ಕಲ್ಯಾಣಿ ಕಲ್ಯಾಣ | ಒಂದೇ ದಿನದಲ್ಲಿ ಸ್ವಚ್ಚಗೊಂಡ ಮಲವಗೊಪ್ಪ ಶ್ರೀ ಚನ್ನಬಸವ ದೇವಸ್ಥಾನದ ಕಲ್ಯಾಣಿ |

Karnataka State Pollution Control Board Shivamogga Environmental Study Center, Radio Shivamogga 90.8, Kuvempu Centenary B.Ed College, Bhagat Singh Yuva Sangha and Malavagoppa villagers celebrated World Environment Day. The event included cleaning the Malagoppa Sri Channabasava Devasthana Kalyani and distributing plants to citizens,

ಕಲ್ಯಾಣಿ ಕಲ್ಯಾಣ | ಒಂದೇ ದಿನದಲ್ಲಿ ಸ್ವಚ್ಚಗೊಂಡ ಮಲವಗೊಪ್ಪ ಶ್ರೀ ಚನ್ನಬಸವ ದೇವಸ್ಥಾನದ ಕಲ್ಯಾಣಿ |
Malavagoppa villagers ,World Environment Day , Malagoppa Sri Channabasava Devasthana Kalyani

 

SHIVAMOGGA | MALENADUTODAY NEWS | Jun 6, 2024  ಮಲೆನಾಡು ಟುಡೆʼ 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ, ರೇಡಿಯೋ ಶಿವಮೊಗ್ಗ 90.8, ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜ್ ಜೊತೆಗೆ ಭಗತ್ ಸಿಂಗ್ ಯುವಕರ ಸಂಘ  ಹಾಗೂ ಮಲವಗೊಪ್ಪ ಗ್ರಾಮಸ್ಥರ ಆಶ್ರಯದಲ್ಲಿ ಇಂದು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಜಲ ಮೂಲ ಸಂರಕ್ಷಣೆ ಮತ್ತು ಸ್ವಚ್ಛತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಲಗೊಪ್ಪ ಶ್ರೀ ಚನ್ನಬಸವ ದೇವಸ್ಥಾನದ ಕಲ್ಯಾಣಿ ಸ್ವಚ್ಛತೆ ಜೊತೆಗೆ ನಾಗರೀಕರಿಗೆ ಗಿಡ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 

ಈ ಕಾರ್ಯಕ್ರಮವನ್ನು ಪ್ರೊಫೆಸರ್ ಹೂವಯ್ಯ ಗೌಡ  ವಿಶ್ರಾಂತ ಪ್ರಾಂಶುಪಾಲರು ಸಹ್ಯಾದ್ರಿ ಕಾಲೇಜ್ ಇವರು ದೇವಸ್ಥಾನದ ಆವರಣದಲ್ಲಿ ಹೂವಿನ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಈ ವರ್ಷದ ಘೋಷಣೆಯಾದ ಭೂಮಿ ಪುನರ್ ಸ್ಥಾಪನೆ ಮರುಭೂಮಿಕರಣ ಮತ್ತು ಬರ ಸ್ಥಿತಿ ಸ್ಥಾಪಕತ್ವ ಅಂದರೆ ನಾವೀಗಾಗಲೇ ಸಾಕಷ್ಟು ಭೂಮಿಯನ್ನ ಹಾಳು ಮಾಡಿದ್ದೇವೆ. ಅದರ ಪರಿಣಾಮವಾಗಿ ಹಸಿರಾದ ನಾಡು ಮರುಭೂಮಿ ಆಗುತ್ತಿದೆ. 

 

ಜೊತೆಯಲ್ಲಿ ಅನಾವೃಷ್ಟಿ ಅತಿವೃಷ್ಟಿ ಹೆಚ್ಚಾಗುತ್ತಿದ್ದು ಭೂಮಿಯ ಸಮತೋಲನ ತಪ್ಪು ತಿರುವ ಸಂಕೇತವಾಗಿದೆ. ಹಾಗಾಗಿ ನಾವೆಲ್ಲ ನಮ್ಮ ಸರಳವಾದ ಜೀವನ ಶೈಲಿಯಿಂದ ಭೂಮಿಯನ್ನು ಮರು ಸ್ಥಾಪನೆ ಮಾಡಬೇಕು ಎಂದು ಹೇಳಿದರು. ಹಾಗೆಯೇ ಕಿಡ್ಸ್ ಸಂಸ್ಥೆಯ ಅಧ್ಯಕ್ಷರಾದ ಎಸ್ ಚಂದ್ರಶೇಖರ್ ಹಾಗೂ ಕುವೆಂಪು ಶತಮಾನೋತ್ಸವ ಬಿಎಡ್ ಕಾಲೇಜಿನ ಪ್ರಾಂಶುಪಾಲರಾದ  ಡಾಕ್ಟರ್ ಮಧು ಜಿ ರವರು ಕಲ್ಯಾಣಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಮಾತನಾಡಿದ ಡಾಕ್ಟರ್ ಮಧುರವರು ನೀರು ಅತ್ಯಮೂಲ್ಯವಾದ ಅಂತಹ ವಸ್ತುವಾಗಿದ್ದು, ಇದರ ಸಂರಕ್ಷಣೆ ಅತ್ಯಂತ ಪ್ರಮುಖವಾಗಿದೆ. 

ನೀರಿನ ಮಟ್ಟ ಯಥೇಚ್ಛವಾಗಿ ಕುಸಿತ ಇದ್ದು ಅಂತರ್ಜಲದ ಮಟ್ಟವು ಸಹ ಕಮ್ಮಿಯಾಗುತ್ತಿದೆ. ಈ ಸಂದರ್ಭದಲ್ಲಿ ನಾವು ನೀರಿನ ಬಗ್ಗೆ ಹೆಚ್ಚು ಕಾಳಜಿ ತೋರಿಸಬೇಕಾಗಿದೆ. ಜೊತೆಯಲ್ಲಿ ಇಂತಹ ಜಲಮೂಲಗಳ ಬಗ್ಗೆ ಅದರ ಇತಿಹಾಸವನ್ನು ತಿಳಿದು ಅದರ ಸಂರಕ್ಷಣೆಯ ಕಾರ್ಯದಲ್ಲಿ ಆಯಾ ಗ್ರಾಮದವರು ಮುಂದಾಗಬೇಕಾಗಿದೆ ಎಂದು ತಿಳಿಸಿದರು. ನಂತರದಲ್ಲಿ ಎನ್ಎಸ್ಎಸ್ 80 ವಿದ್ಯಾರ್ಥಿಗಳು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲ್ಯಾಣಿ ತುಂಬಾ ಹಬ್ಬಿನಿಂದ ಬಳ್ಳಿಗಳು ಮತ್ತು ಕಸಗಳನ್ನಲ್ಲ ಸ್ವಚ್ಛಗೊಳಿಸಿ ಶುದ್ಧವಾದ ನೀರಿನ ಕಲ್ಯಾಣಿ ಎಲ್ಲರಿಗೂ ಕಾಣುವಂತೆ ಸ್ವಚ್ಛ ಮಾಡಿದರು.

 

 ನಂತರ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿದ ಪ್ರೊಫೆಸರ್ ಎಎಸ್ ಚಂದ್ರಶೇಖರ್ ಸರ್ ಅವರು ಮಾತನಾಡುತ್ತಾ ವಿಶ್ವ ಪರಿಸರ ದಿನಾಚರಣೆಯ ವಿಶೇಷತೆ ಅದರ ಮಹತ್ವ ಮತ್ತು ಇಂದು ನಾವು ಬರಿ ಗಿಡಗಳನ್ನಷ್ಟೇ ನಡೆದೆ ಇಂತಹ ಜಲಮೂಲವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ಮತ್ತು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ಹಾಗೆ ಪರಿಸರ ಅಧ್ಯಯನ ಕೇಂದ್ರ ಮತ್ತು ರೇಡಿಯೋ ಶಿವಮೊಗ್ಗದ ನಿರ್ದೇಶಕರಾದ ಜಿಎಲ್ ಜನಾರ್ಧನ್ ರವರು ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರವನ್ನು ನೀಡಿ ಮಾತನಾಡುತ್ತಾ ನೀವು ಮುಂದೆ ಶಿಕ್ಷಕರಾಗುವವರಾದ್ದರಿಂದ ಇಂತಹ ಪರಿಸರ ಸೂಕ್ಷ್ಮ ವಾದ ವಿಷಯವನ್ನು ಗ್ರಹಿಸಬೇಕು. ಇಂದು ನಾವು ಮಾಡಿರುವುದು ಒಂದು ಉತ್ತಮವಾದ ಕಾರ್ಯ ಏನ್ ಎಸ್ ಎಸ್ ವತಿಯಿಂದ ಈ ಗ್ರಾಮದಲ್ಲಿ ನೀರಿನ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದೇವೆ. ಗ್ರಾಮಸ್ಥರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ವಹಿಸಿ ಭಾಗವಹಿಸಿ ಈ ಕಲ್ಯಾಣಿಯನ್ನು ಉಳಿಸಿಕೊಳ್ಳುವ ಕಾರ್ಯದಲ್ಲಿ ಮುಂದಾಗಬೇಕು. ಹಾಗೂ ಇನ್ನು ನಿರಂತರ ಸ್ವಚ್ಛತಾ ಕಾರ್ಯಕ್ರಮವನ್ನು ಗ್ರಾಮಸ್ಥರು ಮಾಡಿಕೊಂಡು ಹೋಗಬೇಕು ಗ್ರಾಮಸ್ಥರ ಸಹಭಾಗಿತ್ವ ಇಲ್ಲದೆ ಹೋದಲ್ಲಿ ಮತ್ತೆ ಕೆಲವು ದಿನಗಳ ನಂತರ ಈ ಕಲ್ಯಾಣಿ ಹಾಗೆ ಹಾಳಾಗಿ ಹೋಗುತ್ತದೆ. ಇಂತಹ ಅದ್ಭುತವಾದಂತಹ ನೀರಿನ ಮೂಲವನ್ನ ಗ್ರಾಮಸ್ಥರು ನಿರಂತರವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿಯಾದ ಸುಮತಿ ಶಿಲ್ಪಾ ಅವರು ಮಾತನಾಡುತ್ತಾ ಪ್ರತಿ ನೀರಿನ ಹನಿಯೂ ಅಮೃತಸಮಾನವಾದದ್ದು ನಾವು ಎರಡು ನದಿಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಈಗಾಗಲೇ ತುಂಗಾ ಮತ್ತು ಭದ್ರ ಎರಡು ಸಹ ಮಲಿನವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ನಾವು ಕುಡಿಯುವ ನೀರಿಗೆ ಅಹಂಕಾರ ಪಡಬೇಕಾದ ಸ್ಥಿತಿ ಬರುತ್ತದೆ ಆದ್ದರಿಂದ ಈಗಲೇ ಎಚ್ಚೆತ್ತಿಕೊಂಡು ಇಂತಹ ಜಲಮೂಲದ ಸಂರಕ್ಷಣೆಗೆ ನಾವು ಮುಂದಾಗ ಬೇಕಿದೆ ಎಂದು ತಿಳಿಸಿದರು.

Karnataka State Pollution Control Board Shivamogga Environmental Study Center, Radio Shivamogga 90.8, Kuvempu Centenary B.Ed College, Bhagat Singh Yuva Sangha and Malavagoppa villagers celebrated World Environment Day. The event included cleaning the Malagoppa Sri Channabasava Devasthana Kalyani and distributing plants to citizens,