Universal basic income ಎಂದ ಸಿದ್ದರಾಮಯ್ಯ! ಹಾಗೆಂದರೇನು ಗೊತ್ತಾ? ಅಯೋಧ್ಯೆಗೆ ಹೋಗ್ತಾರಂತೆ ಮುಖ್ಯಮಂತ್ರಿ

Malenadu Today

SHIVAMOGGA |  Jan 12, 2024  |  ಶಿವಮೊಗ್ಗ ಜಿಲ್ಲೆಗೆ ಯುವನಿಧಿ ಯೋಜನೆ ಉದ್ಘಾಟನೆಗೆ ಬಂದ ಸಿಎಂ ಸಿದ್ದರಾಮಯ್ಯ ರವರು ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದರು. ಈ ವೇಳೆ ಅವರು ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  

ಮೂವರು ಡಿಸಿಎಂ ಬಗ್ಗೆ ಚರ್ಚೆಯಾಗ್ತಿದೆಯೆ?

ನೋ…ಇಲ್ಲ..ಇಲ್ಲ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. … ಇಲ್ಲ  ನೋ ಡಿಸ್ಕಶನ್​ ಅಂತಾ ಹೇಳಿದ ಸಿದ್ದರಾಮಯ್ಯರವರು ಅಲ್ಲಿಂದ ಮುಂದೆ ಸಾಗಿದ್ರು. 

ಗ್ಯಾರಂಟಿಗಳ ಬಗ್ಗೆ ಬಿಜೆಪಿಯಿಂದ ಟೀಕೆ ವ್ಯಕ್ತವಾಗುತ್ತಿದೆಯಲ್ಲಾ?

ಅವರು ಗ್ಯಾರಂಟಿ ಜಾರಿ ಮಾಡಿಲ್ಲ, ನಾವು ಮಾಡುತ್ತಿದ್ದೇವೆಲ್ಲಾ ಅದಕ್ಕೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಹೊಟ್ಟೆ ಉರಿ ಶುರುವಾಗಿದೆ. ಹಾಗಾಗಿ ಟೀಕೆ ಮಾಡುತ್ತಿದ್ದಾರೆ. ಅವರು ಟೀಕೆ ಮಾಡುವುದಲ್ಲ. ನೀವು ಸಹ ವೆರಿಫೈ ಮಾಡಿ ನೋಡಿ.. ಅವರು ಹೇಳೋದನ್ನಾಗಲಿ ನಾನು ಹೇಳೋದನ್ನಾಗಲಿ ಕೇಳಬೇಡಿ.. ವೆರಿಫೈ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಗ್ಯಾರಂಟಿ ಸ್ಕೀಂಗಳು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೆ?

ನೋಡಿ.. ಈ ಗ್ಯಾರಂಟಿ ಸ್ಕೀಂಗಳನ್ನು ಚುನಾವಣೆಗಾಗಿ ಮಾಡಿದ್ದಲ್ಲ. ಈ ಯೋಜನೆಯನ್ನ ಬಡವರು, ಮಧ್ಯಮವರ್ಗದ ಜನರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಬೇಕು ಎಂದು ಮಾಡಿದ್ದೇವೆ. ಯುನಿವರ್ಸಲ್​ ಬೇಸಿಕ್ ಇನ್​ಕಮ್ (universal basic income) ಎಂಬ ಪ್ರಿನ್ಸಿಫಲ್​ನ ಅಡಿಯಲ್ಲಿ ಮಾಡಿದ್ದೇವೆ. ಒಂದು ಕುಟುಂಬಕ್ಕೆ ನಾಲ್ಕರಿಂದ ಐದು ಸಾವಿರ ರೂಪಾಯಿ ಹಣ ಒಂದು ಕುಟುಂಬಕ್ಕೆ ಸೇರುತ್ತಿದೆ. ಒಂದು ವರ್ಷಕ್ಕೆ 40 ರಿಂದ ಐವತ್ತು ಸಾವಿರ ರೂಪಾಯಿ ಸೇರುತ್ತಿದೆ. ಬೆಲೆ ಜಾಸ್ತಿಯಾಗಿದೆ. ರೇಟು ಏರುತ್ತಿದೆ. ನಿರುದ್ಯೋಗ ಪ್ರಮಾಣ ಜಾಸ್ತಿಯಿದೆ. ಇದನ್ನೆಲ್ಲಾ ಎದುರಿಸಲು ಈ ಯೋಜನೆ ಸಹಕಾರಿಯಾಗುತ್ತದೆ.. 

ಇಷ್ಟೆಲ್ಲಾ  ಜನಪ್ರಿಯ ಯೋಜನೆಗಳನ್ನ ಜಾರಿ ಮಾಡುತ್ತಿದ್ದೀರಲ್ಲಾ?

ನೋಡಿ ಜನಪ್ರಿಯ ಅಲ್ಲ..ಜನಪ್ರಿಯ ಅಂತಾ ಬಳಸಬೇಡಿ.. ಇದು ಜನಪ್ರಿಯ ಯೋಜನೆಗಳಲ್ಲ. ಆರ್ಥಿಕ ಸಾಮಾಜಿಕ ಕಾರ್ಯಕ್ರಮಗಳು ಎಂದು ಹೇಳಿ ಎಂದು ಸಿದ್ದರಾಮಯ್ಯರವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ 

ಮಾಜಿ ಸಿಎಂ ಕುಮಾರಸ್ವಾಮಿಯವರು ಯಾರದ್ದೋ ದುಡ್ಡು ಯಲ್ಲಮ್ಮ ಜಾತ್ರೆ ಅಂತಾ ಟೀಕಿಸಿದ್ದಾರಲ್ಲಾ?

ಮಾಜಿ ಸಿಎಂ ಕುಮಾರಸ್ವಾಮಿ ಯವರು ಬರೀ ಸುಳ್ಳು ಹೇಳುತ್ತಾರೆ. ಸುಳ್ಳು ಅಂದರೆ ಕುಮಾರಸ್ವಾಮಿ, ಕುಮಾರಸ್ವಾಮಿ ಅಂದರೆ ಸುಳ್ಳು . ಆ ಕಾರಣಕ್ಕೆ ಅವರ ಟೀಕೆಗೆ ನಾನು ಉತ್ತರ ಕೊಡುವುದಿಲ್ಲ ಎಂದು ಸಿದ್ದರಾಮಯ್ಯರವರು ಹೇಳಿದ್ದಾರೆ. 

ಅಯೋಧ್ಯೆಗೆ ಹೋಗುತ್ತೀರಾ ಸರ್​?

ನೋಡಪ್ಪ,, ನನಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ. ಶ್ರೀರಾಮನ ಪೂಜೆ ಮಾಡುವ ವಿಚಾರದಲ್ಲಿ ನಾವೇನು ಹಿಂದೆ ಬಿದ್ದಿಲ್ಲ. ಆದರೆ ಅವರು ರಾಜಕೀಯ ಮಾಡೋದಕ್ಕೆ ಅವರು ಹೊರಟಿದ್ದಾರೆ. ಅದನ್ನು ವಿರೋಧ ಮಾಡುತ್ತೇವೆ ಹೊರತು ಶ್ರೀರಾಮನನ್ನಲ್ಲ.. ನಾನು ಸಹ ನೋಡುತ್ತೇನೆ. 22 ನೇ ತಾರೀಖು ಆದಮೇಲೆ ಪುರಸೊತ್ತು ಸಿಕ್ಕಾಗ ಅಯೋಧ್ಯೆಗೆ ಹೋಗಿ ನೋಡಿಕೊಂಡು ಬರುತ್ತೇನೆ.. ಆಮೇಲೆ 22 ನೇ ತಾರೀಖು ನಮ್ಮೆಲ್ಲಾ ಕಾರ್ಯಕರ್ತರು ರಾಮಮಂದಿರಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಬಿಜೆಪಿಯವರು ರಾಜಕೀಯ ಮಾಡುತ್ತಾರಷ್ಟೆ.. 

universal basic income  ಅಂದರೆ ಏನು?

ಯುರೋಪ್​ ದೇಶಗಳಲ್ಲಿ ದೇಶದ ಜನರ ಅಗತ್ಯಕ್ಕೆ ಪೂರಕವಾಗಿ ಈ ರೀತಿಯ ಇನ್​ಕಮ್​ ನೀಡುವ ವ್ಯವಸ್ಥೆಯಿದೆ. ಅದೇ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ  universal basic income  ತತ್ವದ ಅಡಿಯಲ್ಲಿ ಗ್ಯಾರಂಟಿ ಸ್ಕೀಂಗಳನ್ನ ತರಲಾಗಿದೆ ಎಂಬುದು ಸಿಎಂ ಸಿದ್ದರಾಮಯ್ಯರವರ ಸ್ಪಷ್ಟ ಮಾತಾಗಿದೆ. 

Share This Article