ಶಿವಮೊಗ್ಗ ಹಳೆಯ ಜೈಲಿನಲ್ಲಿ ಡಿಶುಂ..ಡಿಶುಂ...

A fight scene of a Kannada film was shot in the old jail in Shivamogga

ಶಿವಮೊಗ್ಗ ಹಳೆಯ ಜೈಲಿನಲ್ಲಿ ಡಿಶುಂ..ಡಿಶುಂ...

SHIVAMOGGA | SHIMOGA JAIL|  Dec 8, 2023 |   ಶಿವಮೊಗ್ಗದ ಹಳೇ ಜೈಲು ಈಗೀಗ ಸಿನಿಮಾಗಳ ಹಾಟ್ ಫೇವರಿಟ್ ಪ್ಲೇಸ್ ಆಗುತ್ತಿದೆ. ಜೈಲಿನ ಶೂಟಿಂಗ್​ನ ಅಗತ್ಯವಿದ್ದಾಗಲೆಲ್ಲಾ ಹಳೇಜೈಲನ್ನು ಬಳಸಿಕೊಳ್ಳಲಾಗುತ್ತಿದೆ. ತಮಿಳು ಸಿನಿಮಾ ಸೇರಿದಂತೆ ಈಗಾಗಲೇ ಹಲವು ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. 

READ : ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್​!

ಈ ಮಧ್ಯೆ ಕನ್ನಡ ಚಿತ್ರ ತಂಡವೊಂದು ಹಳೆಯ ಜೈಲಿನಲ್ಲಿ ಸದ್ದಿಲ್ಲದೇ ಫೈಟ್ ಸೀನ್​ವೊಂದನ್ನ ಮುಗಿಸಿಕೊಂಡು ವಾಪಸ್ ಆಗಿದೆ. ಸುಧೀರ್ ಶಾನುಬೋಗ್​  ನಿರ್ದೇಶನದ ಧರಣಿ ಸಿನಿಮಾದ ಫೈಟ್ ಸೀನ್​ ಒಂದು ಹಳೆಯ ಜೈಲಿನಲ್ಲಿ ಶೂಟ್ ಆಗಿದೆ.

ನಾಯಕನಾಗಿ ಪರಿಚಯವಾಗುತ್ತಿರುವ ಮನೋಜ್​ ಕುಮಾರ್​, ಶಿವಮೊಗ್ಗ ಜೈಲಿನಲ್ಲಿ ನಡೆದ ಸಾಹಸ ದೃಶ್ಯಗಳಲ್ಲಿ ಅಭಿನಯಿಸಿ ತೆರಳಿದ್ದಾರೆ. ಈ ಸಿನಿಮಾದ ಶೂಟಿಂಗ್​ ಚಿಕ್ಕಬಳ್ಳಾಪುರ, ಶ್ರೀನಿವಾಸಪುರ, ಚನ್ನಪಟ್ಟಣ ಸೇರಿದಂತೆ ಅನೇಕ ಜಾಗಗಳಲ್ಲಿ  ನಡೆಯುತ್ತಿದೆ.