ಗಾರ್ಡನ್‌ ಏರಿಯಾದ ಬಾರ್‌ನಲ್ಲಿ ಮೊಸರಿನ ಗಲಾಟೆ | ಡಬ್ಬಲ್‌ ಕಂಪ್ಲೆಂಟ್‌ | ದೂರೇನು, ಪ್ರತಿದೂರೇನು?

Fight over curd at garden area bar | Double Complaint | What is the complaint, what is the counter-complaint?

ಗಾರ್ಡನ್‌ ಏರಿಯಾದ ಬಾರ್‌ನಲ್ಲಿ ಮೊಸರಿನ ಗಲಾಟೆ |  ಡಬ್ಬಲ್‌ ಕಂಪ್ಲೆಂಟ್‌ | ದೂರೇನು, ಪ್ರತಿದೂರೇನು?
garden area bar ,counter-complaint

SHIVAMOGGA | MALENADUTODAY NEWS | May 22, 2024  ಮಲೆನಾಡು ಟುಡೆ

ಶಿವಮೊಗ್ಗದ ಗಾರ್ಡನ್‌ ಏರಿಯಾದಲ್ಲಿ ಗುರು ಬಾರ್‌ & ರೆಸ್ಟೋರೆಂಟ್‌ ನಲ್ಲಿ ಎರಡು ದಿನಗಳ ಹಿಂದೆ ರಾತ್ರಿ ದೊಡ್ಡ ಗಲಾಟೆಯಾಗಿದೆ. ಬಾರ್‌ಗೆ ಕುಡಿಯಲು ಬಂದಿದ್ದವರು ಹಾಗೂ ಬಾರ್‌ ಸಪ್ಲೆಯರ್‌ ನಡುವೆ ಜಗಳ ನಡೆದು, ಆನಂತರ ಮಚ್ಚು ತಂದು ಬೆದರಿಕೆ ಹಾಕಿದ ಆರೋಪ ಸಹ ಕೇಳಿಬಂದಿದೆ. ಮೇಲಾಗಿ ಈ ಸಂಬಂಧ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ದೊಡ್ಡಪೇಟೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. 

ಒಂದು ದೂರಿನ ಪ್ರಕಾರ, ಮೊಸರು ತರಲು ಹೇಳಿದ ಗ್ರಾಹಕನಿಗೆ ಕಿಚನ್‌ ಕ್ಲೋಸ್‌ ಆಗಿದೆ ಎಂದು ಬಾರ್‌ ಸಪ್ಲೆಯರ್‌ ಹೇಳಿದ್ದಾನೆ. ಈ ವೇಳೆ ಸಿಟ್ಟಿಗೆದ್ದ  ಗ್ರಾಹಕ ಸಪ್ಲೆಯರ್‌ನ್ನ ನಿಂಧಿಸಿದ್ದಾನೆ. ಇದನ್ನ ಸಪ್ಲೆಯರ್‌ ವಿರೋಧಿಸಿದಾಗ ಗಲಾಟೆಯಾಗಿದೆ. ಪ್ರಕರಣದಲ್ಲಿ ದೂರುದಾರ ಸಪ್ಲೆಯರ್‌ ಮೇಲೆ ಹಲ್ಲೆ ನಡೆಸಿದ ಗ್ರಾಹಕ ಹಾಗೂ ಆತನ ಜೊತೆಗಾರರು, ತಡರಾತ್ರಿ ಪುನಃ ಮಚ್ಚು ತಂದು ಬಾರ್‌ ಹೊರಗಡೆ ನಿಂತು ಬೆದರಿಕೆ ಹಾಕಿದ್ದಾರೆ ಎಂಬುದು ಆರೋಪ. ಈ ಸಂಬಂಧ  IPC 1860 (U/s-504,506,323,448,506(2),149) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಇನ್ನೊಂದೆಡೆ ಇದೆ ಘಟನೆ ಸಂಬಂಧ ದಾಖಲಾಗಿರುವ ಪ್ರತಿದೂರಿನ ಪ್ರಕಾರ, ಸಪ್ಲೆಯರ್‌ಗೆ ಮೊಸರು ತರಲು ಹೇಳಿದಾಗ ಆತ ಕಿಚನ್‌ ಕ್ಲೋಸ್‌ ಆಗಿದೆ ಎಂದನಂತೆ. ಇದನ್ನ ಮೊದಲೇ ಹೇಳಬೇಕಿತ್ತು, ಸುಮ್ಮನೆ ಟೈಂ ವೇಸ್ಟ್‌ ಮಾಡಿದ್ಯಲ್ಲ ಎಂದಿದ್ದಕ್ಕೆ ಸಪ್ಲೆಯರ್‌ ಗ್ರಾಹಕನಿಗೆ ನಿಂದಿಸಿದ್ದಾನೆ. ಯಾಕೆ ಬೈಯುತ್ತಿದ್ದೀಯಾ ಎಂದು ಆತನನ್ನು ತಳ್ಳಿದ್ದಕ್ಕೆ ಗ್ರಾಹಕನ ಮೇಲೆ ಸಪ್ಲೆಯರ್‌ ಹಲ್ಲೆ ಮಾಡಿದ್ಧಾನೆ ಎಂಬುದು ದೂರು. ಅಲ್ಲದೆ ಈ ವೇಳೆ ಬಾರ್‌ನಲ್ಲಿರುವ ಉಳಿದ ಸಪ್ಲೆಯರ್‌ ಸಹ ಗ್ರಾಹಕನ ಮೇಲೆ ಹಲ್ಲೆ ಮಾಡಿದ್ರು ಎಂಬುದು ಆರೋಪ. ಈ ಸಂಬಂಧ  IPC 1860 (U/s-504,323,324,506,149) ಅಡಿಯಲ್ಲಿ ಕೇಸ್‌ ದಾಖಲಾಗಿದೆ.