ಶಿವಮೊಗ್ಗ ಗ್ಯಾಂಗ್‌ ವಾರ್‌ ಕೇಸ್‌ | 18 ಮಂದಿ ಅರೆಸ್ಟ್‌ | 10 ಜನರ ವಿರುದ್ಧ 302 | 8 ಆರೋಪಿ ವಿರುದ್ಧ 307 ಕೇಸ್

Shimoga Gang War Case | 18 people arrested 302 against 10 people | 307 case against 8 accused

ಶಿವಮೊಗ್ಗ ಗ್ಯಾಂಗ್‌ ವಾರ್‌ ಕೇಸ್‌ | 18 ಮಂದಿ ಅರೆಸ್ಟ್‌  |  10 ಜನರ ವಿರುದ್ಧ  302 | 8 ಆರೋಪಿ ವಿರುದ್ಧ 307 ಕೇಸ್
Shimoga Gang War Case

SHIVAMOGGA | MALENADUTODAY NEWS | May 10, 2024  

ಶಿವಮೊಗ್ಗದ ಲಷ್ಕರ್‌ ಮೊಹಲ್ಲಾ ಸರ್ಕಲ್‌ ನಲ್ಲಿ ನಡೆದ ಗ್ಯಾಂಗ್‌ ವಾರ್‌ ಕೇಸ್‌ನಲ್ಲಿ ಸಾವಿನಪ್ಪಿದವರ ಸಂಖ್ಯೆ ಮೂರಕ್ಕೇರಿದೆ. ಇದರ ನಡುವೆ ಪ್ರಕರಣ ಸಂಬಂಧ 18 ಮಂದಿಯನ್ನ ಬಂಧಿಸಲಾಗಿದೆ.  

ಕೊಲೆ ಘಟನೆಯಲ್ಲಿ ಸ್ಥಳದಲ್ಲಿಯೇ  ಶೋಯಬ್ ಖಲಂದರ್ ಅಲಿಯಾಸ್ ಶೇಬು (32) ಹಾಗೂ ಅಣ್ಣಾ ನಗರ ನಿವಾಸಿ ಮೊಹಮ್ಮದ್ ಗೌಸ್‌ (30)  ಸಾವನ್ನಪ್ಪಿದ್ದೃು. ಆನಂತರ ಆಸ್ಪತ್ರೆಯಲ್ಲಿ ಯಾಸಿನ್‌ ಖುರೇಶಿ ಸಾವನ್ನಪ್ಪಿದ್ದ. ಈ ಪ್ರಕರಣ ಸಂಬಂಧ  ಪ್ರಮುಖ ಆರೋಪಿ ಆದಿಲ್ ಸೇರಿದಂತೆ 18 ಮಂದಿಯನ್ನು ಕೋಟೆ ಪೊಲೀಸ್‌ ಸ್ಟೇಷನ್‌ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ದೊಡ್ಡ ಮಟ್ಟದ ಗ್ಯಾಂಗ್‌ ವಾರ್‌ ಇದಾಗಿದ್ದು ಪ್ರಕರಣ ರಾಜಕೀಯವಾಗಿಯು ಚರ್ಚೆಯಾಗುತ್ತಿದೆ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ. ಮಾದಕ ವಸ್ತುಗಳ ದರ್ಬಾರ್‌ ಹೆಚ್ಚಾಗುತ್ತಿದೆ ಎಂದು ಶಿವಮೊಗ್ಗದ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.