ನೈರುತ್ಯ ಪದವೀಧರ ಕ್ಷೇತ್ರ | ಗೆದ್ದ ಡಾಕ್ಟರ್‌ ಧನಂಜಯ್‌ ಸರ್ಜಿ | ಆಯನೂರು ಮಂಜುನಾಥ್‌ಗೆ ಮತ್ತೆ ಸೋಲು

Southwestern Graduate Constituency | Dr. Dhananjay Sarji won Ayanur Manjunath lost again

ನೈರುತ್ಯ ಪದವೀಧರ ಕ್ಷೇತ್ರ  | ಗೆದ್ದ ಡಾಕ್ಟರ್‌ ಧನಂಜಯ್‌ ಸರ್ಜಿ | ಆಯನೂರು ಮಂಜುನಾಥ್‌ಗೆ ಮತ್ತೆ ಸೋಲು
Southwestern Graduate Constituency , Dr Dhananjay Sarji , Ayanur Manjunath

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆ 

ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ಭಾರಿ ಅಂತರದಿಂದ ಜಯಗಳಿಸಿದ್ದಾರೆ. 

ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆಲುವು ಸಾಧಿಸಿದ್ರು. 

ಡಾ.ಧನಂಜಯ್‌ ಸರ್ಜಿ  ಅವರು ಅಂತಿಮ ಸುತ್ತಿನ ವೇಳೆಗೆ 37,627 ಮತಗಳನ್ನು ಪಡೆದು ಕಾಂಗ್ರೆಸ್‌ ಅಭ್ಯರ್ಥಿ ಆಯನೂರು ಮಂಜುನಾಥ್‌ ಅವರನ್ನು 24,111 ಮತಗಳ ಅಂತರದಿಂದ ಸೋಲಿಸಿದರು. ಮಂಜುನಾಥ್ 13,516 ಮತ ಪಡೆದರು. ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ರಘುಪತಿ ಭಟ್‌ 7039 ಮತ ಗಳಿಸಿದರು. ಎಸ್‌ಪಿ ದಿನೇಶ್‌ 2518 ಮತಗಳನ್ನಷ್ಟೆ ಗಳಿಸಿದರು.