ಚುನಾವಣಾ ನೀತಿ ಸಂಹಿತೆ ಜಾರಿ! ಬಿಜೆಪಿ ಪ್ಲೆಕ್ಸ್‌, ಮೋದಿ ಬ್ಯಾನರ್‌ ತೆರವು! 1500 ರೌಡಿಶೀಟರ್ಸ್‌ ವಿರುದ್ಧ ಕ್ರಮ!?

Election code of conduct in force! BJP flexes, Modi banners removed Action against 1,500 rowdy-sheeters, goons

ಚುನಾವಣಾ ನೀತಿ ಸಂಹಿತೆ ಜಾರಿ! ಬಿಜೆಪಿ ಪ್ಲೆಕ್ಸ್‌, ಮೋದಿ ಬ್ಯಾನರ್‌ ತೆರವು! 1500 ರೌಡಿಶೀಟರ್ಸ್‌ ವಿರುದ್ಧ ಕ್ರಮ!?
Election code of conduct

shivamogga Mar 17, 2024  ಲೋಕಸಭೆ ಚುನಾವಣೆ 2024 ಹಿನ್ನೆಲೆಯಲ್ಲಿ ನೀತಿ ಸಂಹಿತೆ ನಿನ್ನೆಯಿಂದಲೇ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶಕ್ಕಾಗಿ ಹಾಕಿದ್ದ ಬ್ಯಾನರ್‌ , ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗುತ್ತಿದೆ. ನಾಳೆ  ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಹಲವೆಡೆ ಬಿಜೆಪಿ ಪ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನ ಹಾಕಲಾಗಿತ್ತು. ಶಿವಮೊಗ್ಗವಿಮಾನನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ ರಸ್ತೆಯಲ್ಲಿ ಬಿಜೆಪಿ ಧ್ವಜಗಳನ್ನು ಹಾಕಲಾಗಿತ್ತು. ಇದೀಗ  ಚುನಾವಣೆ ಅಧಿಕಾರಿಗಳ ಸೂಚನೆ ಯಂತೆ ಎಲ್ಲ ಫೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತಿದೆ. 

ಇನ್ನೂ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್‌ ಇಲಾಖೆ ಕೂಡ ಹೈ ಅಲರ್ಟ್‌ ಆಗಿದೆ. ಈ ಸಂಬಂಧ ನಿನ್ನೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಚುನಾವಣಾ ಕಾರ್ಯಕ್ಕೆ ಸುಮಾರು 3000ಕ್ಕೂ ಹೆಚ್ಚಿನ ಹೆಚ್ಚಿನ ಪೊಲೀಸ್ ಹಾಗೂ ಗೃಹರಕ್ಷಕ ಸೇವೆಯನ್ನು ಹಾಗೂ ಪ್ಯಾರಾ ಮಿಲಿಟರಿ ತುಕಡಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈಗಾಗಲೇ 1500 ರೌಡಿ ಶೀಟರ್ ಗಳು, ಗೂಂಡಾಗಳ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರು ಹೊಂದಿರುವ ಶಸ್ತ್ರಾಸ್ತ್ರಗಳನ್ನು ಡಿಪಾಜಿಟ್ ಮಾಡುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.