ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಬಿ.ವೈ. ರಾಘವೇಂದ್ರ ! ಕೆ.ಎಸ್​.ಈಶ್ವರಪ್ಪರವರ ಬಂಡಾಯಕ್ಕೆ ಫಸ್ಟ್ ರಿಯಾಕ್ಷನ್

MP BY Raghavendra's first reaction about the upset KS Eshwarappa

ಗುರುವಾರ ಗುರುರಾಯರ ಸನ್ನಿಧಿಯಲ್ಲಿ ಬಿ.ವೈ. ರಾಘವೇಂದ್ರ ! ಕೆ.ಎಸ್​.ಈಶ್ವರಪ್ಪರವರ ಬಂಡಾಯಕ್ಕೆ ಫಸ್ಟ್ ರಿಯಾಕ್ಷನ್
MP BY Raghavendra,KS Eshwarappa

shivamogga Mar 14, 2024  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆಯಾದ ಬೆನ್ನಲ್ಲೆ ಸಂಸದ  ಬಿ.ವೈ. ರಾಘವೇಂದ್ರ  ತಮ್ಮ ಇಷ್ಟದೈವ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ತಿಲಕ್ ನಗರದ ಸಮೀಪ ಇರುವ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಬೇಡಿದರು. ಇದೇ ವೇಳೆ ಮಠದ ಸದಸ್ಯರು ಸಂಸದರಿಗೆ ಗುರುರಾಯರ ವಿಶೇಷ ಫೋಟೋವೊಂದನ್ನ ನೀಡಿ ಮಂಗಳಾರತಿ ನೀಡಿದರು. ಇಷ್ಟೆ ಅಲ್ಲದೆ ಗುರುರಾಯರ ಮಠದಿಂದಲೇ ಸಂಸದ ಬಿವೈ ರಾಘವೇಂದ್ರರವರು ಮತಯಾಚನೆ ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿನ್ನೆ ಸಂಜೆ ಅಧಿಕೃತವಾಗಿ ನನ್ನ ಹೆಸರು ಘೋಷಣೆ ಮಾಡಿದ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಇಂದು ಗುರುವಾರ ರಾಯರ ಮಠಕ್ಕೆ ಭೇಟಿ ನೀಡಿ‌ ಪೂಜೆ ಸಲ್ಲಿಸಿದ್ದೇನೆ ಮಾ.18 ರಂದು‌ ಶಿವಮೊಗ್ಗಕ್ಕೆ ಮೋದಿ ಬರುತ್ತಿದ್ದಾರೆ. ವಾತಾವರಣ ತುಂಬಾ ಚನ್ನಾಗಿದೆ ಎಂದರು. 

ಕಾರ್ಯಕರ್ತರು ಉತ್ಸಾಹದಿಂದ ಇದ್ದಾರೆ .ಪ್ರಜಾಪ್ರಭುತ್ವ ಹಬ್ಬವನ್ನು ‌ಯಶಸ್ವಿಯಿಂದ ಮಾಡ್ತಾರೆ .ಒಂದು ವರ್ಷದಲ್ಲಿ ಮೂರನೇ ಬಾರಿ ಮೋದಿ ಶಿವಮೊಗ್ಗಕ್ಕೆ ‌ಬರುತ್ತಿದ್ದಾರೆ .ವಿಪಕ್ಷದ ಅಭ್ಯರ್ಥಿ ಯಾರು ಏನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾವು ಮಾಡಿದ ಅಭಿವೃದ್ಧಿ ಕೆಲಸದ ಬಗ್ಗೆ ಜನರಿಗೆ ತಿಳಿಸುತ್ತೇವೆ. ರಾಮ ಮಂದಿರ ಉದ್ಘಾಟನೆ, ಅಭಿವೃದ್ಧಿ ಕೆಲಸದಿಂದ ಜನರಿಗೆ ವಿಶ್ವಾಸ ಹೆಚ್ಚಾಗಿದೆ. ಈ ಬಾರಿ 370 ಪ್ಲೆಸ್ ಬಿಜೆಪಿ ಗೆಲ್ಲಲ್ಲಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ 28 ಕ್ಕೆ 28 ಸ್ಥಾನ ಗೆಲ್ಲಲ್ಲಿದೆ. ಶಿವಮೊಗ್ಗಕ್ಕೆ ಕೈಗಾರಿಕೆಗಳು ಬರಬೇಕು, ಸಾಫ್ಟ್‌ವೇರ್ ಉದ್ಯಮ ಬರಬೇಕು. ಯುವಕರ ಸ್ವಾಭಿಮಾನ ಬದುಕಿಗೆ ಆದ್ಯತೆ ಕೊಡಲಾಗುವುದು ಎಂದ ರಾಘವೇಂದ್ರರವರು ಕರಾವಳಿ ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟ್ ನಲ್ಲಿ ಟನಲ್ ನಿರ್ಮಾಣ ಮಾಡಲಾಗುವುದು ಎಂದರು.  

ನುಡಿದಂತೆ ನಡೆದಂತಹ ಸರಕಾರ ಮೋದಿ ಸರಕಾರ. ರಾಷ್ಟ್ರ ಭಕ್ತರು ರಾಷ್ಟ್ರದ ಹಿತಕೋಸ್ಕರ ಚಿಂತನೆ ಮಾಡುವವರು. ದೇಶ, ಮೋದಿ ಬಿಟ್ಟು ಚಿಂತನೆ ಮಾಡಲ್ಲ. ದೇಶದ ಒಳಿತಿಗಾಗಿ ಚಿಂತನೆ ಮಾಡುವವರು. ಯಡಿಯೂರಪ್ಪ ಜೀವನದಲ್ಲಿ ಪಕ್ಷಕ್ಕೆ ಶಕ್ತಿ ಇಲ್ಲದ ಸಂದರ್ಭದಲ್ಲಿ ಸಂಘಟನೆ ಕಟ್ಟುವ ಕೆಲಸ ಮಾಡಿದ್ದಾರೆ ಯಾರಿಗೂ ದ್ರೋಹ ಮಾಡುವ ಕೆಲಸ ಮಾಡಿಲ್ಲ , ಯಾವೊಬ್ಬ ಕಾರ್ಯಕರ್ತನಿಗು ಅನ್ಯಾಯ ಮಾಡುವ ಕೆಲಸ ಮಾಡಲ್ಲ, ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಜ್ಯಸಭೆ ಸದಸ್ಯರನ್ನಾಗಿ ಮಾಡ್ತೇವೆ ಬನ್ನಿ ಅಂದ್ರು, ಆದರೆ ಯಡಿಯೂರಪ್ಪ ಅವರು ನನಗೆ ರಾಜ್ಯಸಭೆ ಬೇಡ ರಾಜಶೇಖರಮೂರ್ತಿ ಅವರನ್ನು ರಾಜ್ಯಸಭೆಗೆ ಮಾಡಿ ಅಂದಿದ್ದರು. ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ,  ಹಳಬರ ಜೊತೆ ಕೆಲಸ ಮಾಡಿದ್ದೇವು, ಆ ನೆನಪು ಇಂದಿಗೂ ಇದೆ. ಹೊಸಬರಿಗೆ ಶುಭ ಕೋರುತ್ತೇನೆ ಎಂದಿದ್ದಾರೆ. 

ಇನ್ನು ನಿನ್ನೆ  ಕೆಎಸ್​ ಈಶ್ವರಪ್ಪನವರು  ಬಂಡಾಯ ಸಾರಿದ ನಂತರ ಆ ಬಗ್ಗೆ  ಮಾತನಾಡಿದ್ದ ಬಿವೈ ರಾಘವೇಂದ್ರ ರವರು ಕೆ.ಎಸ್​.ಈಶ್ವರಪ್ಪ ನಮ್ಮ ನಾಯಕರು ಅವರ ಜಾಗದಲ್ಲಿ ಯಾರಿದ್ದರೂ ನೋವಾಗೋದು ಸಹಜ. ಈಶ್ವರಪ್ಪ ಹಿಂದುತ್ವ ಸಂಘಟನೆ ಪರವಾಗಿ ಕೆಲಸ ಮಾಡಿದವರು. ಈ ಸಂದರ್ಭದಲ್ಲಿ ನೋವಾಗೋದು ಸಹಜ. ಅವರಿಗೆ ಟಿಕೆಟ್ ಯಾಕೆ ಆಗಲಿಲ್ಲ ಗೊತ್ತಿಲ್ಲ. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವಂತಹ  ಯಾವುದೇ ಪ್ರಯತ್ನ ಮಾಡಲ್ಲ ಎಂಬುದಾಗಿ ನನಗೆ ವಿಶ್ವಾಸ ಇದೆ ಎಂದಿದ್ದಾರೆ. 

 

ಈಶ್ವರಪ್ಪ ಅವರು ಯಡಿಯೂರಪ್ಪ ಅವರ ಬಗ್ಗೆ ಏಕೆ ಆರೋಪ ಮಾಡಿದ್ರೋ ಗೊತ್ತಿಲ್ಲ.ಆದರೆ ಅವರು  ಅವರು ತಪ್ಪು ಕಲ್ಪನೆ ಹೊಂದಿದ್ದಾರೆ. ಪಕ್ಷದ ವರಿಷ್ಠರು ಈ ಬಗ್ಗೆ ಉತ್ತರ ಕೊಡ್ತಾರೆ. ನಾನು ಕೂಡಾ ಅವರ ಜೊತೆ ಮಾತನಾಡ್ತೇನೆ ಎಂದು ತಿಳಿಸಿದ್ದಾರೆ.