ನಾಳೆ ಮಾಜಿ ಸೂಡ ಅಧ್ಯಕ್ಷ  ರಿಚರ್ಡ್ ಕ್ವಾಡ್ರಸ್ ಅಂತ್ಯಕ್ರಿಯೆ

Former Sudha President Richard Quadras passed away on Monday evening at his residence after a brief illness

ನಾಳೆ ಮಾಜಿ ಸೂಡ ಅಧ್ಯಕ್ಷ  ರಿಚರ್ಡ್ ಕ್ವಾಡ್ರಸ್ ಅಂತ್ಯಕ್ರಿಯೆ
Former Sudha President Richard Quadras

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆʼ 

ಮಾಜಿ ಸೂಡ ಅಧ್ಯಕ್ಷ  ರಿಚರ್ಡ್ ಕ್ವಾಡ್ರಸ್ ಅಲ್ಪಕಾಲದ ಅನಾರೋಗ್ಯದಿಂದ ತಮ್ಮ ಸ್ವಗ್ರಹದಲ್ಲಿ ಸೋಮವಾರ ಸಂಜೆ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ಪೂಜೆಯು ನಾಳೆ  ನಗರದ ಸೆಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಮದ್ಯಾಹ್ನ 3 ಗಂಟೆಗೆ  ನೆರವೇರಲಿದೆ.

 

84 ವರ್ಷದ  ರಿಚರ್ಡ್ ಕ್ವಾಡ್ರಸ್  ಪತ್ನಿ, ಓರ್ವ ಪುತ್ರ, ಹಾಗೂ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ರಿಚರ್ಡ್ ಕ್ವಾಡ್ರಸ್ ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಕ್ಷಾತೀತವಾಗಿ ಇವರು ಜನಾನು ರಾಗಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಹತ್ತಿರದ ಒಡನಾಟ ಇಟ್ಟುಕೊಂಡಿದ್ದರು.   ಶಿವಮೊಗ್ಗದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷರಾಗಿ, ಶಿವಮೊಗ್ಗ ನಗರಸಭೆ ಮಾಜಿ ಸದಸ್ಯರಾಗಿ, ಶಿವಮೊಗ್ಗ ವೈ ಎಂ ಸಿ ಎ ಮಾಜಿ ಅಧ್ಯಕ್ಷರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

 ಹಾಲಿ ಸಿಟಿ ಕೋ ಆಪರೇಟಿವ್  ಬ್ಯಾಂಕಿನ ನಿರ್ದೇಶಕರಾಗಿದ್ದರು.

 

 ರಿಚರ್ಡ್ ಕ್ವಾಡ್ರಸ್  ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಆರ್ ಪ್ರಸನ ಕುಮಾರ್, ಸೂಡ ಮಾಜಿ ಅಧ್ಯಕ್ಷ ವಿ ರಾಜು, ಎಂ ಶ್ರೀಕಾಂತ್, ದೀಪಕ್ ಸಿಂಗ್, ಎಸ್ ಪಿ ಶೇಷಾದ್ರಿ,ಪುಟ್ಟಯ್ಯ ಸುಂದರ್ ರಾಜ್, ವಿನ್ಸೆಂಟ್ ರೋಡ್ರಿಗಸ್, ರಂಗನಾಥ್, ಚಂದ್ರಶೇಖರ್,ಡಿ ಆಂಟೊನಿ, ಸ್ಟ್ಯಾನಿ ಮಾರ್ಟಿಸ್, ರಾಬರ್ಟ್ ಡಿಸೋಜ, ಕಿರಣ್ ಫೆರ್ನಾಂಡಿಸ್,ಜ್ಯೋತಿ ಅರಳಪ್ಪ, ಆರ್ನೆಸ್ಟ್ ಪ್ಯಾಟ್ರಿಕ್, ಚಿನ್ನಪ್ಪ,ಮರಿಯಪ್ಪ, ಮಾರ್ಕ್ ಡಿಕೋಸ್ಟ, ರೇಮಂಡ್ ಡಿಮೆಲ್ಲೋ,ಪತ್ರಕರ್ತ ಜೋಸೆಫ್ ಟೆಲ್ಲಿಸ್, ಎಸ್ ಪಿ ದೇವರಾಜ್, ಇನ್ನೂ ಹಲವಾರು ಸಂತಾಪ ಸೂಚಿಸಿದ್ದಾರೆ

 

Former Sudha President Richard Quadras passed away on Monday evening at his residence after a brief illness. He was 84 years old and is survived by his wife, a son, a daughter, and many relatives.