ಆಗ ಆಯನೂರು ಮಂಜುನಾಥ್‌ | ಈಗ ಕೆಎಸ್‌ ಈಶ್ವರಪ್ಪ | ನಿಜವಾಯ್ತು ಶಿವಮೊಗ್ಗ ಚುನಾವಣಾ ಚಾಣಕ್ಯರ ಸಮೀಕ್ಷೆ ಲೆಕ್ಕ

Lok Sabha election results in Shivamogga mirrored the assembly election results. KS Eshwarappa, Ayanur Manjunath, Election Survey, Geeta Sivarajkumar, Sivarajkumar, Madhu Bangarappa,

ಆಗ ಆಯನೂರು ಮಂಜುನಾಥ್‌ | ಈಗ ಕೆಎಸ್‌ ಈಶ್ವರಪ್ಪ |  ನಿಜವಾಯ್ತು ಶಿವಮೊಗ್ಗ ಚುನಾವಣಾ ಚಾಣಕ್ಯರ ಸಮೀಕ್ಷೆ ಲೆಕ್ಕ
KS Eshwarappa, Ayanur Manjunath, Election Survey, Geeta Sivarajkumar, Sivarajkumar, Madhu Bangarappa,

SHIVAMOGGA | MALENADUTODAY NEWS | Jun 4, 2024  ಮಲೆನಾಡು ಟುಡೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಚಾಣಕ್ಯರ ಭವಿಷ್ಯ ನಿಜವಾಗಿದೆ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶದ ಮಾದರಿಯಲ್ಲಿಯೇ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಕೆಎಸ್‌ ಈಶ್ವರಪ್ಪನವರ ಚುನಾವಣಾ ರಾಜಕೀಯ ನಿವೃತ್ತಿಯ ಬಳಿಕ ಎಸ್‌ಎನ್‌ ಚನ್ನಬಸಪ್ಪ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಆದರೆ ಅದೆ ಹೊತ್ತಿಗೆ ಬಿಜೆಪಿಯಿಂದ ಬಂಡಾಯ ಸಾರಿದ್ದ ಆಯನೂರು ಮಂಜುನಾಥ್‌ ಜೆಡಿಎಸ್‌ ಅಭ್ಯರ್ಥಿಯಾಗಿ ಎಂಎಲ್‌ಎ ಚುನಾವಣಾ ಅಖಾಡ ಪ್ರವೇಶ ಮಾಡಿದ್ದರು. ಅವರಿಗೆ ಸಿಕ್ಕ ಹೈಪ್‌ ಹಾಗೂ ಸೇರಿದ ಕಾರ್ಯಕರ್ತ ಪಡೆ ಮತ್ತು ಚುನಾವಣಾ ರೂಮರ್‌ಗಳು ಅಂದು ತ್ರಿಕೋನ ಸ್ಪರ್ಧೆಯಾಗುತ್ತದೆ ಕ್ಷೇತ್ರದ ಚುನಾವಣೆ ಎಂದೇ ಭಾವಿಸಲಾಗಿತ್ತು. ಆದಾಗ್ಯು ಶಿವಮೊಗ್ಗದ ಚುನಾವಣಾ ಚಾಣಕ್ಯರುಗಳು ಆಯನೂರು ಮಂಜುನಾಥ್‌ ಗೆಲ್ಲರಾರರು. ಅವರದ್ದು ಗಾಳಿಗುದ್ದಾಟ ಆಗಲಿದೆ ಎಂದಿದ್ದರು. ಪೂರಕವಾಗಿ ಅಂದು ಹೊರಬಿದ್ದ ಫಲಿತಾಂಶದಲ್ಲಿ ಆಯನೂರು ಮಂಜುನಾಥ್‌ ನಿರೀಕ್ಷಿತ ಸಾಧನೆಯನ್ನು ಮಾಡಲಾಗಿರಲಿಲ್ಲ. 

ಇದೀಗ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಕೆಎಸ್‌ ಈ‍ಶ್ವರಪ್ಪನವರದ್ದು ಅದೇ ರೀತಿಯ ಪರಿಸ್ಥಿತಿಯಾಗಿದೆ. ಕೆಎಸ್‌ ಈಶ್ವರಪ್ಪನವರು ಸಾರಿದ ಬಂಡಾಯ, ಅವರೊಂದಿಗೆ ಸೇರಿದ ರಾಷ್ಟ್ರಭಕ್ತ ಬಳಗ ಮತ್ತು ಪ್ರಚಾರಕ್ಕೆಂದು ಹೋದಲ್ಲಿ ಬಂದಲ್ಲಿ ಸೇರಿದ್ದ ಜನಸಮುದಾಯ ಈಶ್ವರಪ್ಪನವರ ಸ್ಪರ್ಧೆಯನ್ನು ತ್ರಿಕೋನ ಸ್ಪರ್ಧೆಯನ್ನಾಗಿಸಿತ್ತು. ನಾನು ಗೆದ್ದಾಗಿದೆ ಎರಡನೇ ಮತ್ತು ಮೂರನೇ ಪ್ಲೇಸ್‌ಗೆ ಕಾಂಪಿಟೇಶನ್‌ ನಡೆಯುತ್ತಿದೆ ಎಂದಿದ್ದ ಕೆಎಸ್‌ ಈಶ್ವರಪ್ಪನವರು ತಮಗೆ ವ್ಯಕ್ತವಾದ ಭಾರೀ ಬೆಂಬಲ ಮತವಾಗುತ್ತದೆ ಎಂದೇ ಭಾವಿಸಿದ್ದರು. 

ಆದರೆ ಫಲಿಶಾಂಶ ಅವರಿಗೆ ವ್ಯತಿರಿಕ್ತವಾಗಿದೆ. ವಿಶೇಷ ಅಂದರೆ ಮತದಾನ ಮುಗಿದ ಬೆನ್ನಲ್ಲೆ ಶಿವಮೊಗ್ಗದ ಚುನಾವಣಾ ಚಾಣಕ್ಯರು ಕೆಎಸ್‌ ಈಶ್ವರಪ್ಪನವರು ಹೆಚ್ಚೆಂದರೆ 25 ಸಾವಿರ ಮತಗಳಿಸಬಹುದು ಎಂದಿದ್ದರು. ಬಿಜೆಪಿ ಕಚೇರಿಯಲ್ಲಿ ಈ ಅಂಕಿಅಂಶ  ಹೆಚ್ಚು ಚರ್ಚೆಯಾಗಿತ್ತು. ಇನ್ನೊಂದೆಡೆ ಅವರು ಒಂದುವರೆಯಿಂದ ಎರಡು ಲಕ್ಷ ಮತ ಪಡೆದು ಗೀತಾ ಶಿವರಾಜ್‌ ಕುಮಾರ್‌ಗೆ ಅನುಕೂಲ ಮಾಡಿಕೊಡುವ ಸಾಧ್ಯತೆ ಇತ್ತು ಎಂಬ ಚರ್ಚೆಗಳು ನಡೆದಿದ್ದವು. ಈ ಪೈಕಿ ಮೊದಲನೇ ಚರ್ಚೆ ಇದೀಗ ನಿಜವಾಗಿದೆ. ಅಂತಿಮವಾಗಿ ಮತ ಎಣಿಕೆಯಲ್ಲಿ ಕೆಎಸ್‌ಇ 30050   ಮತ ಪಡೆದಿದ್ದಾರೆ. ಇದು ಈಶ್ವರಪ್ಪನವರ ಮುಂದಿನ ರಾಜಕಾರಣದ ಹಾದಿಯನ್ನು ಸಹ ಮಬ್ಬಾಗಿಸುವ ಸಾಧ್ಯತೆ ಇದೆ. 

The Lok Sabha election results in Shivamogga mirrored the assembly election results. After K.S. Eshwarappa's retirement