ಇನ್ಮೇಲೆ ಹುಷಾರ್! ಆಕ್ಟ್ರೀವ್ ಆಗಿದೆ ಕ್ಯಾಮರಾ ಕಣ್ಣು! ಮೊಬೈಲ್​ಗೆ ಕಳಿಸ್ತಾರೆ ಟ್ರಾಫಿಕ್​ ಫೈನ್​! ಎಸ್​ಪಿ ಹೇಳಿದ್ದೇನು ಗೊತ್ತಾ?

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS

ಶಿವಮೊಗ್ಗ ಸ್ಮಾರ್ಟ್ ಸಿಟಿ ಆದ ಮೇಲೆ, ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ಗಳಲ್ಲಿ ಹೈಫೈ ಕ್ಯಾಮರಾಗಳನ್ನು ಅಳವಡಿಸಿದ್ದರ ಬಗ್ಗೆ ಮಲೆನಾಡು ಟುಡೆ ಈ ಹಿಂದೆ ಸುದ್ದಿ ಮಾಡಿತ್ತು. ಇದೀಗ ಈ ಕ್ಯಾಮರಾಗಳ ಮೂಲಕ ಟ್ರಾಫಿಕ್ ಫೈನ್​ ವಿಧಿಸಿವುದರ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಇವತ್ತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  

 

 ಸ್ಮಾರ್ಟ್ ಸಿಟಿ ಯೋಜನೆಯ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್’ಮೆಂಟ್ ಸಿಸ್ಟಮ್ (ಐಟಿಎಂಎಸ್) ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಮಿಥುನ್​ ಕುಮಾರ್,  ನಗರದಲ್ಲಿರುವ ಸರ್ಕಲ್​ಗಳಲ್ಲಿ ಕ್ಯಾಮರಾಗಳನ್ನ ಅಳವಡಿಸಲಾಗಿದ್ದು, ಅದರಲ್ಲಿನ ದೃಶ್ಯಗಳು ಕೇಂದ್ರೀಕೃತ ಕಂಬೈಂಡ್ ಅಂಡ್ ಕಂಟ್ರೋಲ್‌ ಸೆಂಟರ್‌ಗೆ ತಲುಪುವಂತೆ ವ್ಯವಸ್ಥೆ ಮಾಡಲಾಗಿದ್ದು ಸಂಚಾರಿ ನಿಯಮಗಳ ಉಲ್ಲಂಘನೆಯ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ. 

 

ಯಾರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದರೂ ಅದು ಕ್ಯಾಮರಾ ಮೂಲಕ ಕ್ಯಾಪ್ಚರ್ ಆಗುತ್ತದೆ.  ಸಿಗ್ನಲ್‌ ಜಂಪ್ ಮಾಡಿದಾಗ ವಾಹನದ ಫೋಟೊ ಮತ್ತು ವೀಡಿಯೋ ತುಣುಕನ್ನು ಎಸ್‌ಎಡಿ ಕ್ಯಾಮೆರಾಗಳು ಸೆರೆಹಿಡಿಯುತ್ತವೆ. ಇದಲ್ಲದೆ ಹೆಲೈಟ್ ಧರಿಸದೆ ಇದ್ದರೆ, ಮೂವರು ಕುಳಿತು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದರೆ, ಮೊಬೈಲ್‌ನಲ್ಲಿ ಮಾತ ನಾಡುತ್ತಾ ವಾಹನ ಚಲಾಯಿಸುತ್ತಿದ್ದರೆ, ಒನ್‌, ನೋ ಎಂಟ್ರಿ, ನೋ ಪಾರ್ಕಿಂಗ್‌, ಕಾರಿನ ಚಾಲಕರು ಸೀಟ್ ಬೆಲ್ಟ್ ಹಾಕಿಕೊಳ್ಳು ವುದು, ಹೀಗೆ ಯಾವುದೇ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ತಕ್ಷಣವೇ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಮತ್ತು ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ಕಳಿಸಲಾಗುತ್ತದೆ ಎಂದರು. 

ಈ ಬಗ್ಗೆ ಪೂರ್ತಿ ವಿವರ ಇಲ್ಲಿದೆ 13 ಸರ್ಕಲ್​ 13 ರಸ್ತೆ ! ಗೊತ್ತಾಗಲ್ಲ ಅನ್ನುವಂತಿಲ್ಲ! ಆಗಸ್ಟ್​ 28 ರ ನಂತರ ಪ್ರತಿಯೊಂದಕ್ಕೂ ಬರುತ್ತೆ ಸ್ಮಾರ್ಟ್ ಫೈನ್​! ಹೇಗೆ ಗೊತ್ತಾ?

ಇನ್ನಷ್ಟು ಸುದ್ದಿಗಳು

 


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

 

Leave a Comment