ಕಜಕಿಸ್ಥಾನದಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಬೆದರಿಕೆ ಕರೆ
Former Minister KS Eshwarappa receives threat call from Kazakhstan

KARNATAKA NEWS/ ONLINE / Malenadu today/ May 15, 2023 GOOGLE NEWS / SHIVAMOGGA NEWS
ಶಿವಮೊಗ್ಗ/ ಮಾಜಿ ಸಚಿವ ಕೆಎಸ್ ಈಶ್ವರಪ್ಪ ರವರಿಗೆ ನಿನ್ನೆ ರಾತ್ರಿ ಕಜಕಿಸ್ತಾನದಿಂದ ರಾತ್ರಿ 12ಕ್ಕೆ ಬೆದರಿಕೆ ಕರೆ ಬಂದಿದೆಯಂತೆ. ಇವತ್ತು ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಅವರು ಮಾತನಾಡಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
+7(678)815-46-5 ಈ ನಂಬರ್ನಿಂದ ಮಿಸ್ಡ್ ಕಾಲ್ ಬಂದಿದೆ. ಹಾಗಾಗಿ ಕಾನೂನು ಪ್ರಕಾರ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ ಎಂದ ಈಶ್ವರಪ್ಪನವರು ಮಹಾರಾಷ್ಟ್ರದ ಜಯೇಶ್ ಅಲಿಯಾಸ್ ಶಾಹೀರ್ ಶೇಕ್ ನ ಬಂಧನ ನಂತರ ಆತ ನನ್ನ ಹತ್ಯೆಗೆ ಸ್ಕೆಚ್ ಹಾಕಿದ್ದ ಎಂಬ ವಿಷಯ ತನಿಖಾ ಸಂಸ್ಥೆಗಳಿಂದ ಗೊತ್ತಾಗಿತ್ತು. ಇದೀಗ ಬೆದರಿಕೆ ಕರೆ ಬಂದಿದೆ ಎಂದು ಅವರು ತಿಳಿಸಿದ್ಧಾರೆ.
ಕಾಂಗ್ರೆಸ್ ಬರುತ್ತಲೇ ದೇಶ ವಿರೋಧಿ ಚಟುವಟಿಕೆ ಹೆಚ್ಚಳ
ಬೆಳಗಾವಿಯ ತಿಲಕ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೇ ದೂರು ನೀಡಿದ್ದಾರೆ. ಶಿರಸಿಯಲ್ಲೂ ಹಸಿರು ಬಾವುಟ ಹಾರಾಡಿದೆ. ಸಿದ್ದು-ಡಿಕೆಶಿ ಚುನಾವಣೆಗೆ ಮೊದಲು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದಿದ್ದರು. ಆದರೆ ಈಗ ಸಿದ್ದರಾಮಯ್ಯ ಪರವಾಗಿ ಕುರುಬರು ಹಾಗೂ ಡಿ.ಕೆ.ಶಿವಕುಮಾರ್ ಪರವಾಗಿ ಒಕ್ಕಲಿಗರು ಲಾಬಿ ಮಾಡುತ್ತಿದ್ದಾರೆ .ಇದರಿಂದ ಸಿದ್ದು ಮತ್ತು ಡಿಕೆಶಿ ಜಾತಿವಾದ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಿ.ವೈ ವಿಜಯೇಂದ್ರರನ್ನ ಸೋಲಿಸುವ ಉದ್ದೇಶಕ್ಕೆ ಬಿಎಸ್ವೈ ತೋಟದ ಬಳಿ ವಾಮಚಾರ ನಡೆಸಿದ್ರಾ ದುಷ್ಕರ್ಮಿಗಳು?
ಶಿಕಾರಿಪುರ/ ಶಿವಮೊಗ್ಗ/ ಶಿಕಾರಿಪುರ ತಾಲೂಕು ಬಂಡಿಬೈರನಹಳ್ಳಿ, ಮಜಿರೆ ಸಿದ್ಧನಪುರ ಗ್ರಾಮದ ಸರ್ವೆ ನಂ 36 ರಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರವರಿಗೆ ಸೇರಿದ ಅಡಿಕೆ ತೋಟದ ಕಾಪೌಂಡ್ ಬಳಿ ವಾಮಚಾರ ನಡೆದಿತ್ತಾ? ಬಿ ವೈ ವಿಜಯೇಂದ್ರ ರವರು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸೆಗಲಾಗಿದೆ ಎಂದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೆಂಟ್ ಆಗಿದೆ. ಈ ಸಂಬಂಧ Act & Section: IPC 1860 (U/s-426,447); Karnataka Prevention and Eradication of Inhuman Evil Practices and Black Magic Act, 2017 (U/s-3(2)) ಅಡಿಯಲ್ಲಿ ಕೇಸ್ ಕೂಡ ದಾಖಲಾಗಿದೆ.
ಏನಿದೆ ದೂರಿನಲ್ಲಿ?
ಯಡಿಯೂರಪ್ಪನವರ ತೋಟದಲ್ಲಿ ನಡೆದ ಕೃತ್ಯದ ಸಂಬಂಧ ತೋಟದ ಸಿಬ್ಬಂದಿ ದೂರು ನೀಡಿದ್ದಾರೆ. ದೂರಿನ ಪ್ರಕಾರ, ದಿನಾಂಕ: 11-05-2023 ರಂದು ರಾತ್ರಿ 10-00 ಗಂಟೆಯಿಂದ 10-30 ಗಂಟೆ ನಡುವಿನ ಸಮಯದಲ್ಲಿ 3-4 ಜನರು ದುಷ್ಕರ್ಮಿಗಳು ಕಾಡು ಪ್ರಾಣಿಯೊಂದನ್ನ ಕೊಂದು, ತೋಟದಲ್ಲಿ ಹೂತು ಹಾಕಿದ್ದಾರೆ. ವಿಜಯೇಂದ್ರ ರವರಿಗೆ ಕೇಡನ್ನು ಉಂಟು ಮಾಡುವ ಸಲುವಾಗಿ ತೋಟದ ಕಾಂಪೌಂಡ್ ಬಳಿ ವಾಮಚಾರ ಮಾಡಿ, ಕೊಂದ ಪ್ರಾಣಿಯನ್ನು ಹೂತು ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ಹಾಗೂ ದುಷ್ಕರ್ಮಿಗಳನ್ನು ಹಿಡಿಯಬೇಕು ಎಂದು ದೂರು ನೀಡಲಾಗಿದೆ.
Malenadutoday.com Social media