ಬೆಲ್‌ ಬಾಟಮ್‌ ಸ್ಟೈಲ್‌ನಲ್ಲಿ ಶಿವಮೊಗ್ಗದಲ್ಲಿ ನಡೆಯಿತಾ ಸರಗಳ್ಳನ | ನಿಂತಲ್ಲೆ ಮಂಕಾಗಿಸುವ ಮಹಿಳೆಯರು ಶಿವಮೊಗ್ಗದಲ್ಲಿದ್ದಾರಾ?

woman robbed of her gold chain worth Rs. 67,000 in Shivamogga. Two unidentified women followed her, touched her with something that made her lose consciousness, and then convinced her to remove her chain. 

ಬೆಲ್‌ ಬಾಟಮ್‌ ಸ್ಟೈಲ್‌ನಲ್ಲಿ  ಶಿವಮೊಗ್ಗದಲ್ಲಿ ನಡೆಯಿತಾ ಸರಗಳ್ಳನ | ನಿಂತಲ್ಲೆ ಮಂಕಾಗಿಸುವ ಮಹಿಳೆಯರು ಶಿವಮೊಗ್ಗದಲ್ಲಿದ್ದಾರಾ?
kote police station

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಹೈಟೆಕ್‌ ಕಲಿಯುಗದಲ್ಲಿ ಇನ್ನೂ ಕೂಡು ಮಂಕ ಕವಿಯುವಂತೆ ಮಾಡಬಹುದಾ? ಹೀಗೊಂದು ಪ್ರಶ್ನೆಗೆ ಉತ್ತರವಾಗಿ ಹೌದು ಎಂದು ಹೇಳಬಹುದಾದ ಶಂಕಿತ ಘಟನೆಯೊಂದು ಶಿವಮೊಗ್ಗದ ಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಡೆದ ಘಟನೆಯನ್ನು ಸಂಕ್ತಿಪವಾಗಿ ಹೇಳುವುದಕ್ಕಿಂತ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ವಿವರವಾಗಿ ನೋಡಬೇಕಿದೆ. 

ಏನಿದು ಘಟನೆ 

ದಿನಾಂಕ:-22/05/2024 ರಂದು ಬೆಳಿಗ್ಗೆ 10-45 ಗಂಟೆಗೆ ಮಹಿಳೆಯೊಬ್ಬರು ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿರುವ ಕಾಳಿಕಾಪರಮೇಶ್ವರಿ ಸೋಸೈಟಿಗೆ ಹೋಗಿ ವಾಪಾಸು ಗಾಂಧಿಬಜಾರ್ ನಾಗಪ್ಪನ ಕೇರಿಯ ಕಡೆಗೆ ಹೋಗುತ್ತಿದ್ದರು. ಅವರ ಹೆಸರು ಲತಾ ಎಂದುಕೊಳ್ಳಿ (ಹೆಸರು ಸತ್ಯವಾದುದಲ್ಲ).. ಅವರು ಹೀಗೆ ಹೋಗುವಾಗ ಅವರ ಬೆನ್ನಹಿಂದೆ  ಸುಮಾರು 40-50 ವರ್ಷ ವಯಸ್ಸಿನ ಇಬ್ಬರು ಅಪರಿಚಿತ ಮಹಿಳೆಯರು ಫಾಲೋ ಮಾಡಿಕೊಂಡು ಬಂದಿದ್ದಾರೆ. ನಾಗಪ್ಪನ ಕೇರಿ ಸಮೀಪ ಲತಾರವರ  ಬೆನ್ನು ತಟ್ಟಿದ ಇಬ್ಬರು ಮಹಿಳೆಯರು ಆನಂತರ ಮಾಡಿದ್ದೇ ಬೇರೆ. 

ಮುಂದೆ ಹೋಗುತ್ತಿದ್ದ ಲತಾ, ಬೆನ್ನು ತಟ್ಟಿದವರು ಯಾರು ಎಂದು ತಿರುಗಿ ನೋಡಿದ್ದಾರೆ. ಅಷ್ಟರಲ್ಲಿ ಮಹಿಳೆಯರ ಪೈಕಿ ಓರ್ವಳು ಲತಾ ಕೈಗೆ ಏನನ್ನೋ ಸವರಿದ್ದಾರೆ. ಇದರಿಂದ ತಕ್ಷಣವೇ ಲತಾರಿಗೆ ಏನೋ ಆದಂತಾಗಿ, ಅವರಿಗೆ ಮಂಕು ಕವಿದಿದೆ. ಈ ವೇಳೆ  ಇಬ್ಬರು ಅಪರಿಚಿತರು ಅವರ ಕುತ್ತಿಗೆಯಲ್ಲಿದ್ದ ಸುಮಾರು 67,000/ -ರೂ ಬೆಲೆಬಾಳುವ ಸುಮಾರು 10ಗ್ರಾಂ ತೂಕದ ಬಂಗಾರದ ಸರವನ್ನು ಬಿಚ್ಚಿಕೊಡುವಂತೆ ಹೇಳಿದ್ಧಾರೆ. ಯಾವ ವಿರೋಧವನ್ನು ತೋರದ ಲತಾರವರು ತಮ್ಮ  ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಬಿಚ್ಚಿಕೊಟ್ಟಿದ್ದಾರೆ.ಇಷ್ಟೆ ಅಲ್ಲಿಂದ ಇಬ್ಬರು ಮಹಿಳೆಯರು ಕಾಲ್ಕಿತ್ತಿದ್ದಾರೆ.

ಕೆಲವೇ ನಿಮಿಷಗಳಲ್ಲಿ ನಡೆದು ಹೋದ ಘಟನೆಯಲ್ಲಿ ಸ್ಥಳೀಯರಿಗೂ ಅನುಮಾನ ಬರಲಿಲ್ಲ. ಅತ್ತ ಲತಾರಿಗೂ ಏನಾಗಿದೆ ಎಂದು ಗೊತ್ತಾಗಲಿಲ್ಲ. ಸರ ಬಿಚ್ಚಿಕೊಟ್ಟ ಕೆಲವೇ ಸೆಕೆಂಡ್‌ಗಳಲ್ಲಿ ವಾಸ್ತವದ ಅರಿವಿಗೆ ಬಂದ ಲತಾರವರು ಮಹಿಳೆಯರನ್ನು ಹುಡುಕಾಡಲು ಆರಂಭಿಸಿದ್ದಾರೆ. ಒಂದು ಆಟೋವನ್ನು ಹಿಡಿದು ಅಲ್ಲಿಯೇ ಸುತ್ತಮುತ್ತ ತಲಾಶ್‌ ಮಾಡಿದ್ದಾರೆ. ಮಹಿಳೆಯರು ಅಷ್ಟರಲ್ಲಿಯೇ ಎಸ್ಕೇಪ್‌ ಆಗಿದ್ದರಿಂದ ಬೇರೆ ದಾರಿ ಕಾಣದೆ ಮನೆಗೆ ಹೋಗಿದ್ದಾರೆ. ಬಳಿಕ ಕುಟುಂಬಸ್ಥರ ಬಳಿ ವಿಚಾರಿಸಿ ಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. 

ಹಾಡಹಗಲೇ, ರಶ್‌ ಇರುವ ರಸ್ತೆಯಲ್ಲಿ ಒಬ್ಬ ಮಹಿಳೆಗೆ ವಾಸ್ತವ ಅರಿವು ಇರದಂತೆ ಮಾಡಿ, ಅವರಿಂದಲೇ ಚಿನ್ನದ ಸರವನ್ನು ಕಳಚಿಸಿ ಪಡೆದುಕೊಂಡು ಹೋಗುತ್ತಾರೆ ಎಂದರೇ, ಇದರ ಹಿಂದೆ ಏನೂ ನಡೆದಿರಬಹುದು ಎಂಬುದು ತೀವ್ರ ಕುತೂಹಲ ಹಾಗೂ ಆತಂಕವನ್ನು ಮೂಡಿಸುತ್ತದೆ. ವೈಜ್ಞಾನಿಕವಾಗಿಯು ಹೀಗೆ ಕಳ್ಳತನ ಮಾಡಬಹುದು ಎಂಬುದಕ್ಕೆ ಬೆಲ್‌ ಬಾಟಮ್‌ ಸಿನಿಮಾವೇ ಸಾಕ್ಷಿಯಾಗಿದೆ. ಅದೇ ರೀತಿಯಲ್ಲಿ ಇಲ್ಲಿ ಏನಾದರೂ ನಡೆದಿದೆಯಾ? ಅಥವಾ ಇಡೀ ಘಟನೆಯು ಬೇರೆಯದ್ದೆ ರೀತಿಯಲ್ಲಿ ನಡೆಯಿತೆ? ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ. 

A woman named Latha was robbed of her gold chain worth Rs. 67,000 in Shivamogga. Two unidentified women followed her, touched her with something that made her lose consciousness, and then convinced her to remove her chain.