KARNATAKA NEWS/ ONLINE / Malenadu today/ Aug 22, 2023 SHIVAMOGGA NEWS
ಸ್ಮಾರ್ಟ್ ಸಿಟಿ ಯೋಜನೆಯ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್’ಮೆಂಟ್ ಸಿಸ್ಟಮ್ (ಐಟಿಎಂಎಸ್) ವ್ಯವಸ್ಥೆಯನ್ನು ಶಿವಮೊಗ್ಗದಲ್ಲಿ ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಲ್ಲಿ ಏನೇನೆಲ್ಲಾ ಮಾಡಲಾಗಿದೆ ಎಂಬುದನ್ನ ನೋಡುವುದಾದರೆ, ಶಿವಮೊಗ್ಗದ ತಲಾ 13 ವೃತ್ತ ಹಾಗೂ ನಗರ ಪ್ರವೇಶದ ಪ್ರಮುಖ 13 ರಸ್ತೆಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾಗಳ ಅಳವಡಿಸಲಾಗಿದೆ.
ಇದರಲ್ಲಿ ಆರ್.ಎಲ್.ವಿ.ಡಿ ಕ್ಯಾಮರಾಗಳು, ಸಿಗ್ನಲ್ ಜಂಪ್ ಮಾಡಿದ ವಾಹನಗಳ ಫೋಟೋ-ವೀಡಿಯೋ ಸಂಗ್ರಹಿಸುತ್ತವೆ. ಹಾಗೆಯೇ ಎಸ್.ವಿ.ಡಿ ಕ್ಯಾಮರಾಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುವ ವಾಹನಗಳನ್ನ ಪತ್ತೆ ಮಾಡುತ್ತವೆ. ಪಿಟಿಝಡ್ – ಎ.ಎನ್.ಪಿ.ಆರ್, ಎ.ಎಸ್.ವಿ.ಡಿ ಕ್ಯಾಮರಾಗಳು ಹೆಲ್ಮೆಟ್ ರಹಿತ, ತ್ರಿಬಲ್ ರೈಡಿಂಗ್, ಮೊಬೈಲ್ ರೈಡಿಂಗ್, ಒನ್ ವೇ, ಪ್ರವೇಶ ನಿಷಿದ್ಧ, ನೋ ಪಾರ್ಕಿಂಗ್ ಉಲ್ಲಂಘನೆ ಮಾಡುವ ವಾಹನಗಳ ಫೋಟೋ – ವೀಡಿಯೋ ಸೆರೆ ಹಿಡಿಯುತ್ತವೆ.
ಸಿಸ್ಟಮ್ ಹೇಗೆ ಕೆಲಸ ಮಾಡುತ್ತದೆ?
ಕ್ಯಾಮರಾಗಳಲ್ಲಿ ಸೆರೆಯಾದ ಫೋಟೋ – ವೀಡಿಯೋಗಳು ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಗೆ ರವಾನೆಯಾಗುತ್ತವೆ. ಕಮಾಂಡ್ ಸೆಂಟರ್ ನಲ್ಲಿ ಐಟಿಎಂಸ್ ತಂತ್ರಾಶದ ಸಹಾಯದಿಂದ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಮಾಹಿತಿ ಪರಿಶೀಲಿಸಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ನೋಟೀಸ್ ಸಿದ್ದಪಡಿಸಿ ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಅಥವಾ ವಾಹನ ಮಾಲೀಕರ ವಿಳಾಸಕ್ಕೆ ಅಂಚೆ ಮೂಲಕ ನೋಟೀಸ್ ನೀಡಲಾಗುತ್ತದೆ.
ಮೊಬೈಲ್ ಅಥವಾ ಅಂಚೆ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘನೆಯ ನೋಟೀಸ್ ಬಂದ ವಾಹನ ಚಾಲಕರು, ನಮೂದಿತ ದಂಡದ ಮೊತ್ತವನ್ನು ಸಮೀಪದ ಸಂಚಾರಿ ಪೊಲೀಸ್ ಠಾಣೆ ಅಥವಾ ಕರ್ತವ್ಯನಿರತ ಸಂಚಾರಿ ಪೊಲೀಸ್ ಅಧಿಕಾರಿಗಳ ಬಳಿ ಸ್ಪಾಟ್ ಫೈನ್ ಡಿವೈಎಸ್ ನಲ್ಲಿ ಪರಿಶೀಲಿಸಿ ದಂಡ ಪಾವತಿಸಬೇಕಾಗುತ್ತದೆ.
ಆ. 28 ರ ನಂತರ ಸ್ಮಾರ್ಟ್ ಸಿಟಿ ಐಟಿಎಂಎಸ್ ತಂತ್ರಾಂಶದ ಸಹಾಯದಿಂದ ನೋಟೀಸ್ ಗಳು ರವಾನೆಯಾಗಲಿದೆ. ವಾಹನ ಸವಾರರ ಸಂಚಾರಿ ನಿಯಮಗಳ ಕಡ್ಡಾಯ ಪಾಲನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಯಾವ್ಯಾವ ವೃತ್ತಗಳಲ್ಲಿ ಕ್ಯಾಮರಾ?
ಮಹಾವೀರ ಸರ್ಕಲ್, ಶಿವಮೂರ್ತಿ ಸರ್ಕಲ್, ಕೆಇಬಿ ಸರ್ಕಲ್, ಸಂದೇಶ್ ಮೋಟಾರ್ ಸರ್ಕಲ್, ಶಂಕರಮಠ ಸರ್ಕಲ್, ಕರ್ನಾಟಕ ಸಂಘ ಸರ್ಕಲ್, ಐಬಿ ಸರ್ಕಲ್, ಆಯನೂರು ಗೇಟ್, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಪೊಲೀಸ್ ಚೌಕಿ, ಆಲ್ಕೋಳ ಸರ್ಕಲ್, ಗೋಪಿ ಸರ್ಕಲ್ನಗರ ಪ್ರವೇಶ – ನಿರ್ಗಮನ ರಸ್ತೆಗಳ ವಿವರ : ಮಲವಗೊಪ್ಪ ಬಿ.ಹೆಚ್.ರಸ್ತೆ, ಕೆವಿಎಸ್ ಸಮೀಪ ಎನ್.ಆರ್.ಪುರ ರಸ್ತೆ, ಊರುಗಡೂರು ಜಂಕ್ಷನ್ – 1, ಊರೂಗಡೂರು ಜಂಕ್ಷನ್ – 2, ಹೊಂಡಾ ಶೋ ರೂಂ ಸಮೀಪದ ಬೈಪಾಸ್ ರಸ್ತೆ, ಎನ್.ಟಿ.ರಸ್ತೆ, ಶರವಾತಿ ಡೆಂಟಲ್ ಕಾಲೇಜು ಸಮೀಪದ ರಸ್ತೆ, ಬುದ್ದನಗರ ಕ್ರಾಸ್, ತುಂಗಾನಗರ ಪೊಲೀಸ್ ಸ್ಟೇಷನ್, ಸೋಮಿನಕೊಪ್ಪ, ಕೃಷಿ ಕಾಲೇಜು ಸಮೀಪದ ಸವಳಂಗ ರಸ್ತೆ, ತ್ಯಾವರೆಚಟ್ನಳ್ಳಿ ರಸ್ತೆ, ಗುರುಪುರ ರಸ್ತೆ,.
ಇನ್ನೂ ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಹೇಳಿದ್ಧೇನು ಎಂಬುದರ ವಿವರ ಇಲ್ಲಿದೆ ಕ್ಲಿಕ್ ಮಾಡಿ ಓದಿ : ಇನ್ಮೇಲೆ ಹುಷಾರ್! ಆಕ್ಟ್ರೀವ್ ಆಗಿದೆ ಕ್ಯಾಮರಾ ಕಣ್ಣು! ಮೊಬೈಲ್ಗೆ ಕಳಿಸ್ತಾರೆ ಟ್ರಾಫಿಕ್ ಫೈನ್! ಎಸ್ಪಿ ಹೇಳಿದ್ದೇನು ಗೊತ್ತಾ?
ಹಾಗೂ ಸ್ಮಾರ್ಟ್ ಸಿಟಿಯ ಈ ತಂತ್ರಾಂಶದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಪಿಡಿಎಫ್ ಫೈಲ್ನ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ ಓದಿ :
Provided by
ಇನ್ನಷ್ಟು ಸುದ್ದಿಗಳು
ಉದ್ಯೋಗಕ್ಕಾಗಿ ಹುಡಕಾಡ್ತಿದ್ದೀರಾ? ಇಲ್ಲಿದೆ ಅವಕಾಶ! ವಿದ್ಯಾರ್ಹತೆ ಎಸ್ಎಸ್ಎಲ್ಸಿ-ಪದವಿ! ಪೂರ್ತಿ ವಿವರ ಇಲ್ಲಿದೆ
ಶಿವಮೊಗ್ಗ ನಗರದ ಈ ಪ್ರಮುಖ ಭಾಗಗಳಲ್ಲಿ ದಿನವಿಡಿ ಇರೋದಿಲ್ಲ ವಿದ್ಯುತ್! ಯಾವಾಗ? ಎಲ್ಲೆಲ್ಲಿ ? ವಿವರ ಇಲ್ಲಿದೆ
