ಶಿವಮೊಗ್ಗದ ಹಳೆಯ ಜೈಲ್‌ ಆವರಣದ ಬಳಿ ವ್ಯಕ್ತಿಯ ಶವ ಪತ್ತೆ

Man's body found near old jail premises in Shivamogga

ಶಿವಮೊಗ್ಗದ ಹಳೆಯ ಜೈಲ್‌ ಆವರಣದ ಬಳಿ ವ್ಯಕ್ತಿಯ ಶವ ಪತ್ತೆ
old jail premises in Shivamogga

SHIVAMOGGA | MALENADUTODAY NEWS | Jul 1, 2024  ಮಲೆನಾಡು ಟುಡೆ   

ಶಿವಮೊಗ್ಗದ ಹಳೆಯ ಜೈಲ್‌ ಆವರಣದ ಎದುರು 65 ವರ್ಷದ ವ್ಯಕ್ತಿ ಮೃತದೇಹ ಪತ್ತೆಯಾಗಿದೆ. ಲಕ್ಷ್ಮೀ ಟಾಕೀಸ್‌ ಸರ್ಕಲ್‌ ಸಮೀಪದಲ್ಲಿರುವ ಹಳೆಯ ಜೈಲ್‌ ಆವರಣದ ಬಳಿಯಲ್ಲಿ  ಜೂನ್ 27 ರಂದು ಸಂಜೆ 5 ಗಂಟೆ ವೇಳೆಗೆ ಶವ ಪತ್ತೆಯಾಗಿದೆ. ಇಲ್ಲಿ ಸಾರ್ವಜನಿಕರು ವಿಶ್ರಾಂತಿ ಮಾಡುವ ಶೆಡ್ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಮೃತರಾಗಿರುವುದು ಗೊತ್ತಾಗಿದೆ. ಅವರ ಗುರುತು ಪತ್ತೆಗಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪ್ರಕಟಣೆ ನೀಡಲಾಗಿದೆ. 

ಮೃತ ವ್ಯಕ್ತಿಯು ಸುಮಾರು 5.6 ಅಡಿ ಎತ್ತರವಿದ್ದು, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಮೈಮೇಲೆ ನೀಲಿ ಮತ್ತು ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಬನಿಯಾನ್ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಜಯನಗರ ಪೊಲೀಸ್ ಠಾಣೆ 08182-261400-08182 261413-08182 261416 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.