ ಪಿಡಿಒರವರು ಸರದ ಮೇಲೆ ಬೈಕ್ ಬೀಳಿಸಿದ್ದಾರೆ. ಅಷ್ಟೊತ್ತಿಗೆ ಹೆದರಿದ ದುಷ್ಕರ್ಮಿಗಳು ಸಿಕ್ಕ ಸರದ ತುಂಡನ್ನಷ್ಟೆ ಕಿತ್ತುಕೊಂಡು ಹೋಗಿದ್ದಾರೆ. ಈ ಸಂಬಂಧ ಸ್ಟೇಷನ್​ಗೆ ಬಂದು ಪಿಡಿಒ ದೂರು ನೀಡಿದ್ದು, ಎಫ್​ಐಆರ್ ದಾಖಲಿಸಲಾಗಿದೆ. 

ಸಾರ್ವಜನಿಕರಿಗೆ ಎಚ್ಚರಿಕೆ

ಪ್ರಯಾಣದ ವೇಳೆ, ಮೂತ್ರ ವಿಸರ್ಜನೆ ಮಾಡಲು ವೆಹಿಕಲ್​ಗಳನ್ನು ಸೈಡ್​ಗೆ ಹಾಕುವುದು ಸಹಜ ಆದರೆ, ಇದನ್ನೆ ಗುರಿ ಮಾಡಿಕೊಳ್ತಿರುವ ದುಷ್ಕರ್ಮಿಗಳು ಶಿವಮೊಗ್ಗ ಸಿಟಿ ಹೊರವಲಯಗಳಲ್ಲಿ ಖಾಲಿ ಜಾಗಗಳಲ್ಲಿ ಹೊಂಚು ಹಾಕ್ತಿದ್ದಾರೆ. ಸಹಜವಾಗಿ ಕಾಣುವ ಜಾಗದಲ್ಲಿ ಬೈಕ್, ಕಾರ್ ಹಾಗೂ ಇತರೇ ವಾಹನಗಳನ್ನು ನಿಲ್ಲಿ ಮೂತ್ರ ವಿಸರ್ಜನೆಗೆ ಹೋಗುವವರನ್ನು ದುಷ್ಕರ್ಮಿಗಳು ದರೋಡೆ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಅಲರ್ಟ್ ಆಗಿರುವ ಶಿವಮೊಗ್ಗ ಪೊಲೀಸರು (shivamogga police) ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸ್ತಿದೆ. ಆದಾಗ್ಯು ಪ್ರಯಾಣಿಕರು ಜನವಿರದ ಜಾಗಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುವುದನ್ನು ಆದಷ್ಟು ಅವೈಡ್ ಮಾಡುವುದು ಒಳ್ಳೆಯದು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor