ಲೋಕಸಭಾ ಚುನಾವಣೆ 2024 | ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಯಾದ ಬೆನ್ನಲ್ಲೆ ಮಹತ್ವದ ರಿಯಾಕ್ಷನ್​ ನೀಡಿದ ಸಂಸದ ಬಿವೈ ರಾಘವೇಂದ್ರ

Lok Sabha Elections 2024 | Mp BY Raghavendra reacts to Geetha Shivarajkumar's candidature

ಲೋಕಸಭಾ ಚುನಾವಣೆ 2024 |  ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿಯಾದ ಬೆನ್ನಲ್ಲೆ ಮಹತ್ವದ ರಿಯಾಕ್ಷನ್​ ನೀಡಿದ ಸಂಸದ ಬಿವೈ ರಾಘವೇಂದ್ರ
Lok Sabha Elections 2024, Mp BY Raghavendra, Geetha Shivarajkumar,

Shivamogga Mar 9, 2024   ಲೋಕಸಭಾ ಚುನಾವಣೆ-2024 | ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್! ಈ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಚುನಾವಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಹಾಲಿ ಸಂಸದ ಬಿವೈ ರಾಘವೇಂದ್ರ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 

ನಿನ್ನೆ ಈ ಸಂಬಂಧ ಮಾತನಾಡಿರುವ ಅವರು, ಶಿವಮೊಗ್ಗದಲ್ಲಿ ವಿರೋಧ ಪಕ್ಷದವರು ಅಭ್ಯರ್ಥಿ ಯಾರು ಎಂಬುದು ನಮಗೆ ಮುಖ್ಯವಾಗಲ್ಲ. ಪ್ರಧಾನಿ ನರೇಂದ್ರ ಮೋದಿ ಮಾಡಿದ ಅಭಿವೃದ್ಧಿಕೆಲಸವೇ ನಮಗೆ ಮುಖ್ಯ ಎಂದಿದ್ದಾರೆ. 

ಅಭಿವೃದ್ಧಿ ಹಾಗೂ ಕಾರ್ಯಕರ್ತರ ಪರಿಶ್ರಮ ನಮಗೆ ಶಕ್ತಿ. ಈ ಚೌಕಟ್ಟಿನಲ್ಲಿ ನಮಗೆ ವಿಶ್ವಾಸ ಇದೆ. ವಿರೋಧ ಪಕ್ಷದ ಅಭ್ಯರ್ಥಿ ಯಾರೆಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.