ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ | ಮಾಜಿ ನ್ಯಾಯಾಧೀಶರನ್ನ ಭೇಟಿಯಾದ ಡಾ.ಧನಂಜಯ್‌ ಸರ್ಜಿ

South-West Graduate Constituency Election | Dr Dhananjay Sarji meets former judge Dr. MP Renukacharya ,Dhananjay Sarji,South West Graduate Constituency Election

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ |  ಮಾಜಿ ನ್ಯಾಯಾಧೀಶರನ್ನ ಭೇಟಿಯಾದ ಡಾ.ಧನಂಜಯ್‌ ಸರ್ಜಿ
Dr. MP Renukacharya ,Dhananjay Sarji,South West Graduate Constituency Election

SHIVAMOGGA | MALENADUTODAY NEWS | May 21, 2024  ಮಲೆನಾಡು ಟುಡೆ

 

ಶಿವಮೊಗ್ಗದಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ.ಅಸಮಾಧಾನದ ನಡುವೆ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಡಾ.ಧನಂಜಯ್‌ ಸರ್ಜಿಯವರು ಮತದಾರರಿರುವಲ್ಲಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ. 

 

ಇದಕ್ಕೆ ಸಾಕ್ಷಿ ಎಂಬಂತೆ  ಡಾ ಧನಂಜಯ ಸರ್ಜಿ ಅವರು ಮಾಜಿ ನ್ಯಾಯಾಧೀಶರು ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಜಿಲ್ಲಾಧ್ಯಕ್ಷರಾದ  ವೀರಭದ್ರಪ್ಪ ಪೂಜಾರಿ ಅವರು ಮತ್ತು ವಕೀಲರನ್ನು ವಿನೋಬನಗರದ ಅವರ ನಿವಾಸದಲ್ಲಿ ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದರು.

 

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಜಿಲ್ಲಾ ಬಿಜೆಪಿ ಖಂಜಾಂಚಿ ಎನ್. ಡಿ. ಸತೀಶ್, ನಗರ ಅಧ್ಯಕ್ಷ ಮೋಹನ ರೆಡ್ಡಿ, ಸೋಮಶೇಖರ್ ವಿ. ಶೇಟ್ ಸೇರಿದಂತೆ ಹಲವರು ಹಾಜರಿದ್ದರು