ಶಿವಮೊಗ್ಗ ವಿಮಾನ ನಿಲ್ದಾಣ | ತಿರುಪತಿಯಿಂದ ಶಿವಮೊಗ್ಗಕ್ಕೆ ಬಂದ ವಿಮಾನ ಹೈದರಾಬಾದ್‌ಗೆ ಡೈವರ್ಟ್ ಆಗಿದ್ದೇಕೆ?
Shivamogga Airport faced weather-related issues again as a flight from Tirupati was diverted to Hyderabad due to unfavorable conditions.
SHIVAMOGGA | MALENADUTODAY NEWS | May 27, 2024 ಮಲೆನಾಡು ಟುಡೆ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮತ್ತೆ ಹವಾಮಾನದ ವೈಪರಿತ್ಯ ಸಮಸ್ಯೆ ಉಂಟುಮಾಡಿದ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ಏರ್ ಪೋರ್ಟ್‌ನಲ್ಲಿ ಪ್ರತಿಕೂಲ ವಾತಾವರಣದಿಂದಾಗಿ ತಿರುಪತಿಯಿಂದ ಬಂದ ವಿಮಾನ ಹೈದರಾಬಾದ್‌ಗೆ ವಾಪಸ್ ಆದ ಘಟನೆ ಬಗ್ಗೆ ವರದಿಯಾಗಿದೆ.
ಪ್ರಕರಣದ ವಿವರ ನೋಡುವುದಾದರೆ, ಕಳೆದ ಶನಿವಾರ ಸ್ಟಾರ್ ಏರ್ ವಿಮಾನವು ಹವಾಮಾನ ವೈಪರಿತ್ಯದಿಂದ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಲಿಲ್ಲ, ತಿರುಪತಿಯಿಂದ ಮಧ್ಯಾಹ್ನ 2 ಗಂಟೆಗೆ ಬಂದ ವಿಮಾನ ಏರ್‌ಪೋರ್ಟ್‌ನಲ್ಲಿ ಇಳಿಯದೇ ಹೈದರಾಬಾದ್‌ಗೆ ತೆರಳಿದೆ
ರನ್‌ವೇ ಸ್ಪಷ್ಟವಾಗಿ ಕಾಣದೇ ಇದ್ದುದ್ದರಿಂದ ವಿಮಾನ ಲ್ಯಾಂಡ್ ಆಗಲಿಲ್ಲ ಎನ್ನಲಾಗಿದೆ. ಇನ್ನೂ ಹೈದ್ರಾಬಾದ್‌ಗೆ ತೆರಳಿದ ವಿಮಾನ ಅಲ್ಲಿಂದ ಮತ್ತೆ ಶಿವಮೊಗ್ಗಕ್ಕೆ ಸಂಜೆ 4.30 ರ ಸುಮಾರಿಗೆ ಆಗಮಿಸಿದೆ. ವಿಮಾನದ ಲ್ಯಾಂಡಿಂಗ್ ಸಮಸ್ಯೆಗೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
Shivamogga Airport faced weather-related issues again as a flight from Tirupati was diverted to Hyderabad due to unfavorable conditions.