ಬೀದಿಪಾಲಾದ ವೆಹಿಕಲ್​ಗಳಿಗೆ ಕಡೆ ನಿಲ್ದಾಣ ತೋರಿಸ್ತಿದ್ದಾರೆ ಶಿವಮೊಗ್ಗ ಪೊಲೀಸರು! ಅನಾಥ ವಾಹನಗಳ ಕಥೆ

ಹಂಚಿಕೊಳ್ಳಿ
WhatsApp Facebook X Telegram
Shivamogga Police Clear Unauthorized Parked Vehicles via Towing
Shivamogga Police Clear Unauthorized Parked Vehicles via Towing

Shivamogga Police ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಫುಟ್​ಪಾತ್​ನ ಜೊತೆಗೆ ಇದೀಗ, ಓಡಿಸದೇ ಯಾವುದೋ ಕಾರಣಕ್ಕೆ ರೋಡ್​ ಸೈಡ್​ ನಿಲ್ಲಿಸಿದ್ದ ವಾಹನಗಳಿಗೆ ಕೊನೆ ನಿಲ್ದಾಣ ತೋರಿಸಲು ಶಿವಮೊಗ್ಗ ಪೊಲೀಸರು ಈಗಾಗಲೇ ಪ್ರಯತ್ನ ಆರಂಭಿಸಿದ್ದರು. ಇದಕ್ಕಾಗಿ ಹಲವು ದೂಳು ಹಿಡಿದ ವೆಹಿಕಲ್​ಗಳಿಗೆ ನೋಟಿಸ್ ಅಂಟಿಸಿದ್ರು. ಈ ನಿಟ್ಟಿನಲ್ಲಿ, ಅನಧಿಕೃತವಾಗಿ ನಿಲುಗಡೆ ಮಾಡಲಾಗಿದ್ದ ಒಟ್ಟು 84 ವಾಹನಗಳನ್ನು ಪತ್ತೆಹಚ್ಚಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದರು. ಸದ್ಯ ಈ ಪೈಕಿ ವಾಹನಗಳನ್ನು ತೆರವುಗೊಳಿಸುವಂತೆ ಸೂಚನೆಗೆ ಕೆಲ ಮಾಲೀಕರು ಉತ್ತರಿಸದ ಹಿನ್ನೆಲೆಯಲ್ಲಿ ವಾಹನಗಳನ್ನ ಸ್ಟೇಷನ್​ಗೆ ತೆಗೆದುಕೊಂಡು ಹೋಗುತ್ತಿದ್ದರು.

ಒಟ್ಟು 84 ವಾಹನಗಳಿಗೆ ಸಿಟಿಯಲ್ಲಿ ನೋಟಿಸ್​ ಅಂಟಿಸಲಾಗಿತ್ತು,. ಈ ಪೈಕಿ 68 ವಾಹನಗಳ ಮಾಲೀಕರು ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ವಾಹನಗಳನ್ನು ರೋಡ್​ ಸೈಡ್​ನಿಂದ ತೆರವುಗೊಳಿಸಿದ್ದಾರೆ. ಆದರೆ 16 ವಾಹನಗಳ ಮಾಲೀಕರು ಉತ್ತರಕ್ಕೆ ಸಿಕ್ಕಿರಲಿಲ್ಲ

ಅದಕಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕಾರಿಯಪ್ಪ ರವರ ಸಾರಥ್ಯದಲ್ಲಿ, ಕರ್ನಾಟಕ ಪೊಲೀಸ್ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯನ್ವಯ ಈ 16 ವಾಹನಗಳನ್ನು ಪರಿತ್ಯಕ್ತ ಹಾಗೂ ಅನುಪಯುಕ್ತ ವಾಹನಗಳೆಂದು ಅಧಿಕೃತವಾಗಿ ಪರಿಗಣಿಸಿ ರಿಮೂವ್ ಮಾಡಲಾಗುತ್ತಿದೆ.

ಟೋಯಿಂಗ್ ವೆಹಿಕಲ್ ಮೂಲಕ ಇದುವರೆಗೂ ಆರು ವೆಹಿಕಲ್​ಗಳನ್ನ ರೋಡ್​ಸೈಡ್​ ನಿಂದ ರಿಮೂವ್ ಮಾಡಿ ಸ್ಟೇಷನ್​ಗೆ ತಂದು ಹಾಕಲಾಗಿದೆ. ಈ ಬಗ್ಗೆ ಸ್ವತಃ ಪೊಲೀಸ್ ಇಲಾಖೆ ಮಲೆನಾಡುಟುಡೆಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ವಿವರ ಹಂಚಿಕೊಂಡಿದೆ. ಅಲ್ಲದೆ, ಈ ಬಗ್ಗೆ ಎಸ್​ಪಿ ನಿಖಿಲ್ ಬಿ ವಿನಂತಿಯೊಂದನ್ನ ಮಾಡಿದ್ದಾರೆ.

ಸಾರ್ವಜನಿಕರು ರಸ್ತೆ, ಪಾದಚಾರಿ ಮಾರ್ಗ ಹಾಗೂ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡಬಾರದು ಹಾಗೂ ಎಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಮುಂದಿನ ದಿನಗಳಲ್ಲಿಯೂ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವ ಯಾವುದೇ ವಾಹನಗಳ ವಿರುದ್ಧವೂ ಇದೇ ರೀತಿಯ ಕಠಿಣ ಕ್ರಮವನ್ನು ನಿರಂತರವಾಗಿ ಕೈಗೊಳ್ಳಲಾಗುವುದು

ನಿಖಿಲ್. ಬಿ. ಎಸ್​ಪಿ, ಶಿವಮೊಗ್ಗ

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor