ಡಾ.ಧನಂಜಯ್‌ ಸರ್ಜಿ ಪರ ಖುದ್ದು ಅಖಾಡಕ್ಕಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ | ಏನಂದ್ರು?

A meeting was held at the Chikkamagaluru District BJP office to discuss the upcoming Vidhan Parishad elections for the Southwest Graduates' and Teachers' constituencies. B.Y. Vijayendra, the state president of the Bharatiya Janata Party, expressed confidence

ಡಾ.ಧನಂಜಯ್‌ ಸರ್ಜಿ ಪರ ಖುದ್ದು ಅಖಾಡಕ್ಕಿಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ | ಏನಂದ್ರು?
Chikkamagaluru District BJP, Vidhan Parishad elections

SHIVAMOGGA | MALENADUTODAY NEWS | May 27, 2024 12:00 PM  ಮಲೆನಾಡು ಟುಡೆ 

ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಹಣದ ಬಲದಿಂದ ಯಾರನ್ನ ಬೇಕಾದರೂ ಗೆಲ್ಲಿಸುತ್ತೇವೆ ಎನ್ನುವ ಭ್ರಮೆಯಲ್ಲಿದೆ, ಇದರಿಂದ ಕಾಂಗ್ರೆಸ್ ಪಕ್ಷವನ್ನು ಹೊರತರಬೇಕೆಂದೆರೆ ಪರಿಷತ್ ಚುನಾವಣೆಯನ್ನು ಗೆಲ್ಲಲ್ಲೆಬೇಕು ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಹೇಳಿದರು. 

ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಭಾನುವಾರ  ಹಮ್ಮಿಕೊಂಡಿದ್ದ ಚುನಾವಣಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಾ ಕಾಂಗ್ರೆಸ್ ಸರ್ಕಾರದ ಈ ಅವಧಿಯಲ್ಲಿ ಯಾವುದೇ ಕ್ಷೇತ್ರಕ್ಕೆ ನಯಾಪೈಸೆ ರೂಪಾಯಿ ಕೂಡ ಅನುದಾನ ಕೊಟ್ಟಿಲ್ಲ, ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ ಎಂದರು

ಕರ್ನಾಟಕ ರಾಜ್ಯ ಹಿಂದೆಂದೂ ಇಂತಹ ಕೆಟ್ಟ ಆಡಳಿತವನ್ನು ಕಂಡಿರಲಿಲ್ಲ ಎಂದು ಆರೋಪಿಸಿದ ಅವರು, ದೇಶದಲ್ಲಿ ಈ ಭಾರಿ ಸ್ಪಷ್ಟ ಬಹುಮತ ಬರುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿ ಆಗುತ್ತಾರೆ, ಇದೆ ರೀತಿ ಪರಿಷತ್ ಚುನಾವಣೆಯನ್ನು ಕೂಡ ನಾವು ಗೆಲ್ಲುತ್ತೇವೆ ಎಂದು ಹೇಳಿದರು 

ನೈರುತ್ಯ  ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ ಧನಂಜಯ ಸರ್ಜಿ ಮತ್ತು ಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರನ್ನು ಗೆಲ್ಲಿಸಲು ನಮ್ಮ ಕಾರ್ಯಕರ್ತರು , ನಮ್ಮ ಪಕ್ಷದ ಮುಖಂಡರು , ಜೆಡಿಎಸ್ ಕಾರ್ಯಕರ್ತರು ಒಂದಾಗಿ ಅತ್ಯಂತ ಶ್ರಮದಿಂದ ಕೆಲಸ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ, ಇತ್ತೀಚೆಗಷ್ಟೇ ಬಿಜೆಪಿ ಜೆಡಿಎಸ್ ಮೈತ್ರಿಯಾಗಿ ಎರಡೂ ಪಕ್ಷದ ಕಾರ್ಯಕರ್ತರು ಅತ್ಯಂತ ಶ್ರದ್ದೆಯಿಂದ ಕೆಲಸ ಮಾಡಿ ಯಶಸ್ವಿಯಾಗಿ ಚುನಾವಣೆಯನ್ನು ನಡೆಸಿದ್ದೇವೆ. ಇದೆ ರೀತಿ ಪರಿಷತ್ ಚುನಾವಣೆಯನ್ನು ಶ್ರದ್ಧೆಯಿಂದ ಕೆಲಸ ಮಾಡಿ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು

ರಾಜಕಾರಣದಲ್ಲಿ ಜಾತಿ ಅನ್ನುವುದು ಇರುವುದಿಲ್ಲ, ಡಾ ಧನಂಜಯ ಸರ್ಜಿಯವರು ಒಬ್ಬ ಸಜ್ಜನ ವ್ಯಕ್ತಿ , ರಾಜಕಾರಣಕ್ಕೆ ಬರಬೇಕು ಎಂದುಕೊಂಡು ಬಂದವರಲ್ಲ, ಪ್ರಾಮಾಣಿಕತೆಯಿಂದ ಜನರ ಸೇವೆಯನ್ನು ಮಾಡಬೇಕು, ಉತ್ತಮ ರಾಜಕಾರಣವನ್ನು ಮಾಡಬೇಕು ,ಧನಂಜಯ ಸರ್ಜಿಯಂತವರು ರಾಜಕಾರಣಕ್ಕೆ ಬರುವುದರಿಂದ ರಾಜಕಾರಣಕ್ಕೆ ಒಂದು ಹೊಸ ರೂಪ ಸಿಗುವಂತಾಗುತ್ತದೆ , ರಾಜಕಾರಣಿಗಳಿಗೆ ಉತ್ತಮ ಹೆಸರು ಸಿಗುತ್ತದೆ, ಸರ್ಜಿಯವರ ಮೇಲೆ ನಮಗೆ ವಿಸ್ವಾಸ ಇದೆ ಎಂದರು

ಚುನಾವಣೆಗೆ ಇನ್ನು ಕೇವಲ ಏಳು ದಿನಗಳು ಮಾತ್ರ ಬಾಕಿ ಇದೆ, ಶಿಕ್ಷಕರ  ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡರ ಕ್ರಮ ಸಂಖ್ಯೆ 1 ಮತ್ತು ಬಿಜೆಪಿ ಅಭ್ಯರ್ಥಿ ಡಾ ಧನಂಜಯ ಸರ್ಜಿ ಅವರ ಕ್ರಮ ಸಂಖ್ಯೆ 2 ,  ಈ ಇಬ್ಬರು ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಕೇಳಬೇಕು ಎಂದು ಮನವಿ ಮಾಡಿದರು.  

ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೇವರಾಜ್ ಶೆಟ್ಟಿ, ನೈರುತ್ಯ  ಪದವೀಧರ ಕ್ಷೇತ್ರದ  ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ, ನೈರುತ್ಯ  ಶಿಕ್ಷಕರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಭಾರಿ ಹಾಗೂ ಮಾಜಿ ಸಚಿವರಾದ ಸಿ. ಟಿ. ರವಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್ ದತ್ತಾತ್ರಿ , ಸ್ಥಳೀಯ ಬಿಜೆಪಿ ಮುಖಂಡರು  ಸೇರಿದಂತೆ ಹಲವರು ಉಪಸ್ಥಿತರಿದ್ದರು.