ಬಿಎಸ್​ವೈ ಮನೆಗೆ ಕಲ್ಲು ಹೊಡೆದಿದ್ದೇಕೆ? ಶಿಕಾರಿಪುರದಲ್ಲಿ ಗೆಲುವು ಸುಲಭನಾ? ಸಂವಾದದಲ್ಲಿ ಬಿ.ವೈ.ವಿಜಯೇಂದ್ರ ಕೊಟ್ಟರು ಉತ್ತರ!

ಹಂಚಿಕೊಳ್ಳಿ
WhatsApp Facebook X Telegram
image_750x500_63876904d8ea9

KARNATAKA NEWS/ ONLINE / Malenadu today/ May 4, 2023 GOOGLE NEWS

ಶಿವಮೊಗ್ಗ ಇವತ್ತು ಬಿಎಸ್​ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ರವರು ಶಿವಮೊಗ್ಗ ಪ್ರೆಸ್ ಟ್ರಸ್ಟ್​ನಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಶಿಕಾರಿಪುರ ಬಿಎಸ್​ ಯಡಿಯೂರಪ್ಪನವರಿಗೆ ಕರ್ಮಭೂಮಿಯಾಗಿತ್ತು. ನನಗೆ  ಶಿಕಾರಿಪುರ ನನ್ನ ಜನ್ಮಭೂಮಿ. ಇನ್ನು ಕರ್ಮಭೂಮಿಯನ್ನಾಗಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ಧಾರೆ. 

50 ಸಾವಿರ ಮತಗಳಿಂದ ಗೆಲುವು! 

ಈ ಬಾರಿ ಶಿಕಾರಿಪುರದಿಂದ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಭರವಸೆ ವ್ಯಕ್ತಪಡಿಸಿದ ಬಿಜೆಪಿ ಅಭ್ಯರ್ಥಿ ಕ್ಷೇತ್ರದ  ಎಲ್ಲಾ ಬೂತ್‌ಗಳಿಗೆ ಈಗಾಗಲೇ ಮೂರು ಬಾರಿ ಭೇಟಿ ಕೊಟ್ಟು ಮತಯಾಚಿಸಲಾಗಿದೆ. ಕಾರ್ಯಕರ್ತರು ರಣೋತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. 

ತೊಂದರೆ ಕೊಡಬೇಕು ಎಂದು ಕಲ್ಲುಹೊಡೆಸಿದ್ರು

ಉತ್ತಮ ಸಂಘಟನೆಯಿಂದ ತಮ್ಮ ಗೆಲುವು ಸುಲಭವಾಗಲಿದೆ ಎಂದ ಬಿವೈವಿ ಬಂಜಾರರ ಮೀಸಲಾತಿ ವಿಷಯಯನ್ನು ಇಟ್ಟುಕೊಂಡು ಕೆಲವರು ಅವರಲ್ಲೇ ಒಡಕು ಸೃಷ್ಟಿಸಲು ಯತ್ನಿಸಿದ್ರು.

ಅಲ್ಲದೆ ಯಡಿಯೂರಪ್ಪರವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅವರ ಮನೆಗೆ ಕಲ್ಲು ಹೊಡೆಸಿದರು. ಆದರೆ ಇದರಿಂದ ಅವರ ಉದ್ದೇಶ ಈಡೇರದು. ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ನಡೆಯದು ಎಂದಿದ್ಧಾರೆ. ಅಲ್ಲದೆ  ಬಂಜಾರರು ಬಿಜೆಪಿ ಪರವಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. 

ಕಾಂಗ್ರೆಸ್ ಗ್ಯಾರೆಂಟಿ ಕಾರ್ಡಿನಿಂದ ಏನೂ ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೇರುವುದೇ ಇಲ್ಲ. ಹಾಗಾಗಿ ಕಾರ್ಡಿನಿಂದ ಲಾಭವಿಲ್ಲ ಎಂದ ವಿಜಯೇಂದ್ರ,  ಜೆಡಿಎಸ್‌ನವರು ಈ ಬಾರಿ ಅತಂತ್ರ ಸರಕಾರವಾಗುತ್ತದೆ ಎನ್ನುವ ಕನಸು ಕಾಣುತಿದ್ದಾರೆ. ಆ ಪಕ್ಷಕ್ಕಂತೂ  ಬಹುಮತ ಬರುವುದಿಲ್ಲ. ಹಾಗಾಗಿ  ಸಮ್ಮಿಶ್ರ ಸರ್ಕಾರ ರಚಿಸಬಹುದೆನ್ನುವ ಭ್ರಮೆಯಲ್ಲಿದೆ ಅಂತಾ ವ್ಯಂಗ್ಯವಾಡಿದ್ರು. 

ಬಜರಂಗದಳ ನಿಷೇಧ ಇದು ಸಾಧ್ಯನಾ?

ಬಜರಂಗದಳದಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುವ ಮಾತನ್ನು ಕಾಂಗ್ರೆಸ್ ಹೇಳಿದೆ. ದೇಶಭಕ್ತ ಸಂಘಟನೆ ಕೇವಲ ಕರ್ನಾಟಕದಲ್ಲಿ ಮಾತ್ರವಿಲ್ಲ, ಹಲವು ರಾಜ್ಯಲ್ಲಿದೆ. ಇದನ್ನು ನಿಷೇಧಿಸುವ ಮಾತು ಹಾಸ್ಯಾಸ್ಪದವಾದುದು ಎಂದ ವಿಜಯೇಂದ್ರರವರು,  ಕಾಂಗ್ರೆಸ್‌ಗೆ ಚುನಾವಣಾ ದಿನ ಹತ್ತಿರ ಬರುತ್ತಿರುವಂತೆಯೇ ವೀರಶೈವರ ಬಗ್ಗೆ ಅನುಕಂಪ ಶುರುವಾಗಿದೆ ಎಂದು ಲೇವಡಿ ಮಾಡಿದರು.


ಚುನಾವಣಾ ಅಖಾಡದಲ್ಲಿ ಮನೆ ‘ಮಗಳು’ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡ್ತಾರಾ ಅದೃಷ್ಟ ಲಕ್ಷ್ಮೀಯರು?

ಶಿವಮೊಗ್ಗ/  ಜಿಲ್ಲೆಯ ಚುನಾವಣೆ ಹೊಸ ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯದ ಅಖಾಡದಲ್ಲಿ ಅಭ್ಯರ್ಥಿಗಳ ಸಂಬಂಧಿಕರು, ಕುಟುಂಬಸ್ಥರು ಅಷ್ಟೆಯಾಕೆ ಮಕ್ಕಳು ಸಹ ಮತಯಾಚನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್​ಸಿ ಯೋಗೇಶ್  ಪರವಾಗಿ ಅವರ ಪತ್ನಿ ಹಾಗೂ ಅವರ ಕುಟುಂಬಸ್ಥರು ಬಂದು ಬಳಗ ಪ್ರಚಾರ ನಡೆಸ್ತಿದೆ. ಇದು ಪಕ್ಷದಲ್ಲಿಯೇ ಅಸಮಾಧಾನಕ್ಕೂ ಕಾರಣವಾಗಿದೆ. ಹಾಗಿದ್ರೂ ಪ್ರಚಾರ ನಂಬಿಕೆಯ ವಿಶ್ವಾಸ ಮೂಡಿಸ್ತಿದೆ. 

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರವರ ಪತ್ನಿ ಕೂಡ ಪ್ರಚಾರದಲ್ಲಿ ಸಾಥ್ ನೀಡುತ್ತಿದ್ದಾರೆ.  ಸೊರಬದಲ್ಲಿ ಮಧು ಬಂಗಾರಪ್ಪರವರ ಪತ್ನಿ ಪ್ರಚಾರದಲ್ಲಿ ತೊಡಗಿದ್ಧಾರೆ. ಭದ್ರಾವತಿಯಲ್ಲಿ ಬಿಕೆ ಸಂಗಮೇಶ್ವರ್​ರವರ ಪರವಾಗಿ ಅವರ ಮಕ್ಕಳು ಚುನಾವಣಾ ಓಡಾಟದಲ್ಲಿ ಸಕ್ರಿಯವಾಗಿದ್ಧಾರೆ. ಹೀಗೆ ಪ್ರತಿಯೊಬ್ಬ ಅಭ್ಯರ್ಥಿಯ ಪರವಾಗಿ ಅವರ ಮನೆಯ ಕಡೆಯವರು ಓಡಾಡುತ್ತಿದ್ಧಾರೆ. 

ಇದರ ನಡುವೆ ಕುತೂಹಲ ಮೂಡಿಸುತ್ತಿರುವುದು ಮನೆಯ ಅದೃಷ್ಟ ಲಕ್ಷ್ಮೀಯರು. ಹೌದು, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣರ ಪರವಾಗಿ ಅವರ ಮಗಳು ಮೇಘ ಪ್ರಚಾರ ನಡೆಸ್ತಿದ್ದಾರೆ. ಇದು ಚುನಾವಣಾ ಅಖಾಡದಲ್ಲಿಯು ಸಂಚಲನ ಮೂಡಿಸ್ತಿದೆ. ನಿನ್ನೆ ಆನಂದಪುರದಲ್ಲಿ ಪ್ರಚಾರ ನಡೆಸಿದ್ದ ಮೇಘಾ ಇವತ್ತು ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. 

ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸ್ಪರ್ಧಿಸಿರುವ ಶಾಸಕ ಎಸ್. ಕುಮಾರ್ ಬಂಗಾರಪ್ಪ ಪರವಾಗಿ ಅವರ ಪುತ್ರಿ ಲಾವಣ್ಯ ಪ್ರಚಾರದಲ್ಲಿ ತೊಡಗಿದ್ದಾರೆ. ಇವತ್ತು ಅವರು ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ತಮ್ಮ ತಂದೆ ಪರವಾಗಿ ಮತಯಾಚಿಸಿದ್ರು. ಮತ್ತಷ್ಟು ಅಭಿವೃದ್ಧಿ ಮಾಡಲು ತಮ್ಮ ತಂದೆಗೆ ಮತಕೊಡಿ ಎಂದು ಕೇಳುತ್ತಿದ್ದಾರೆ. 

 

ಮನೆ ಹೆಣ್ಣುಮಕ್ಕಳು ಚುನಾವಣಾ ರಾಜಕೀಯದ ಅಖಾಡದಲ್ಲಿ ವಿಶ್ವಾಸ ಮೂಡಿಸುವ ಹಾಗೆ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿರುವುದು ವಿಶೇಷವಾಗಿ ಕಾಣುತ್ತಿದೆ. ಗಂಡು ಮಕ್ಕಳು ಅಧಿಕಾರಯುತವಾಗಿ ಪ್ರಚಾರ ಮಾಡುವುದು ಸಾಮಾನ್ಯ. ಇದಕ್ಕೆ ಪ್ರತಿಯಾಗಿ ಸೊರಬ ಹಾಗೂ ಸಾಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪುತ್ರಿಯರು ಮತ ಯಾಚಿಸ್ತಿದ್ಧಾರೆ. ಮತದಾರ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸ್ತಾನೆ ಎಂಬುದನ್ನ ಕಾದು ನೋಡಬೇಕಿದೆ. 

Malenadutoday.com Social media

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor