ಬ್ರೈಟ್‌ಗೆ ಊಟಕ್ಕೆ ಬಂದ ಸಾಗರ ನಿವಾಸಿ ಮರೆತು ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ಏಳು ಲಕ್ಷ | ಆಮೇಲೆ ನಡೆದಿದ್ದೆ ಇದು

man named Lokesh accidentally left his bag containing seven lakh rupees in cash at a hotel in Shivamogga. Doddapet police station, and a team of officers successfully tracked down Hemant Kumar and recovered the stolen money.

ಬ್ರೈಟ್‌ಗೆ ಊಟಕ್ಕೆ ಬಂದ ಸಾಗರ ನಿವಾಸಿ ಮರೆತು ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ಏಳು ಲಕ್ಷ | ಆಮೇಲೆ ನಡೆದಿದ್ದೆ ಇದು
Doddapet police station

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆ 

ಶಿವಮೊಗ್ಗದ ದೊಡ್ಡಪೇಟೆ ಪೊಲೀಸರು ಸಿಂಪಲ್‌ ಆದರೆ ಅಷ್ಟೆ ಮುಖ್ಯವೆನಿಸಿದ್ದ ಕೇಸ್‌ವೊಂದನ್ನ ಬಗೆಹರಿಸಿದ್ದಾರೆ. ಈ ಮೂಲಕ ಊಟಕ್ಕೆ ಬಂದು ದುಡ್ಡು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಅವರಿಗೆ ಸೇರಬೇಕಿದ್ದ ಏಳು ಲಕ್ಷ ರೂಪಾಯಿಗಳನ್ನ ವಾಪಸ್‌ ಕೊಡಿಸಿದ್ದಾರೆ. 

ಪ್ರಕರಣದ ವಿವರ ನೋಡುವುದಾದರೆ, ಕಳೆದ 04-06-2024 ರಂದು ರಾತ್ರಿ ಸಾಗರದ ಲೋಕೆಶ್‌ ಎಂಬವರು ಶಿವಮೊಗ್ಗ ಬ್ರೈಟ್ ಹೋಟೇಲ್ ನಲ್ಲಿ ಊಟ ಮಾಡಲು ಬಂದಿದ್ದಾರೆ. ಊಟ ಮುಗಿಸಿ ಹೊರಟ ಅವರು ತಮ್ಮ ಬ್ಯಾಗ್‌ನ್ನ ಟೇಬಲ್‌ ಮೇಲೆ ಬಿಟ್ಟು ಹೋಗಿದ್ದರು. ಯಾವುದೋ ಜ್ಞಾನದಲ್ಲಿ ಬ್ಯಾಗ್‌ ಮರೆತಿದ್ದೆ ಅವರಿಗೆ ಮುಳುವಾಗಿತ್ತು. ಅವರು ಟೇಬಲ್‌  ಮೇಲೆ ಬಿಟ್ಟು ಹೋಗಿದ್ದ ಬ್ಯಾಗ್‌ನಲ್ಲಿ ಏಳು ಲಕ್ಷ ರೂಪಾಯಿ ಕ್ಯಾಶ್‌ ಇತ್ತು. 

ಹೌದು ಲೋಕೇಶ್‌ ಟೇಬಲ್‌ ಮೇಲೆ ಬ್ಯಾಗ್‌ ಬಿಟ್ಟು ತಮ್ಮ ಕಾರಿನ ಬಳಿ ಹೋಗಿದ್ದಾರೆ. ಅಲ್ಲಿ ಬ್ಯಾಗ್‌ ನೆನಪಾಗಿ ವಾಪಸ್‌ ಬ್ರೈಟ್‌ ಹೋಟೆಲ್‌ಗೆ ಬಂದಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಬ್ಯಾಗ್‌ ಇರಲಿಲ್ಲ. ಆ ಬಳಿಕ ಹೋಟೆಲ್‌ ಸಿಬ್ಬಂದಿಗೆ ರಿಕ್ವೆಸ್ಟ್‌ ಮಾಡಿ ಬ್ಯಾಗ್‌ ಪರಿಶೀಲನೆಗೆ ಸಿಸಿ ಕ್ಯಾಮರಾದ ದೃಶ್ಯಾವಳಿ ಓಪನ್‌ ಮಾಡಿಸಿದ್ದಾರೆ. ಅದರಲ್ಲಿ ಸರ್ವರ್ ಕೆಲಸ ಮಾಡುವ ಹೇಮಂತ್ ಕುಮಾರ್ ಎಂಬುವವನು ಬ್ಯಾಗ್ ನ್ನು ತೆಗೆದು ನೋಡಿ ಸ್ಟೋರ್ ರೂಮಿನಲ್ಲಿ ಇಡುವ ದೃಶ್ಯಾವಳಿ ಕಾಣಿಸಿದೆ. 

ತಕ್ಷಣವೇ ಹೋಟೆಲ್‌ ಸಿಬ್ಬಂದಿ  ಪೋನ್ ಮಾಡಿ ಹಣದ ಬ್ಯಾಗ್ ನ ಬಗ್ಗೆ ವಿಚಾರ ಮಾಡಿದ್ದಾರೆ. ಆಗ ಆತ ಯಾವುದೇ ಬ್ಯಾಗ್, ನಗದು ಹಣ ನಾನು ತೆಗೆದುಕೊಂಡಿಲ್ಲವೆಂದು ಹೇಳಿ ಪೋನ್ ಕಟ್ ಮಾಡಿದ್ದ. ಅಲ್ಲದೆ ಮರುದಿನ ಬೆಳಿಗ್ಗೆ ಹೋಟೇಲ್ ನ ಕೆಲಸಕ್ಕೂ ಕೂಡ ಬಂದಿರಲಿಲ್ಲ. ಹೀಗಾಗಿ ವಿಧಿ ಇಲ್ಲದೆ ಲೋಕೇಶ್‌  ಹೇಮಂತ್ ಕುಮಾರ್ ಮೇಲೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.  ಕಲಂ 380 ಐಪಿಸಿ ಕೇಸ್‌ ದಾಖಲಿಸಿದ್ದ ರವಿ ಪಾಟೀಲ್, ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದ ಸುರೇಶ್, ಪಿಎಸ್ಐ, ಹೆಚ್.ಸಿ ತಿಮ್ಮಾಭೋವಿ, ಅಣ್ಣಪ್ಪ, ಸುರೇಶ್, ಪಾಲಾಕ್ಷ ನಾಯ್ಕ್, ಸಿಪಿಸಿ - ಚಂದ್ರಾನಾಯ್ಕ್, ಮನೋಹರ್, ನಿತಿನ್, ಪುನಿತ್ ರಾವ್, ಬಸವರಾಜ್ ರವರ ತಂಡ ಆರೋಪಿಯನ್ನ ಪತ್ತೆ ಮಾಡಿ, ದೂರುದಾರರ ಹಣವನ್ನು ವಾಪಸ್‌ ಕೊಡಿಸಿದೆ.