ಶಿವಮೊಗ್ಗ ಪ್ರೀಡಂ ಪಾರ್ಕ್ ​ಗೆ ಹೊಸ ಹೆಸರು! ಸಂಪುಟ ಸಭೆಯಲ್ಲಿ ತೀರ್ಮಾನ! ಮಧು ಬಂಗಾರಪ್ಪ ಏನು ಹೇಳಿದ್ರು ಓದಿ

shivamogga freedom park gets a new name! The decision was taken at the cabinet meeting! Read the details

ಶಿವಮೊಗ್ಗ ಪ್ರೀಡಂ ಪಾರ್ಕ್ ​ಗೆ ಹೊಸ ಹೆಸರು! ಸಂಪುಟ ಸಭೆಯಲ್ಲಿ  ತೀರ್ಮಾನ! ಮಧು ಬಂಗಾರಪ್ಪ ಏನು ಹೇಳಿದ್ರು ಓದಿ
shivamogga freedom park gets a new name! The decision was taken at the cabinet meeting! Read the details

SHIVAMOGGA  |  Jan 19, 2024  |  ಶರಣ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಫ್ರೀಡಂ ಪಾರ್ಕಿಗೆ ನಾಮಕಾರಣ ಮಾಡಲು ಗುರುವಾರ ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಪ್ರಕಟಣೆಯು ನೀಡಲಾಗಿದೆ. 

ಇನ್ನೂ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ಸಚಿವ ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಶಿವಮೊಗ್ಗದ 46.32 ಎಕರೆ ವಿಸ್ತೀರ್ಣದ ಜೈಲು ಆವರಣದ ಮೈದಾನಕ್ಕೆ ಅಲ್ಲಮಪ್ರಭು ಹೆಸರು ನಾಮಕರಣ ಮಾಡುವ ಮೂಲಕ ಜಿಲ್ಲೆಯ ಜನತೆಯ ದಶಕಗಳ ಕನಸನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನನಸು ಮಾಡಿದೆ. 

12ನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭು ಅವರ ಹೆಸರನ್ನು ಶಿವಮೊಗ್ಗದ ಫ್ರೀಡಂಪಾರ್ಕ್‌ಗೆ ಇಡಬೇಕು ಎಂಬುದು ಜನತೆಯ ಒತ್ತಾಸೆಯಾಗಿತ್ತು. 

ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸಿರುವುದು ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಪಡೆದುಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನ ಎಂದು ಸಚಿವ ಮಧು ಬಂಗಾರಪ್ಪ ಬಣ್ಣಿಸಿದ್ದಾರೆ. 

12ನೇ ಶತಮಾನದ ಒಬ್ಬ ಪ್ರಸಿದ್ಧ ಕವಿ, ತತ್ವಜ್ಞಾನಿ ಅಲ್ಲಮಪ್ರಭುಗಳು ಶಿಕಾರಿಪುರದ ಬಳ್ಳಿಗಾವೆಯವರು. ಅವರು ನಮ್ಮ ಶಿವಮೊಗ್ಗ  ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಅವರ ಹೆಸರಿಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾ‌ರ್ ಅವರಿಗೆ ಮನವಿ ಮಾಡಲಾಗಿತ್ತು. 

ಇದಕ್ಕಾಗಿ ಇಡೀ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಮ ಸಮಾಜದ ಕಲ್ಪನೆಯ ಜತೆಗೆ ಮಹಿಳೆಯರಿಗೆ ಸಮಾನ ಗೌರವ ಸ್ಥಾನ ಮಾಡಲು ನೀಡಲು ಹೋರಾಟ ನಡೆಸಿದ ಅಲ್ಲಮರ ಹೆಸರಿಡುವ ಸರ್ಕಾರದ ನಿರ್ಧಾರ ಸಮಯೋಚಿತವಾಗಿದೆ ಎಂದು ತಿಳಿಸಿದ್ದಾರೆ.

ಯುವನಿಧಿಯಲ್ಲಿ ಮನವಿ

ಕಳೆದ ಜ.12 ರಂದು ಶಿವಮೊಗ್ಗದ ಐತಿಹಾಸಿಕ ಫ್ರೀಡಂ ಪಾಕ್ ನಲ್ಲಿ ನಡೆದ ಯುವನಿಧಿ ಕಾರ್ಯಕ್ರಮದ ವೇಳೆ ಅಲ್ಲಮಪ್ರಭು ಹೆಸರು ನಾಮಕರಣ ಮಾಡುವಂತೆ ವೇದಿಕೆ ಯಲ್ಲಿದ್ದ ಸಿ.ಎಂ ಹಾಗೂಡಿಸಿಎಂ ಅವರಿಗೆ ಮಧು ಬಂಗಾರಪ್ಪ ಮನವಿ ಮಾಡಿದ್ದರು. ಇದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯ ಘೋಷಿಸಿದ್ದರು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.