ಕೇರಳದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮುಂಡಗಾರು ಲತಾ ಸತ್ತಿಲ್ಲವೇ? ಮಂಗಳೂರು ರೈಲು ಮತ್ತು ಸಿಸಿ ಕ್ಯಾಮರಾದ ಸತ್ಯ JP ಬರೆಯುತ್ತಾರೆ!

Didn't Mundagaru Latha die in an encounter in Kerala? JP writes the truth of mangalore train and CCTV camera!

ಕೇರಳದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮುಂಡಗಾರು ಲತಾ ಸತ್ತಿಲ್ಲವೇ? ಮಂಗಳೂರು ರೈಲು ಮತ್ತು ಸಿಸಿ ಕ್ಯಾಮರಾದ ಸತ್ಯ JP ಬರೆಯುತ್ತಾರೆ!
Didn't Mundagaru Latha die in an encounter in Kerala? JP writes the truth of mangalore train and CCTV camera!

Shivamogga | Feb 8, 2024 |  ನಕ್ಸಲ್ ನಾಯಕಿ ಮುಂಡಗಾರು ಲತಾ ಬದುಕಿದ್ದಾಳೋ..ಅಥವಾ ಸಾವನ್ನಪ್ಪಿದ್ದಾಳೋ..ಕರ್ನಾಟಕ ಕೇರಳ ಗಡಿಯ ಪೈರಿಂಗ್ ನಂತರ ಸಿಕ್ಕ ಸಿಸಿ ಕ್ಯಾಮರದ ದೃಶ್ಯ  ಹೇಳುವ ಸತ್ಯವೇನು ಗೊತ್ತಾ? JP Exclusive

ಮಲೆನಾಡಿನಲ್ಲಿ ಎರಡು ದಶಕಗಳಿಂದ ಪೊಲೀಸರು ಹಾಗು ನಕ್ಸಲ್ ನಿಗ್ರಹ ಪಡೆ ಹುಡುಕುತ್ತಿರುವ ನಕ್ಸಲರಲ್ಲಿ ಮುಂಡಗಾರು ಲತಾ ಕೂಡ ಒಬ್ಬಳು .ಲತಾಳನ್ನು ಹುಡುಕಿಕೊಟ್ಟವರಿಗೆ ರಾಜ್ಯ ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿ ಹದಿನೈದು ವರ್ಷಗಳೇ ಕಳೆದಿದೆ.ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಹಾಗು ಹೊಸಗದ್ದೆ ಪ್ರಭಾ ದಂಪತಿ ಕೇರಳ ಪೊಲೀಸರಿಗೆ ಸಿಕ್ಕಬಿದ್ದ ನಂತರ..ಸಂಘಟನೆ ಕಾರ್ಯ ಚಟುವಟಿಕೆಗಳಲ್ಲಿ ಸಾಕಷ್ಟು ವ್ಯತ್ಸಾಸಗಳಾಗಿವೆ ಎನ್ನಲಾಗಿದೆ. 

ಮಲೆನಾಡು 

ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಗೆ ಆರಂಭದಲ್ಲಿ ಸ್ಥಳೀಯರಿಂದ ಸಿಕ್ಕ  ಸಹಕಾರ ಮುಂದೆ ಸಿಗಲಿಲ್ಲ. ಯಾವಾಗ ಶೇಷಪ್ಪ ಗೌಡ್ರು  ಮತ್ತು ಕೆಸಮುಡಿ ವೆಂಕಟೇಶ್ ರನ್ನು ಪೊಲೀಸ್ ಮಾಹಿತಿದಾರ ಎಂದು ನಕ್ಲಲರು ಕೊಂದು ಹಾಕುತ್ತಾರೋ ಆಗಲೇ ಜನರಿಗೆ ನಕ್ಸಲರ ಬಗ್ಗೆ ಬೇರೆಯದ್ದೆ ಅಭಿಪ್ರಾಯಗಳು ಠಿಸಿಲೊಡೆದವು. ಇತ್ತ ಪೊಲೀಸರಿಂದ ಅತ್ತ ನಕ್ಸಲರಿಂದ ಮಲೆನಾಡಿಗರು ನಲುಗಿ ಹೋಗಿದ್ರು. ಕೊಲ್ಲುವ ಮಟ್ಟಕ್ಕೆ ಸಂಘಟನೆ ಮುಂದಾಗಿದ್ದು, ಮಲೆನಾಡಿಗರಿಗೆ ಇಷ್ಟವಾಗಲಿಲ್ಲ. 

ನಕ್ಸಲ್ ಸಂಘಟನೆಯಲ್ಲಿಯೇ ಮಂದಗಾಮಿ ಮತ್ತು ತೀವ್ರಗಾಮಿಗಳೆಂಬ ಬಿರುಕು ಸೃಷ್ಟಿಯಾಯ್ತು. ಬಂದೂಕಿನಿಂದಲೇ ಕ್ರಾಂತಿ ಎಂದು ನಂಬಿದ ತಂಡ ಭೂಗತವಾಗಿ ಹೋರಾಟ ಮುಂದುವರೆಸಿತು. ಸಂಘಟನೆ ಶಕ್ತಿಯಿಂದಲೇ ಕ್ರಾಂತಿ ಎಂದು ನಂಬಿದ ತಂಡ ಪೊಲೀಸರಿಗೂ ಶರಣಾಗದೆ ಭೂಗತರಾಗಿ ಉಳಿದರು.

ಇವರಲ್ಲಿ ಕೆಲವರು ನಗರ ಪ್ರದೇಶದಲ್ಲಿ ಆಶ್ರಯ ಪಡೆದು, ನಂತರ ಪೊಲೀಸರಿಂದ ಬಂಧನಕ್ಕೊಳಗಾದ್ರು. ಕೆಲವರು ನಕ್ಸಲ್ ಪ್ಯಾಕೇಜ್ ನಡಿ ಶರಣಾಗತರಾದ್ರು. ಜೈಲುವಾಸ ಅನುಭವಿಸಿ ಇಂದು ಸಮಾಜದಲ್ಲಿ ಉತ್ತಮವಾಗಿ ಬದುಕು ಕಟ್ಟಿಕೊಂಡಿದ್ದಾರೆ ಈ ನಡುವೆ ಪೊಲೀಸರ ಗುಂಡಿಗೆ ಮಲೆನಾಡಿನ ಇಪ್ಪತ್ತಕ್ಕೂ ಹೆಚ್ಚು ಮಂದಿ ನಕ್ಸಲರು ಗುಂಡಿಗೆ ಬಲಿಯಾದ್ರು.

ತೀವ್ರಗಾಮಿ ಹಾದಿಯಲ್ಲಿ ಸಾಗಿದ ತಂಡದ ನಾಯಕತ್ವ  ವಹಿಸಿಕೊಂಡವನು ಬಿ.ಜಿ ಕೃಷ್ಣಮೂರ್ತಿ. ಇವರಿಗೆ ಮಲೆನಾಡಿನಲ್ಲಿ ಆಶ್ರಯ ಸಿಗದಿದ್ದಾಗ ಸಂಘಟನೆ ಬಲಗೊಳಿಸಲು ಸಾಧ್ಯವಿಲ್ಲ ಎಂಬುದು ಅರಿವಾಗಿ,  ಹಾಸನ ಕೊಡಗು ಚಾಮರಾಜನಗರ ಮೂಲಕ ಕೇರಳ ಸಂಪರ್ಕ ಸಾಧಿಸಿದ್ರು. ಎಡಪಂಥೀಯ ಚಿಂತನೆಗೆ ಹತ್ತಿರವಾಗಿರುವ ಮನಸ್ಥಿತಿಯ ಜನರು ಇವರ ಸಂಘಟನೆಗೆ ಬೆಂಬಲ ನೀಡಿದ್ದು ಸುಳ್ಳಲ್ಲ. ನಾಲ್ಕೈದು ವರ್ಷಗಳಿಂದ ಕೇರಳ ತಮಿಳುನಾಡು ಕರ್ನಾಟಕ ಗಡಿಭಾಗದಲ್ಲಿ ಸಕ್ರೀಯವಾಗಿದ್ದ ತಂಡದ ಮಾಹಿತಿ ಪಡೆದ ಕೇರಳ ಪೊಲೀಸರು 2021 ರಲ್ಲಿ ಬಿ.ಜಿ ಕೃಷ್ಣಮೂರ್ತಿ ಮತ್ತು ಪ್ರಭಾಳನ್ನು ಬಂಧಿಸಿದ್ರು. ಇದಾದ ನಂತರ ಮಂಚೂಣಿಗೆ ಬಂದ ಹೆಸರೇ ಮುಂಡಗಾರು ಲತಾ.

ಮುಂಡಗಾರು ಲತಾ

ಕೊಪ್ಪ ತಾಲೂಕಿನ ಬುಕ್ಕಡಿ ಬೈಲಿನ ಮುಂಡಗಾರು ಲತಾಳಿಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನಲ್ಲಿ ಮಲೆನಾಡಿನ ಭಾಗಗಳಲ್ಲಿ ಲತಾ ಗುರುತಿಸಿಕೊಂಡಿದ್ದಳು. ಪೊಲೀಸರು ರಿಲೀಸ್ ಮಾಡಿರುವ ಮೋಸ್ಟ್ ವಾಂಟೆಂಡ್ ಲೀಸ್ಟ್ ನಲ್ಲಿ ಲತಾ ಕೂಡ ಒಬ್ಬಳು. 

ಇವಳ ಜಾಡು ಪತ್ತೆ ಮಾಡಿಕೊಟ್ಟವರಿಗೆ  ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿದೆ. ಮಲೆನಾಡಿನ ಶೋಷಿತ ದಮನಿತರ ಪರ ಹೋರಾಟ ಎಂದು ನಂಬಿದ ಲತಾ ನಂತರ ಬಂದೂಕು ಹೆಗಲಿಗೇರಿಸಿಕೊಂಡು ಕ್ರಾಂತಿಯ ಹಾದಿ ಹಿಡಿದಾಗ ಜನರೇ ದಿಗ್ಬ್ರಮೆಗೊಳಗಾದ್ರು. ತಾನು ಹೋಗುತ್ತಿರುವ ಹಾದಿ ಸರಿಯಿಲ್ಲ ಎಂದು ಗೊತ್ತಾಗೋ ಹೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು..ಪೊಲೀಸರು ಮೋಸ್ಟ್ ವಾಂಟೆಂಡ್ ಕರಪತ್ರವನ್ನು ಬಹಿರಂಗಗೊಳಿಸಿದ್ರು. ಅಲ್ಲಿಂದ ಇಲ್ಲಿವರೆಗೂ ಭೂಗತವಾಗಿಯೇ ಇರುವ ಲತಾ..ಬಿಜಿಕೆ ತಂಡದಲ್ಲಿ ಗುರುತಿಸಿಕೊಂಡಿದ್ದಳು.

ಕೇರಳದಿಂದ ಮತ್ತೆ ಮಲೆನಾಡಿನತ್ತ ಮುಖ ಮಾಡಿದಳೇ ಲತಾ?

ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇರಳದ ಗಡಿಭಾಗದಲ್ಲಿ ನಕ್ಸಲರು ಅಡಗಿದ ತಂಗುದಾಣದ ಮೇಲೆ ಪೊಲೀಸರು ಪೈರಿಂಗ್ ಮಾಡಿದ್ರು. ಈ ಕ್ಯಾಂಪ್ ನಲ್ಲಿ ಮುಂಡಗಾರು ಲತಾ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ. 

ಪೈರಿಂಗ್ ಆದ ಕೇರಳ ಕರ್ನಾಟಕ ಗಡಿಭಾಗದ ಸ್ಥಳೀಯ ಗ್ರಾಮಸ್ಥರು ಕಳೆದ ತಿಂಗಳು ಮುಂಡಗಾರು ಲತಾ ಸತ್ತಿದ್ದಾಳೆ ಎಂದು ಬ್ಯಾನರ್ ಕೂಡ ಹಾಕಿದ್ರು. ಬಾಡಿ ಸಿಗದೆ ಡೆತ್ ಡಿಕ್ಲೇರ್ ಮಾಡೋದು ಸುಲಭವಲ್ಲ. ಮುಂಡಗಾರು ಲತಾ ಸತ್ತಿದ್ದಾಳೆ ಎಂದು ಕೇರಳ ಗಡಿಭಾಗದ ಜನರು ಹೇಳುತ್ತಿದ್ದರೂ ಪೊಲೀಸರು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ.

ಕೇರಳದಿಂದ ಮಂಗಳೂರು ರೈಲು ಹತ್ತಿದ ಲತಾ ಹೋಗಿದ್ದಾರು ಎಲ್ಲಿಗೆ

ಪೈರಿಂಗ್ ಸಂದರ್ಭದಲ್ಲಿ  ಮುಂಡಗಾರು ಲತಾ. ತಪ್ಪಿಸಿಕೊಂಡಿದ್ದಾಳೆ. ನಂತರ ಮಂಗಳೂರು ಗೆ ಹೊರಡುವ ರೈಲು ಹತ್ತಿದ್ದಾಳೆ.  ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರದಲ್ಲಿ ಆಕೆಯ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ. ಮಂಗಳೂರು ಟ್ರೈನ್ ಹತ್ತಿದ ಲತಾ ಮಾರ್ಗ ಮಧ್ಯ  ಎಲ್ಲಿ ಇಳಿದಳು ಎಂಬುದಕ್ಕೆ ಕ್ಲೂಗಳಿಲ್ಲ. ನಂತರ ಆಕೆಯ ಲೊಕೇಷನ್ ಟ್ರೇಸ್ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ. ಮಂಗಳೂರು ರೈಲು ಹತ್ತಿದ ಮಂಡಗಾರು ಲತಾ ನಂತರ ಎಲ್ಲಿ ಹೋದಳು..ಏನಾದಳು ಗೊತ್ತಿಲ್ಲ. 

ಹೊಸಗದ್ದೆ ಪ್ರಭಾ ಸಾವನ್ನಪ್ಪಿದ್ದಾಳೆ ಎಂದಾಗ ಅಂದಿನ ಎಸ್ಪಿ ಮುರುಗನ್ ಹೇಳಿದ್ದೇ ಬೇರೆ

ಹದಿಮೂರು ವರ್ಷದ ಹಿಂದೆ ಹೊಸಗದ್ದೆಯಲ್ಲಿ ಪ್ರಭಾ ಸಾವನ್ನಪ್ಪಿದ್ದಾಳೆ. ಅವಳಿಗೆ ಗ್ರಾಮಸ್ಥರು ಶೃದ್ದಾಂಜಲಿ ಅರ್ಪಿಸಬೇಕು ಎಂದು ದೂರವಾಣಿ ಕರೆ ಮಾಡಿ ಗ್ರಾಮಸ್ಥರೊಬ್ಬರಿಗೆ ಹೇಳಿದ್ದರು. ಹೊಸಗದ್ದೆ ಪ್ರಭಾ ಕುಟುಂಬಸ್ಥರಿಗೆ ಮಾಹಿತಿ ನೀಡಿದಾಗ ಆ ಕುಟುಂಬ ಬಿಕ್ಕಿಬಿಕ್ಕಿ ಅತ್ತಿತ್ತು.  

ಆದರೆ ಪ್ರಭಾ ಸಾವನ್ನು ಡಿಕ್ಲೇರ್ ಮಾಡಲು ಅಂದಿನ ಎಸ್ಪಿ ಮುರುಗನ್ ಸುತಾರಾಂ ಒಪ್ಪಿರಲಿಲ್ಲ. ಬಾಡಿ ಸಿಗದ ಹೊರತು, ಡೆತ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.. ಈಗ ಮುಂಡಗಾರು ಲತಾ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದ್ದರೂ, ಆಕೆ ಮಂಗಳೂರು ರೈಲು ಹತ್ತಿರುವ ಬಗ್ಗೆ ರಾಜ್ಯ ಪೊಲೀಸರಿಗೆ ಕ್ಲೂ ಸಿಕ್ಕಿದೆ.