ನಾಳೆ ಲೋಕಸಭಾ ಚುನಾವಣೆ 2024 ದಿನಾಂಕ ಘೋಷಣೆ ! ಮಹತ್ವದ ಪ್ರಕಟಣೆ ತಿಳಿಸಿದ ಭಾರತೀಯ ಚುನಾವಣಾ ಆಯೋಗ

Press Conference by Election Commission of India to announce the Schedule for the General Elections to Lok Sabha and State Legislative Assemblies 2024

ನಾಳೆ ಲೋಕಸಭಾ ಚುನಾವಣೆ 2024 ದಿನಾಂಕ ಘೋಷಣೆ ! ಮಹತ್ವದ ಪ್ರಕಟಣೆ ತಿಳಿಸಿದ ಭಾರತೀಯ ಚುನಾವಣಾ ಆಯೋಗ

shivamogga Mar 15, 2024 : ನಾಳೆ ಬಹುತೇಕ ಲೋಕಸಭಾ ಚುನಾವಣೆ 2024  ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ.ಇದಕ್ಕೆ ಪೂರಕ ಎಂಬಂತೆ ಚುನಾವಣಾ ಆಯೋಗ ನಾಳೆ ಸುದ್ದಿಗೋಷ್ಟಿ ಕರೆದಿದೆ. ಈ ಪ್ರೆಸ್ ಮೀಟ್ ತೀವ್ರ ಕುತೂಹಲ ಕೆರಳಿಸಿದೆ. 

ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ಚುನಾವಣಾ ಆಯೋಗ ಕರೆಯಲ್ಪಡುವ ಸುದ್ದಿಗೋಷ್ಟಿಗಳು ಚುನಾವಣೆಯ ತಯಾರಿ ಹಾಗೂ ಎಲೆಕ್ಷನ್  ಘೋಷಣೆಗಾಗಿಯೇ ನಡೆಯತ್ತವೆ ಎಂಬುದು ಈ ಹಿಂದಿನ ಸುದ್ದಿಗೋಷ್ಟಿಗಳಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನಾಳಿನ ಸುದ್ದಿಗೋಷ್ಟಿ ಕುತೂಹಲ ಮೂಡಿಸಿದೆ.

ಈಗಾಗಲೆ ಎಲ್ಲಾ ಪಕ್ಷಗಳು ಚುನಾವಣೆ ತಯಾರಿ ಮಾಡಿಕೊಂಡಿದ್ದು, ಅತ್ತ  ಚುನಾವಣಾ ಆಯೋಗ ಕೂಡ ಈ ಸಂಬಂಧ ಸಿದ್ಧತೆ ಪೂರ್ಣಗೊಳಿಸಿದೆ. ಎಲೆಕ್ಷನ್ ಟ್ರಾನ್ಸಫರ್​ಗಳು ಸಮೇತ ಮುಗಿದ್ದು ಆಯಾ ಜಿಲ್ಲಾಡಳಿತಗಳು ಎಲೆಕ್ಷನ್ಗೆ ಬೇಕಿರುವ ಸಿಬ್ಬಂದಿಯನ್ನು ಸಜ್ಜುಗೊಳಿಸಿದೆ. 

ಇನ್ನೂ ಸುದ್ದಿಗೋಷ್ಟಿ ಸಂಬಂಧ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದ್ದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ Lok Sabha and State Legislative Assemblies 2024 ವೇಳಾಪಟ್ಟಿ ಪ್ರಕರಟಣೆ ಸಂಬಂಧ ಸುದ್ದಿಗೋಷ್ಟಿಯನ್ನು ಕರೆಯಲಾಗಿದೆ ಎಂದು ಸ್ಪಷ್ಟಪಡಿಸಿದೆ.  ಭಾರತದ ಚುನಾವಣಾ ಆಯೋಗದಿಂದ ಪತ್ರಿಕಾಗೋಷ್ಠಿ  

ಮಾರ್ಚ್ 16, 2024 (ಶನಿವಾರ); ಮಧ್ಯಾಹ್ನ 3 ಗಂಟೆಯಿಂದ Plenary Hall, Vigyan Bhawan, New Delhi ನಲ್ಲಿ ಸುದ್ದಿಗೋಷ್ಟಿ ನಡೆಯಲಿದೆ.. 

ಪ್ರಕಟಣೆಯಲ್ಲಿ ಏನಿದೆ. 

Press Conference by Election Commission of India to announce the Schedule for the General Elections to Lok Sabha and State Legislative Assemblies 2024 (preceded by lunch at Atrium)

March 16, 2024 (Saturday); 3 PM onwards

Plenary Hall, Vigyan Bhawan, New Delhi.

malenadutoday