ಇಂದಿನಿಂದ ಮಾರಿಕಾಂಬಾ ಜಾತ್ರೆ ಆರಂಭ! ರಾಜ್ಯದ ಪ್ರಸಿದ್ದ ಜಾತ್ರೆ ಎಲ್ಲಿ ನಡೆಯುತ್ತೇ ಗೊತ್ತಾ?

Malenadu Today

Shivamogga Mar 19, 2024   ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರೆ ಮುಗಿದ ಬೆನ್ನಲ್ಲೆ  ಇಂದಿನಿಂದ ಪ್ರಸಿದ್ಧ ಶಿರಸಿ ಮಾರಿಕಾಂಬಾ ಜಾತ್ರೆ ಆರಂಭವಾಗಲಿದೆ. 

ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ರಾಜ್ಯದ ಅತಿ ದೊಡ್ಡ ಜಾತ್ರೆ ಎನಿಸಿರುವ ಶಿರಸಿ ಮಾರಿ ಕಾಂಬಾ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ

ಇವತ್ತು ಅಂದರೆ ಮಾ.19ರಿಂದ ಮಾ. 27ರಿಂದ 9 ದಿನಗಳ ಕಾಲ ಉತ್ಸವ ನಡೆಯಲಿದೆ. ಭಕ್ತರು ತಮ್ಮ ಆರಾಧ್ಯ ದೇವಿ ಶಿರಸಿಯಮ್ಮ, ಮಾರಿಯಮ್ಮನ ದರ್ಶನಕ್ಕೆ ಸಿದ್ದರಾಗಿದ್ದು ದರ್ಶನ ಆರಂಭವಾಗಿದೆ. 

ಶ್ರೀದೇವಿಯ ಭಕ್ತರಿಗೆ ಸೇವೆ ಸಲ್ಲಿಸಲು, ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿ, ಬಾಬುದಾರರ ಕುಟುಂಬಗಳು ಹಾಗೂ ತಾಲೂಕು ಆಡಳಿತ, ಸರ್ಕಾರದ ವಿವಿಧ ಇಲಾಖೆಗಳು ಶ್ರಮಿಸುತ್ತಿವೆ.

ಅಮ್ಮನವರ ಜಾತ್ರಾ ಕಲ್ಯಾಣ ಮಹೋತ್ಸವ ದಿ. 19 – 03 – 2024 ಸ. ರಾತ್ರಿ 11: 39 ರಿಂದ 11: 45 ರ ವರೆಗೆ,

ಅಮ್ಮನವರ ರಥಾರೋಹಣ ದಿ. 20 – 03 – 2024 ಸ. ಬೆಳಿಗ್ಗೆ 7: 29 ರಿಂದ 7: 39 ರ ಒಳಗೆ,

ಅಮ್ಮನವರ ರಥೋತ್ಸವ ಶೋಭಯಾತ್ರೆ ದಿ. 20 – 03 – 2024 ಸ. ಬೆಳಿಗ್ಗೆ 8: 59 ರಿಂದ,

ಜಾತ್ರಾ ಗದ್ದುಗೆಯ ಮೇಲೆ ಅಮ್ಮನವರ ಸ್ಥಾಪನೆ ಸ. ಮಧ್ಯಾಹ್ನ 12: 57 ರ ನಂತರ 1: 10 ರ ಒಳಗೆ,

ಅಮ್ಮನವರಿಗೆ ಉಡಿ, ಅರ್ಚನೆ, ಹರಕೆಗಳ ಸೇವೆ ದಿ. 21 – 03 – 2024 ಸ. ಬೆಳಿಗ್ಗೆ 5 ರಿಂದ ಪ್ರಾರಂಭ

ಅಮ್ಮನವರಿಗೆ ಉಡಿ, ಅರ್ಚನೆ, ಹರಕೆಗಳ ಸೇವೆಯ ಕೊನೆಯ ದಿ. 27 – 03 – 2024 ಸ. ಬೆಳಿಗ್ಗೆ 10:15 ಸೇವೆ ಮುಕ್ತಾಯ,

ಜಾತ್ರಾ ಮುಕ್ತಾಯ ಅಮ್ಮನವರು ಜಾತ್ರ ಗದ್ದುಗೆಯಿಂದ ಏಳುವುದು ದಿ. 27 – 03 – 2024 ಸ. ಬೆಳಿಗ್ಗೆ 10: 41 ಕ್ಕೆ,

ಅಮ್ಮನವರ ಪುನರ್ ಪ್ರತಿಷ್ಠೆ, ಯುಗಾದಿ ಪ್ರತಿಷ್ಠೆ ದಿ. 09 – 04 – 2024 ಸ. ಬೆಳಿಗ್ಗೆ 7: 51 ರಿಂದ 08: 03 ರ ಒಳಗೆ

Share This Article