ಪದವೀಧರ ಕ್ಷೇತ್ರದಲ್ಲಿ ಡಾಕ್ಟರ್‌ ಪಲ್ಸ್‌ | ಡಾ.ಧನಂಜಯ್‌ ಸರ್ಜಿ ಹೇಳಿದ್ದೇನು?

Dr. Dhananjay Sarji, the BJP candidate for the Southwest Graduate Constituency, campaigned in Thirthahalli today.

ಪದವೀಧರ ಕ್ಷೇತ್ರದಲ್ಲಿ ಡಾಕ್ಟರ್‌ ಪಲ್ಸ್‌ |  ಡಾ.ಧನಂಜಯ್‌ ಸರ್ಜಿ ಹೇಳಿದ್ದೇನು?
Dr. Dhananjay Sarji,BJP candidate, Southwest Graduate Constituency, Thirthahalli today

SHIVAMOGGA | MALENADUTODAY NEWS | May 30, 2024  ಮಲೆನಾಡು ಟುಡೆ

ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಾ.ಧನಂಜಯ್‌ ಸರ್ಜಿ ಇವತ್ತು ತೀರ್ಥಹಳ್ಳಿಯಲ್ಲಿ ಮತಬೇಟೆಯಲ್ಲಿ ತೊಡಗಿದ್ದರು. ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ತತೀರ್ಥಹಳ್ಳಿಯ ಸರ್ಕಾರಿ ಜೂನಿಯರ್‌ ಪ್ರೌಢಶಾಲೆಗೆ ಭೇಟಿಕೊಟ್ಟ ಅವರು ಪದವೀಧರರು ಹಾಗೂ ಶಿಕ್ಷಕರಲ್ಲಿ ಮತಯಾಚನೆ ಮಾಡಿದರು.  

ವೇಳೆ ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕರದ ಆರಗ ಜ್ಞಾನೇಂದ್ರ, ನವೀನ ಹೆದ್ದೂರು , ಸಂದೇಶ್ ಜಾವಳ್ಳಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಶೋಕ್ ಮೂರ್ತಿ ಅಭ್ಯರ್ಥಿಗೆ ಸಾಥ್‌ ನೀಡಿದ್ರು. 

ಇನ್ನೂ ಈ ವೇಳೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವೃತ್ತಿಯಲ್ಲಿ ವೈದ್ಯನಾದರೂ ಪ್ರವೃತ್ತಿಯಲ್ಲಿ ಸ್ವಯಂ ಸೇವಕ , ಪ್ರತಿಯೊಬ್ಬ ಪದವೀಧರರ ಸಮಸ್ಯೆ ಏನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ ಸಾಮಾನ್ಯ ಜನರ ಕಷ್ಟ ಏನು ಎಂಬುದನ್ನು ಅರ್ಥ  ಮಾಡಿಕೊಂಡಿದ್ದೇನೆ ಎಲ್ಲರ ಧ್ವನಿಯಾಗಿ ನಾನು ವಿಧಾನ ಪರಿಷತ್ ಕೆಲಸ ಮಾಡುತ್ತೇನೆ ನೂರಕ್ಕೆ ನೂರರಷ್ಟು ನಾನು ಮತ್ತು ಭೋಜೇಗೌಡರು ಮೊದಲ ಪ್ರಾಶಸ್ತ್ಯದ ಮತದಲ್ಲಿ ಮೊದಲ ಹಂತದಲ್ಲಿ ಗೆಲುವನ್ನು ಸಾಧಿಸುತ್ತೇವೆ ಎಂದು ಹೇಳಿದರು