ಒಂದೇ ಕ್ಷೇತ್ರ! 3 ಅಜೆಂಡಾ? ಗೆಲ್ಲೋದ್ಯಾರು? ಮೋದಿ ಮೆಸೇಜ್‌ ಏನು? ಜೆಪಿ ಬರೆಯುತ್ತಾರೆ ಮಿಸ್‌ ಮಾಡದೇ ಓದಿ!

One field! 3 Agenda? Who will win? What is Modi's message? JP writes Read without missing!

ಒಂದೇ ಕ್ಷೇತ್ರ! 3 ಅಜೆಂಡಾ? ಗೆಲ್ಲೋದ್ಯಾರು? ಮೋದಿ ಮೆಸೇಜ್‌ ಏನು? ಜೆಪಿ ಬರೆಯುತ್ತಾರೆ  ಮಿಸ್‌ ಮಾಡದೇ ಓದಿ!
JP writes

Shivamogga Mar 19, 2024  ಶಿವಮೊಗ್ಗದ ಲೋಕಸಭೆ ಚುನಾವಣೆ ಹಿಂದುತ್ವದ ಮೇಲೆ ನಡೆಯುತ್ತೋ...? ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತೋ...? ಅಥವಾ ಗ್ಯಾರಂಟಿ ಕೈ ಹಿಡಿಯುತ್ತೋ.? .ಮೋದಿ ಸಮಾವೇಶ ನೀಡಿದ ಸಂದೇಶ ಏನು?  ಜೆಪಿ ಬರೆಯುತ್ತಾರೆ

 ತೀವ್ರ ಕತೂಹಲ ಕೆರಳಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರಗೆ ಹಾದಿ ಸುಗಮ..ಹೆಚ್ಚಿವ ಲೀಡ್ ನಲ್ಲಿ ಗೆಲ್ಲುತ್ತಾರೆ ಎಂದೇ ಬಿಂಬಿಸಲಾಗಿತ್ತು. ಆದರೆ ಬಿವೈಆರ್ ವೇಗಕ್ಕೆ ಸ್ವಪಕ್ಷೀಯ ನಾಯಕ ಕೆ.ಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ರರ್ಧಿಸುವ ಮೂಲಕ ಬಿಗ್ ಶಾಕ್ ನೀಡಿದ್ದಾರೆ. 

ಮನಸ್ಸಿಗೆ ನೋವಾಗಿದೆ 

ಪುತ್ರ ಕೆ.ಇ ಕಾಂತೇಶ್ ಗೆ ಹಾವೇರಿ ಗದಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಕೈ ತಪ್ಪಲು ಯಡಿಯೂರಪ್ಪ ಮತ್ತವರ ಮಕ್ಕಳು ಎಂದು ಈಶ್ವರಪ್ಪ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮನಸ್ಸಿನ ನೋವನ್ನು ರಾಜ್ಯಕ್ಕೆ ವಿಸ್ತರಿಸಿರುವ ಈಶ್ವರಪ್ಪ ರಾಜ್ಯದಲ್ಲಿ ತಮ್ಮಂತೆಯೇ ಪಕ್ಷದಲ್ಲಿ ಅನ್ಯಾಯಕ್ಕೊಳಗಾರುವ ಕಾರ್ಯಕರ್ತರು ಹಾಗು ನಾಯಕರ ಧ್ವನಿಯಾಗಿ ಸ್ಪರ್ಧೆಗಿಳಿದಿದ್ದೇನೆ. ರಾಜ್ಯದಲ್ಲಿ ಹಿಂದುತ್ವದ ಪರ ಧ್ವನಿ ಎತ್ತುತ್ತಿರುವ ಪ್ರತಾಪ ಸಿಂಹ ಸದಾನಂದ ಗೌಡ ಸಿಟಿ ರವಿ ಯತ್ನಾಳ್ ರಂತ 

ಬಿಜೆಪಿ ನಾಯಕರನ್ನು ಯಡಿಯೂರಪ್ಪ ಮತ್ತು ಅವರ ಮಗ ತುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಷ್ಟೆ ಅಲ್ಲದೆ. ಹಿಂದುತ್ವದ ಉಳಿವು, ಯಡಿಯೂರಪ್ಪರ ಕುಟುಂಬ ರಾಜಕಾರಣದ ಅಳಿವಿಗಾಗಿ ಈಶ್ವರಪ್ಪ ಬಂಡಾಯದ ಭಾವುಟ ಹಾರಿಸುತ್ತಿದ್ದೇನೆ ಎಂದಿದ್ದರು. 

ಪರಿವಾರ ಪರದಾಟ

ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿಯುತ್ತದ್ದಂತೆ ಅವರ ಗರಡಿಯಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರದ ನಾಯಕರಿಗೆ ಇರಿಸು ಮುರಿಸು ಉಂಟಾಗಿದೆ. ಕೆಲವು ಮುಖಂಡರು ಹಾಗು ಹಿರಿಯರು ಈಶ್ವರಪ್ಪನವರಿಗೆ ಈಗಲೂ ಕಾಲ ಮಿಂಚಿಲ್ಲ, ಯೋಚಿಸಿ ನಿರ್ಧಾರ ಕೈಗೊಳ್ಳಿ ಎಂದು ಸಹನೆ ನೀಡುತ್ತಿದ್ದಾರೆ. ಆದರೆ ಈಶ್ವರಪ್ಪ ಅದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿಯೇ ನೆನ್ನೆ ಶಿವಮೊಗ್ಗದ ಅಲ್ಲಮ ಪ್ರಭು ಪ್ರೀಡಂ ಪಾರ್ಕ್ ನಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶಕ್ಕೆ ಗೈರಾಗಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಬಂದ ಸಂದರ್ಭದಲ್ಲಿಯಾದ್ರೂ, ಈಶ್ವರಪ್ಪರ ಮನಸ್ಸು ಬದಲಾಗಬಹುದೇನೋ ಎಂದು ಬಾವಿಸಿದ್ದ ಬಿಜೆಪಿ ಮುಖಂಡರಿಗೆ ಮುಖಭಂಗವಾಗಿತ್ತು. 

ಒಂದಶದ ಕಾರ್ಯಕ್ರಮ

ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು, ಹಿಂದುತ್ವ ಉಳಿಯಬೇಕು,ಯಡಿಯೂರಪ್ಪ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂಬ ಒಂದಂಶದ ಕಾರ್ಯಕ್ರಮದಡಿಯಲ್ಲಿ ಈಶ್ವರಪ್ಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಂತಿದೆ. ಹೀಗಾಗಿ ಪ್ರಧಾನಿಗಳು ಬರುವ ದಿನವೇ ಈಶ್ವರಪ್ಪ ಬೆಳಗಿನಿಂದ ರಾತ್ರಿಯವರೆಗೂ ಮಠಮಾನ್ಯಗಳ ಭೇಟಿಯಲ್ಲಿ ತೊಡಗಿಸಿಕೊಂಡು ಸ್ವಾಮೀಜಿಗಳ ಬೆಂಬಲ ಕೋರುತ್ತಿದ್ದಾರೆ. 

ಒಂದು ಕಣ್ಣಿಗೆ ಎರಡು ಕಣ್ಣು

ಹೇಳಿ ಕೇಳಿ ಶಿವಮೊಗ್ಗ ಹಿಂದುತ್ವದ ಪ್ರಯೋಗಶಾಲೆಯಾಗಿ ಪರಿವರ್ತನೆಯಾಗುತ್ತಿರುವ ಹೊತ್ತಿನಲ್ಲಿ ಈಶ್ವರಪ್ಪ ಅದೇ ಹಿಂದುತ್ವದ ಅಜೆಂಡಾದ ಮೇಲೆ ಚುನಾವಣೆ ಎದುರಿಸಿದರೆ. ಸಾಕಷ್ಟು ಮತಗಳನ್ನು ಸೆಳೆಯಬಹುದು. ಚುನಾವಣೆಯಲ್ಲಿ ಸೋಲು ಗೆಲವು ಇದ್ದಿದ್ದೇ. ಆದರೆ ನನ್ನ ಚುನಾವಣೆ ಯಡಿಯೂರಪ್ಪರ ಕುಟುಂಬ ರಾಜಕಾರಣದ ವಿರುಧ್ಧ ಎನ್ನುವ ಈಶ್ವರಪ್ಪರ ಹೇಳಿಕೆ, ಉದ್ದೇಶ ರಾಘವೇಂದ್ರರನ್ನು ಸೋಲಿಸುವುದೇ ಆಗಿದೆ. ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಎದುರಾಳಿಯ ಎರಡು ಕಣ್ಣು ಹೋಗಬೇಕು ಎನ್ನುವ ಯುದ್ದದ ನೀತಿಯನ್ನು ಈಶ್ವರಪ್ಪ ಅನುಸರಿಸುತ್ತಿರುವಂತಿದೆ.

ನರೇಂದ್ರ ಮೋದಿ ಗ್ಯಾರಂಟಿ

ಈಶ್ವರಪ್ಪನವರ ಹಿಂದುತ್ವದ ಅಜೆಂಡಾವೇ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣೆ ಪ್ರಚಾರದ ಕಾರ್ಯಕ್ರಮದ್ಲಿ ಮಾರ್ಧನಿಸಿತು. ಪ್ರಧಾನಿ ನರೇಂದ್ರ ಮೋದಿಯವರು ಆಗಮನಿಸುವ ಮುನ್ನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ. ಯಡಿಯೂರಪ್ಪರ ಬಗ್ಗೆ ತಮಗಿರುವ ಅಸಮಧಾನವನ್ನು ಪರೋಕ್ಷವಾಗಿಯೇ ಹೊರಹಾಕಿದರು. 

ಬಿ.ವೈ ವಿಜಯೇಂದ್ರರ ಹೆಸರನ್ನು ಪ್ರಸ್ಥಾಪ ಮಾಡದೆ ಸಿಟಿ ರವಿ ಅಭಿವೃದ್ಧಿ ಜೊತೆಗೆ ಹಿಂದುತ್ವದ ಬದ್ಥತೆ ಇಟ್ಟುಕೊಂಡು ರಾಜಕಾರಣ ಮಾಡುತ್ತೇವೆ. ರಾಜ್ಯದಲ್ಲಿ ದೇಶದಲ್ಲಿ ಬೀಸುತ್ತಿರುವುದು ಕೇಸರಿ ಅಲೆ ಎಂದ ಸಿಟಿ ರವಿ ಮೋದಿ ಹಾಗು ಹಿಂದುತ್ವದ ವಿಚಾರದಲ್ಲಿಯೇ ತಮ್ಮ ಭಾಷಣ ಮುಗಿಸಿದರು, ಎಲ್ಲೂ ಕೂಡ ರಾಜ್ಯದಲ್ಲಿ ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರು ಧ್ವನಿ ಎತ್ತದೆ ಬಿಜೆಪಿಯ ರಾಷ್ಟ್ರೀಯ ವಿಚಾರವನ್ನೇ ಪ್ರಸ್ತಾಪಿಸಿದರು

ಪಟ್ಟಿಕೊಟ್ಟ ಬಿವೈ ರಾಘವೇಂದ್ರ  

ಇದಕ್ಕೂ ಮುನ್ನ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ವೈ ರಾಘವೇಂದ್ರ ತನ್ನ ಅವಧಿಯಲ್ಲಾದ ಅಭಿವೃದ್ದಿ ಕಾರ್ಯಗಳನ್ನೇ ಜನತೆ ಮುಂದೆ ಪ್ರಸ್ಥಾಪಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಮಾವೇಶದಲ್ಲಿ ಜೈ ಶ್ರೀರಾಮ್ ಎಂದು ಕೂಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದು ಕೂಡ ನಾನು ಕೂಡ ಹಿಂದುತ್ವವಾದಿಯೇ ಎಂದು ಬಿಂಬಿಸಿದಂತಿತ್ತು

ಇದು ಟ್ರೋಲ್‌ ಆಯ್ತು

ಇದೆಲ್ಲದರ ನಡುವೆ ತೆರೆಮರೆಯ ಅಸಮಧಾನಗಳು ಎಲ್ಲೂ ಬಹಿರಂಗಗೊಳ್ಳಲಿಲ್ಲ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸಮಾವೇಶಕ್ಕೆ ಆಗಮಿಸಿದರೂ, ವೇದಿಕೆಯಲ್ಲಿ ಕೂರುವುದಕ್ಕಷ್ಟೇ ಸೀಮಿತವಾದರು. ಈಡಿಗ ಸಮುದಾಯ ಹೆಚ್ಚಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪರಿಗೆ ಭಾಷಣಕ್ಕೆ ಅವಕಾಶ ಕೊಡಬಹುದಿತ್ತು ಎಂಬ ಅಭಿಪ್ರಾಯ ಈಡಿಗ ಸಮುದಾಯದಲ್ಲಿದೆ. ಇನ್ನು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಜೈಕಾರ ಕೂಗುವಾಗ ಯಾರದ್ದೋ ಹೆಸರನ್ನ ಹೇಳಲು ಹೋಗಿ ಅಲ್ಲಿಯೇ ನಿಲ್ಲಿಸಿದ್ದು ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗುತ್ತಿದೆ. 

ಆದರೆ ಪ್ರಧಾನಿಯವರ ಕಾರ್ಯಕ್ರಮದ ಪ್ರೋಟೋಕಾಲ್ ನಂತೆ ಕಾರ್ಯಕ್ರಮ ನಡೆದಿದೆ. ಏನೆ ಆಗಲಿ ನೆನ್ನೆಯ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರ ಸಭೆ.ದೇಶದ.ಅಭಿವೃದ್ಧಿ ಮತ್ತು ಹಿಂದುತ್ವದ ವಿಚಾರಗಳಿಗೆ ಮೀಸಲಾಗಿತ್ತು. ಬಿಜೆಪಿ ಪಕ್ಷ ಹಾಗು ಪಕ್ಷೇತರವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಬ್ಬರೂ ಒಂದೇ ಟ್ರಾಕ್ ನಲ್ಲಿ ಮತಯಾಚನೆಗೆ ಮುಂದಾಗಿದ್ದಾರೆ. ‌

ಸ್ಪರ್ಧೆ ಮತ್ತು ಸಂಧಾನ

ಈಶ್ವರಪ್ಪರನ್ನು ವೈಯಕ್ತಿಕವಾಗಿ ಇಷ್ಟಪಡುವ, ಹಿಂದುತ್ವಕ್ಕೆ ಅಂಟಿಕೊಂಡಿರುವ, ಯಡಿಯೂರಪ್ಪರ ಕುಟುಂಬ ರಾಜಕಾರಣವನ್ನು ವಿರೋಧಿಸುವ ಮತಗಳ ಮೇಲೆ ಈಶ್ವರಪ್ಪ ಕಣ್ಣು ನೆಟ್ಟಿದ್ದಾರೆ. ಈಶ್ವರಪ್ಪ ನಾಮಪತ್ರ ಸಲ್ಲಿಸುವವರೆಗೂ ನಾಮಪತ್ರ ಹಿಂಪಡೆಯುವ ದಿನದವರೆಗೂ ಅವರನ್ನು ಮನವೊಲಿಸಲು ಬಿಜೆಪಿಯ ಒಂದು ದೊಡ್ಡ ದಂಡೇ ಬಂದರೂ ಅಚ್ಚರಿಯಿಲ್ಲ. ಯಾವಾಗ ಈಶ್ವರಪ್ಪ ನಾಮಪತ್ರ ವಾಪಸ್ಸು ಪಡೆಯುವುದಿಲ್ಲವೋ.ಅಂದೇ ಅವರ ಸ್ಪರ್ಧೆ ಖಚಿತ ಎನ್ನುವ ಮಂದಿ ಕೂಡ ಇದ್ದಾರೆ. ಆದರೆ ಈಶ್ವರಪ್ಪ ಮತ್ತು ಯಡಿಯೂರಪ್ಪರ ಸಂಬಂಧ ಹಳಸಿಹೋಗಿರುವುದರಿಂದ ಮತ್ತೆ ಪ್ಯಾಚ್ ಅಪ್ ಮಾಡಲು ಸಾಧ್ಯವಿಲ್ಲದಂತಾಗಿದೆ.

ಬಿಜೆಪಿ ಬಂಡಾಯದ ಲಾಭ ಪಡೆಯುವುದೇ ಕಾಂಗ್ರೆಸ್

ಪ್ರಶ್ನೆ ಇರುವುದೇ ಇಲ್ಲಿ. ಕಾಂಗ್ರೇಸ್ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿದ್ದಾರೆ. ಕಾಂಗ್ರೇಸ್ ನ ಐದು ಗ್ಯಾರಂಟಿ ಯೋಜನೆಗಳು ಕಾಂಗ್ರೇಸ್ ಪಕ್ಷದ ಕೈ ಹಿಡಿಯಲಿದೆ ಎಂಬುದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನಂಬಿಕೆ ಹಾಗು ವಿಶ್ವಾಸ. ಬಿಜೆಪಿಯ ಬಂಡಾಯದ ಲಾಭವನ್ನು ಪಡೆಯಲು ಕಾಂಗ್ರೇಸ್ ಗೆ ಎಲ್ಲಾ ರೀತಿಯ ಅವಕಾಶಗಳಿವೆ. ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಹೆಚ್ಚಿನ ಮತಗಳನ್ನು ಕಸಿದರೆ, ಬಿವೈಆರ್ ಗೆ ಅದು ಲೀಡ್ ಕಡಿಮೆ ಮಾಡುತ್ತದೆ. ಇತ್ತ ಕಾಂಗ್ರೇಸ್‌  ಈಡಿಗ, ಮುಸ್ಲಿಂ, ಓಬಿಸಿ ಎಸ್ಸಿ ಎಸ್ಟಿ ಮತಗಳನ್ನು ಸೆಳೆದರೆ ಗೆಲುವಿನ ಹಾದಿಯತ್ತ ಸಾಗಬಹುದಾದ ಎಲ್ಲಾ ಅವಕಾಶಗಳಿವೆ. 

ಆದರೆ ಕಾಂಗ್ರೆಸ್‌ನಲ್ಲಿಯು ಬಣ ರಾಜಕಾರಣದ ವ್ಯವಸ್ಥೆಗಳು ಮಗ್ಗಲು ಬದಲಿಸುತ್ತಲೇ ಇವೆ. ಈ ನಿಟ್ಟಿನಲ್ಲಿ ಒಗ್ಗೂಡದೆ ಹೋದರೆ, ಚುನಾವಣೆ ಆ ಪಕ್ಷಕ್ಕೂ ಹೊರೆಯಾಗಲಿದೆ. ಒಟ್ಟಾರೆ, ಕೆಎಸ್‌ ಈಶ್ವರಪ್ಪ ಹಿಂದುತ್ವ ಎಂದರೇ ಬಿವೈಆರ್‌ ಅಭಿವೃದ್ಧಿ ಅಂತಿದ್ದಾರೆ, ಇತ್ತ ಕಾಂಗ್ರೆಸ್‌ ಗ್ಯಾರಂಟಿ ನಂಬಿದೆ. ಈ ಟ್ರಂಪ್ ಕಾರ್ಡ್  ಹೇಗೆ  ಪ್ಲೇ ಆಗಲಿದೆ. ಇವುಗಳಲ್ಲಿ ಮತದಾರ ಯಾರಿಗೆ ಮಣೆ ಹಾಕುತ್ತಾನೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.