ಕಿರಿಕ್‌ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಮೇಲೆಯೇ ಹಲ್ಲೆ ಮಾಡಿದ ಆಸಾಮಿ | 112 ಸುದ್ದಿ

The accused assaulted the policeman for questioning what he had done 112 news

ಕಿರಿಕ್‌ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಮೇಲೆಯೇ ಹಲ್ಲೆ  ಮಾಡಿದ ಆಸಾಮಿ |  112 ಸುದ್ದಿ
112 news

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

ಬುದ್ದಿವಾದ ಹೇಳಿ ತಿಳುವಳಿಕೆ ಮೂಡಿಸಲು ಮುಂದಾದ 112 ಇಆರ್‌ವಿ ಸಿಬ್ಬಂದಿಯ ಯೂನಿಫಾರಮ್‌ ಹರಿದು, ಹಲ್ಲೆಮಾಡಿ ರಕ್ತಗಾಯ ಪಡಿಸಿದ ಆರೋಪ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಪ್ರಕರಣದ ವಿವರ ನೋಡುವುದಾದರೆ 

ಮಲವಗೊಪ್ಪ ದಿಂದ 112 ಸಹಾಯವಾಣಿ ಕಳೆದ 19  ನೇ ತಾರೀಖು ಕರೆಯೊಂದು ಬಂದಿತ್ತು, ಕರೆಯಲ್ಲಿ ಸಹಾಯ ಯಾಚಿಸಿದ ಮಹಿಳೆಯೊಬ್ಬರು ತಮ್ಮ ಮನೆಯ ಸಮೀಪದ ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ರೆಸ್ಪಾಂಡೆಂಟ್‌ ಮಹಿಳಾ ಹೆಡ್‌ ಕಾನ್ಸ್‌ ಸ್ಟೇಬಲ್‌ ಜೊತೆ ಎಹೆಚ್‌ಸಿ ಯೊಬ್ಬರು ತೆರಳಿದ್ದರು. ಸ್ಥಳದಲ್ಲಿ ಮಹಿಳೆಯು ಆರೋಪಿಸಿದ ವ್ಯಕ್ತಿಯನ್ನು ವಿಚಾರಿಸುವಾಗ ಆತ ಎಹೆಚ್‌ಸಿಯನ್ನು ನಿಂಧಿಸಿ ಹಲ್ಲೆ ಮಾಡಿದ್ದಾನೆ. ಅವರನ್ನ ಗಾಯಗೊಳಿಸಿದ್ದಾರೆ. ಅಲ್ಲದೆ ಮಹಿಳಾ ರೆಸ್ಪಾಂಡೆಂಟ್‌ಗೂ ನಿಂದಿಸಿದ್ದಾನೆ. ಸನ್ನಿವೇಶ ಬಿಗುವಾದ ಬೆನ್ನಲ್ಲೆ ಎಹೆಚ್‌ಸಿಯವರು ಆಸ್ಪತ್ರೆಗೆ ದಾಖಲಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ನೀಡಿದ್ದಾರೆ. ಪ್ರಕರಣದ ಸಂಬಂಧ ಇದೀಗ ಗ್ರಾಮಾಂತರ ಠಾಣೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.