ಬಾಪೂಜಿನಗರ ಕೇಸ್‌ | ಕೋಟೆ ಪೊಲೀಸ್‌ ಠಾಣೆ ಪೊಲೀಸರಿಂದ ಚಿಕ್ಕಲ್‌ ರಫೀಕ್ ಸೇರಿ ಮೂವರು ಅರೆಸ್ಟ್‌

 A theft case in Bapujinagar, Shivamogga has been solved by the Kote police station.  

ಬಾಪೂಜಿನಗರ ಕೇಸ್‌ | ಕೋಟೆ ಪೊಲೀಸ್‌ ಠಾಣೆ ಪೊಲೀಸರಿಂದ ಚಿಕ್ಕಲ್‌ ರಫೀಕ್ ಸೇರಿ ಮೂವರು ಅರೆಸ್ಟ್‌
Bapujinagar, Shivamogga, Kote police station

SHIVAMOGGA | MALENADUTODAY NEWS | Jul 3, 2024  ಮಲೆನಾಡು ಟುಡೆ   

ಶಿವಮೊಗ್ಗದ ಬಾಪೂಜಿನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವೊಂದನ್ನ ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ವಿವರ ನೋಡುವುದಾದರೆ  ದಿನಾಂಕ: 29-06-2024 ರಂದು ರಾತ್ರಿ ಶಿವಮೊಗ್ಗ ಟೌನ್ ಬಾಪೂಜಿನಗರದ ಮಹಿಳೆಯೊಬ್ಬರ ವಾಸದ ಮನೆಯಲ್ಲಿ ಕಳ್ಳತನವಾಗಿತ್ತು.   ಕಳ್ಳರು ಸುಮಾರು 234 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಸಂತ್ರಸ್ತ ಮಹಿಳೆಯು   ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು

shivamogga kote police station

ಕೋಟೆ ಪೊಲೀಸ್‌ ಸ್ಟೇಷನ್‌

ಈ ಕುರಿತಾಗಿ  ಗುರುಬಸವರಾಜ್, ಹೆಚ್ ಪೋಲಿಸ್ ನಿರೀಕ್ಷಕರು ಕೋಟೆ ಪೊಲೀಸ್ ಠಾಣೆ ರವರ ನೇತೃತ್ವದ,  ಪಿ.ಎಸ್.ಐ  ಕುಮಾರ್, ಸಿ.ಆರ್.ಕೊಪ್ಪದ್   ಶ್ರೀಹರ್ಷ, ಎಎಸ್‌ಐ  ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಸಿಪಿಸಿ ರವರಾದ ಗೊರವರ ಅಂಜಿನಪ್ಪ, ಕಿಶೋರ, ಪ್ರಕಾಶ್, ರಂಗನಾಥ್ ರವರನ್ನು ಒಳಗೊಂಡ ತನಿಖಾ ತಂಡ ತನಿಖೆ ನಡೆಸಿತ್ತು. ಇದೀಗ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ. 

ಬಂಧಿತರು

1)  ಮೊಹಮ್ಮದ್ ರಫೀಕ್ @ ಕಾಣ 24 ವರ್ಷ, ಚಿಕ್ಕಲ್, ಶಿವಮೊಗ್ಗ

2) ಅತಾವುಲ್ಲಾ, 29 ವರ್ಷ, ಬಾಪೂಜಿನಗರ.  ಶಿವಮೊಗ್ಗ, 

3)  ರೂಮನ್ ಕುರೇಶಿ, 20 ವರ್ಷ ಬಾಪೂಜಿನಗರ, 

15,90,500/ ಮಾಲು ಜಪ್ತಿ

ಆರೋಪಿತರಿಂದ  ಪ್ರಕರಣಕ್ಕೆ ಸಂಬಂಧಿಸಿದ  ಅಂದಾಜು ಮಾಲ್ಯ 15,40,500/- ರೂಗಳ 237 ಗ್ರಾಂ ಬಂಗಾರದ ಒಡವೆಗಳು ಮತ್ತು ಕೃತ್ಯಕ್ಕೆ  ಬಳಸಿದ ಅಂದಾಜು ಮೌಲ್ಯ 50,000/- ರೂ ಮೌಲ್ಯದ ಬೈಕ್   ಸೇರಿ ಒಟ್ಟು 15,90,500/- ರೂ ಗಳ  ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. 

 A theft case in Bapujinagar, Shivamogga has been solved by the Kote police station.