ಮೇಲ್ಮನೆ ಚುನಾವಣೆ | ಅಭ್ಯರ್ಥಿಯ ಪರವಾಗಿ ಬಿವೈ ರಾಘವೇಂದ್ರರವರ ಬಿರುಸಿನ ಓಡಾಟ

Upper House Election | BY Raghavendra's dashing campaign on behalf of the candidate Southwest Graduate Constituency, Southwest Teachers Constituency, Dr. Dhananjay Sarji, Bojegowda

ಮೇಲ್ಮನೆ ಚುನಾವಣೆ |  ಅಭ್ಯರ್ಥಿಯ ಪರವಾಗಿ ಬಿವೈ ರಾಘವೇಂದ್ರರವರ ಬಿರುಸಿನ ಓಡಾಟ
Southwest Graduate Constituency, Southwest Teachers Constituency, Dr. Dhananjay Sarji, Bojegowda

SHIVAMOGGA | MALENADUTODAY NEWS | May 20, 2024  ಮಲೆನಾಡು ಟುಡೆ 

ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರವೂ ರಂಗೇರುತ್ತಿದೆ. ಅಸಮಾಧಾನಗಳ ಹೊರತಾಗಿಯು ಬಿಜೆಪಿ ಮುಖಂಡರು ತಮ್ಮ ಅಭ್ಯರ್ಥಿಯ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಈ ನಡುವೆ ಲೋಕಸಭಾ ಚುನಾವಣೆಯ ಓಡಾಟದ ಬಳಿಕ ರಿಲ್ಯಾಕ್ಸ್ ತೆಗೆದುಕೊಳ್ಳದ ಬಿ.ವೈ.ರಾಘವೇಂದ್ರ ತಮ್ಮ ಪಕ್ಷದ ಅಭ್ಯರ್ಥಿ ಡಾ.ಧನಂಜಯ್‌ ಸರ್ಜಿ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. 

ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಶಿಕಾರಿಪುರದ ಮಂಗಳ ಭವನದಲ್ಲಿ ಬಿಜೆಪಿ ಶಿಕಾರಿಪುರ ಮಂಡಲ ಪ್ರಮುಖ ಕಾರ್ಯಕರ್ತರ ವಿಶೇಷ ಸಭೆ ಆಯೋಜಿಸಿತ್ತು. 

ಈ ಸಭೆಯಲ್ಲಿ ಮಾತನಾಡಿದ ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ  ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಅವರ ಗೆಲುವಿಗೆ ಶ್ರಮ ವಹಿಸುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ ಪ್ರಬುದ್ಧರನ್ನ ಆಯ್ಕೆ ಮಾಡಬೇಕು ಎಂದು ಮಾತನಾಡಿದರು.