ಲೋಕಸಭಾ ಚುನಾವಣೆ 2024 ದಿನಾಂಕ ನಿಗದಿ! ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ! ಶಿವಮೊಗ್ಗದಲ್ಲಿ ಯಾವಾಗ ? ಯಾವ ಜಿಲ್ಲೆಯಲ್ಲಿ ಎಂದು ? ವಿವರ

Lok Sabha Elections 2024 Date Fixed The state will go to polls in two phases. Do you know when in Shimoga?

ಲೋಕಸಭಾ ಚುನಾವಣೆ 2024 ದಿನಾಂಕ ನಿಗದಿ! ರಾಜ್ಯದಲ್ಲಿ ಎರಡು ಹಂತಗಳಲ್ಲಿ ಮತದಾನ ! ಶಿವಮೊಗ್ಗದಲ್ಲಿ ಯಾವಾಗ ? ಯಾವ ಜಿಲ್ಲೆಯಲ್ಲಿ ಎಂದು ? ವಿವರ
Lok Sabha Elections 2024

shivamogga Mar 16, 2024   ಲೋಕಸಭಾ ಚುನಾವಣೆ 2024 ಕ್ಕೆ ದಿನಾಂಕ ಘೋಷಣೆಯಾಗಿದೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ  ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ  ನಡೆಯಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ  ಏಪ್ರಿಲ್‌ 26ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ವೋಟಿಂಗ್  ಮೇ 7ರಂದು ಮತದಾನ ನಡೆಯಲಿದೆ. ಜೂನ್‌ 4ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ರಾಜ್ಯದಲ್ಲಿ ಮೊದಲ ಹಂತ ಅಂದರೆ ಏಪ್ರಿಲ್ 26 ರಂದು ನಡೆಯಲಿರುವ ಮತದಾನವೂ ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ , ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ  ಗಳಲ್ಲಿ ನಡೆಯಲಿದೆ. 

ರಾಜ್ಯದಲ್ಲಿ ಎರಡನೇ ಹಂತ ಅಂದರೆ ಮೇ ಎಳರಂದು ನಡೆಯಲಿರುವ ಚುನಾವಣೆಯು  ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ,  ಕಲಬುರಗಿ, ರಾಯಚೂರು , ಬೀದರ್, ಕೊಪ್ಪಳ, ಬಳ್ಳಾರಿ , ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗದಲ್ಲಿ ನಡೆಯಲಿದೆ. 

ಎಲೆಕ್ಷನ್​ನ ಪೂರ್ಣ ವಿವರ 

 lok sabha election 2024

ಏಪ್ರಿಲ್ 19ರಂದು ಮೊದಲ ಹಂತದ ಮತದಾನ

lok sabha election 2024

ಏಪ್ರಿಲ್ 26ರಂದು ಎರಡನೇ ಹಂತದ ಮತದಾನ

 lok sabha election 2024

ಮೇ 7ರಂದು ಮೂರನೇ ಹಂತದ ಮತದಾನ

 lok sabha election 2024

ಮೇ  13 ರಂದು ನಾಲ್ಕನೇ ಹಂತದ ಮತದಾನ

 lok sabha election 2024

ಮೇ 20 ರಂದು ಐದನೇ ಹಂತದ ಮತದಾನ

 lok sabha election 2024

ಮೇ 25 ರಂದು ಆರನೇ  ಹಂತದ ಮತದಾನ

 lok sabha election 2024

ಜೂನ್ 1 ರಂದು ಎಳನೇ ಹಂತದ ಮತದಾನ

 lok sabha election 2024

ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟ