ಶಿವಮೊಗ್ಗ ಗ್ಯಾಂಗ್‌ ವಾರ್‌ BREAKING NEWS | ಕೆಆರ್‌ ಪುರಂ ಆದಿಲ್‌ ಸಹಚರ ಅಂಡಾನಿಗೆ ಪೊಲೀಸ್‌ ಗುಂಡೇಟು!

SHIVAMOGGA GANG WAR BREAKING NEWS |Shivamogga police arrest murder accused after firing at him

ಶಿವಮೊಗ್ಗ ಗ್ಯಾಂಗ್‌ ವಾರ್‌ BREAKING NEWS  |  ಕೆಆರ್‌ ಪುರಂ ಆದಿಲ್‌ ಸಹಚರ ಅಂಡಾನಿಗೆ ಪೊಲೀಸ್‌ ಗುಂಡೇಟು!
Shivamogga police , SHIVAMOGGA GANG WAR

SHIVAMOGGA | MALENADUTODAY NEWS | May 13, 2024  

ಶಿವಮೊಗ್ಗ ಗ್ಯಾಂಗ್‌ವಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಆರೋಪಿಯೊಬ್ಬನ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶೋಹೆಬ್‌ನನ್ನ ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಯಥಾಪ್ರಕಾರ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಆತನ ಕಾಲಿಗೆ ಗುಂಡೇಟು ಕೊಟ್ಟಿದ್ದಾರೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನ ಬೀರನಕೆರೆ ಬಳಿ ಈ ಘಟನೆ ನಡೆದಿದ್ದು ಪಿಎಸ್‌ಐ ಕುಮಾರ್‌ ಶೋಹೆಬ್‌ ಕಾಲಿಗೆ ಗುಂಡು ಹಾರಿಸಿದ್ದಾರೆ.

ಇನ್ನೂ ಶೋಹೆಬ್‌ ಅಲಿಯಾಸ್‌ ಅಂಡಾ ನ ವಿರುದ್ಧ ಎರಡು 307 ಕೇಸ್‌ ಸೇರಿದಂತೆ ಒಟ್ಟು ಐದು ಕೇಸ್‌ಗಳು ಶಿವಮೊಗ್ಗದ ಸ್ಟೆಷನ್‌ಗಳಲ್ಲಿ ದಾಖಲಾಗಿವೆ.