ಮಾತು..ಮೌನಕ್ಕೆ ಶರಣು! ಕೆಎಸ್‌ ಈಶ್ವರಪ್ಪರವರ ಬಂಡಾಯಕ್ಕೆ ಸಂಸದ ಬಿವೈ ರಾಘವೇಂದ್ರ ಮತ್ತು ಶಾಸಕ ಎಸ್‌ಎನ್‌ ಚನ್ನಬಸಪ್ಪರ ಉತ್ತರವೇನು?

Speech..surrender to silence! What is MP BY Raghavendra and MLA SN Channabasappa's response to KS Eshwarappa's rebellion?

ಮಾತು..ಮೌನಕ್ಕೆ ಶರಣು! ಕೆಎಸ್‌ ಈಶ್ವರಪ್ಪರವರ ಬಂಡಾಯಕ್ಕೆ ಸಂಸದ ಬಿವೈ ರಾಘವೇಂದ್ರ ಮತ್ತು ಶಾಸಕ ಎಸ್‌ಎನ್‌ ಚನ್ನಬಸಪ್ಪರ ಉತ್ತರವೇನು?
MP BY Raghavendra, MLA SN Channabasappa, KS Eshwarappa

shivamogga Mar 17, 2024 ಲೋಕಸಭಾ ಚುನಾವಣೆ 2024 ಶಿವಮೊಗ್ಗ ಕ್ಷೇತ್ರದಲ್ಲಿ ರಂಗೇರಿದೆ. ಅಷ್ಟೆ ಕುತೂಹಲಕ್ಕೂ ಕಾರಣವಾಗಿದೆ. ಕಾರಣ ಕೆಎಸ್‌ ಈಶ್ವರಪ್ಪನವರ ಬಂಡಾಯ. ಮೂರು ಆರಾಗಲಿ, ಆರು ಮೂರಾಗಲಿ ಚುನಾವಣೆಗೆ ನಿಂತೇ ಸಿದ್ಧ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಯಕರ ಪ್ರತಿಕ್ರಿಯೆಗಳು ಹೇಗೆ ಇರುತ್ತವೆ ಎಂಬುದೇ ಕುತೂಹಲಕಾರಿಯಾಗಿದೆ. 

ಶಿವಮೊಗ್ಗ ಬಿಜೆಪಿ ನಾಯಕರಿಗೆ ಬಿಎಸ್‌ ಯಡಿಯೂರಪ್ಪ ಹಾಗೂ ಕೆಎಸ್‌ ಈಶ್ವರಪ್ಪ ಇಬ್ಬರನ್ನು ಬಿಟ್ಟುಕೊಡಲಾಗದ ಸ್ಥಿತಿ. ಅದೇ ವೇಳೆ ಪಕ್ಷದ ವಿರುದ್ಧ ಬಂಡಾಯದಿಂದ ದೂರ ನಿಲ್ಲೆಬೇಕಾದ ಸನ್ನಿವೇಶ. ಹಿಂದೆ ಕೆಜೆಪಿ ಕಟ್ಟಿದಾಗ ಬಿಎಸ್‌ ಯಡಿಯೂರಪ್ಪನವರ ವಿಷಯದಲ್ಲಿ ಎದುರಿಸಿದ್ದ ಸಂದರ್ಭವನ್ನು ಇದೀಗ ಕೆಎಸ್‌ ಈಶ್ವರಪ್ಪನವರ ವಿಚಾರದಲ್ಲಿ ಬಿಜೆಪಿ ನಾಯಕರು ಎದುರಿಸುತ್ತಿದ್ದಾರೆ. ಅದರಲ್ಲಿಯು ಪ್ರಮುಖವಾಗಿ ಈ‍ಶ್ವರಪ್ಪನವರ ಬಂಡಾಯವನ್ನು ನೇರವಾಗಿ ಎದುರಿಸಬೇಕಾಗಿರುವ ಸಂಸದ ಬಿವೈ ರಾಘವೇಂದ್ರರವರು ಈ ವಿಚಾರದಲ್ಲಿ ಮೌನಂ ಶರಣಂ ಎನ್ನುತ್ತದ್ದಾರೆ. 

ಕೆಲ ದಿನಗಳ ಹಿಂದಷ್ಟೆ ಕೆಎಸ್‌ ಈಶ್ವರಪ್ಪ ಕೇಂದ್ರದಲ್ಲಿ ರಾಘವೇಂದ್ರ ಮಂತ್ರಿಯಾಗುವ ಮಟ್ಟಕ್ಕೆ ಲೀಡ್‌ ಕೊಟ್ಟು ಗೆಲ್ಲಿಸಬೇಕು ಎಂದು ಕರೆಕೊಟ್ಟಿದ್ರು. ಆದರೆ ಇದೀಗ ರಾಘವೇಂದ್ರರವರ ವಿರುದ್ಧವೇ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಮುಗಿಬಿದ್ದು ಪ್ರಶ್ನೆಗಳನ್ನ ಕೇಳಿದರು ಸಹ ಸಂಸದ ಬಿವೈ ರಾಘವೇಂದ್ರ ಹೆಚ್ಚು ಮಾತು ಆಡಲಿಲ್ಲ.  

ನಾವು ಈಗ ಸಂಪೂರ್ಣವಾಗಿ ಮೋದಿ ಅವರ ನಿರೀಕ್ಷೆಯಲ್ಲಿದ್ದೇವೆ. ಕುದುರೆಗೆ ಕಣ್ಣುಪಟ್ಟಿ ಕಟ್ಟಿದ್ದಂತೆ ಇದ್ದೇವೆ. ನಮ್ಮ ದೃಷ್ಟಿಯಲ್ಲಿ ಮೋದಿಯ ಕಡೆಗೆ ಇದೇಯೇ ಏನಃ, ಬೇರೆ ಏನು ಅಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ನಾಳಿನ ಮೋದಿ ಕಾರ್ಯಕ್ರಮವನ್ನ ತೋರಿಸುತ್ತಿರುವ ಸಂಸದ ಈಶ್ವರಪ್ಪನವರು ನಮ್ಮ ನಾಯಕರು ಅವರಿಗೆ ಬೇಸರವಾಗಿದೆ. ಎಲ್ಲವೂ ಸರಿಯಾಗಲಿದೆ ಎಂದು ಫಸ್ಟ್‌ ರಿಯಾಕ್ಷನ್‌ ನೀಡಿದ್ದರು. ಆನಂತರ ಸ್ಪರ್ಧೆ ವಿಚಾರದಲ್ಲಿ ಮಾತ್ರ ಮೌನ..ಮೌನ..ನೋ ಕಾಮೆಂಟ್ಸ್‌ ಎನ್ನುತ್ತಿದ್ದಾರೆ. 

ಇನ್ನೂ ಕೆಎಸ್‌ ಈಶ್ವರಪ್ಪನವರ ಪುತ್ರ ಕೆಇ ಕಾಂತೇಶ್‌ರವರಿಗೆ ಟಿಕೆಟ್‌ ನೀಡಬೇಕು ಎಂದು ಬೆಂಬಲಿಗರಾಗಿ ಸಂಸದರ ಮನೆಗೆ ಹೋಗಿ ಮನವಿ ಮಾಡಿದ್ದ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್‌ ಎನ್‌ ಚನ್ನಬಸಪ್ಪರವರು ಇದ್ದರು. ಆದರೆ ಇದೀಗ ಈಶ್ವರಪ್ಪ ಬಂಡಾಯ ಸಾರಿದ್ದಾರೆ. ಈ ಬಗ್ಗೆ ಅವರು ಸಹ ಹೆಚ್ಚು ಹೇಳುತ್ತಿಲ್ಲ. 

ಈಶ್ವರಪ್ಪನವರು ಪಕ್ಷವನ್ನು ಹಗಲು- ರಾತ್ರಿ ಕಟ್ಟಿ ಬೆಳೆಸಿದವರು. ಪಕ್ಷವನ್ನು ಹಾಳು ಮಾಡುವ ಸ್ಥಿತಿಗೆ ಅವರು ತಲುಪುತ್ತಾರೆ ಎಂಬ ನಂಬಿಕೆ ನನಗೆ ಇಲ್ಲ ಎಂದಿದ್ದಾರೆ. ಈಶ್ವರಪ್ಪ ಬಂಡಾಯವಾಗಿ ಸ್ಪರ್ಧಿಸುತ್ತಾರೆ ಎಂಬ ನಂಬಿಕೆಯೂ ಇಲ್ಲ, ವಿಶ್ವಾಸವೂ ಇಲ್ಲ. ಪುತ್ರನಿಗೆ ಟಿಕೆಟ್ ಸಿಗದೆ ಇರುವ ನೋವು, ಸಿಟ್ಟು, ಬೇಸರದಲ್ಲಿ ಬಂಡಾಯ ಸ್ಪರ್ಧೆ ಬಗ್ಗೆ ಹೇಳಿರಬಹುದು. ಈಶ್ವರಪ್ಪ ಆ ತರಹದ  ತೀರ್ಮಾನ ಜೀವನದಲ್ಲಿ ಮಾಡಲ್ಲ. ಇನ್ನು ಯಾವುದು ಮುಗಿದಿಲ್ಲ, ಎಲ್ಲವೂ ನಡೀತಿದೆ. ಪಕ್ಷದ ಹಿರಿಯರು ಮಾತುಕತೆ ನಡೆಸಿ ಎಲ್ಲವೂ ಸರಿ ಮಾಡುತ್ತಾರೆ. ಯಾವಾಗ, ಯಾರ್ಯಾರು, ಏನೇನು ಆಗ್ತಾರೆ ಅಂತಾ ಗೊತ್ತಿಲ್ಲ. ನಾನು ಶಾಸಕನಾಗುತ್ತೇನೆ ಎಂದು ಭಾವಿಸಿರಲಿಲ್ಲ. ಸಂಘಟನೆಯ ನಿರ್ಣಯದ ಹಿನ್ನೆಲೆ ಎಲ್ಲರೂ ಗೆಲ್ಲಿಸುವ ಕೆಲಸ ಮಾಡಿದ್ದರು. ಸಂಘಟನೆಗೆ ಗೆಲ್ಲಿಸುವ ಶಕ್ತಿಯಿದೆ. ಸಂಘಟನೆ ವಿರುದ್ಧ ಈಶ್ವರಪ್ಪನವರು ಹೋಗಲ್ಲ. ಅವರು ಹಿರಿಯರು. ನಾವು ಹೇಳೋಕೆ ಸಣ್ಣವರು. ದೊಡ್ಡವರು ಅವರು ಜೊತೆ ಮಾತನಾಡ್ತಾರೆ ಎಂದರು.