ಕೇರಳದಿಂದ ಶಿವಮೊಗ್ಗಕ್ಕೆ ನಕ್ಸಲ್ ಬಿ.ಜಿ.ಕೃಷ್ಣಮೂರ್ತಿ! ಕೋರ್ಟ್ಗೆ ಹಾಜರ್ ಸಾಧ್ಯತೆ!
Naxal BG Krishnamurthy from Kerala to Shimoga Appear in court today!
Shivamogga | Jan 29, 2024 | 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ (bg krishnamurthy) 2021 ರ ಡಿಸೆಂಬರ್ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ.
ಇದೀಗ ಅವರನ್ನ ಶಿವಮೊಗ್ಗ ಜಿಲ್ಲೆಯ ಪೊಲೀಸರು ಬಾಡಿ ವಾರಂಟ್ ಮೇಲೆ ಶಿವಮೊಗ್ಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಇವತ್ತು ಬಿಜಿಕೆ ಶಿವಮೊಗ್ಗ ಜಿಲ್ಲೆಗೆ ಬರಲಿದ್ದು ಪ್ರಕ್ರಿಯೆಗಳು ಮುಗಿದ ಬಳಿಕ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ.
ಕೇರಳದಲ್ಲಿ ಮಲೆನಾಡ ನಕ್ಸಲ್ಸ್ ಅರೆಸ್ಟ್! ಸಿಕ್ಕಿಬಿದ್ದ ಶ್ರೀಮತಿ , ಚಂದ್ರು! ಗುಂಡಿನ ಚಕಮಕಿ ನಡೆದಿದ್ದೇಕೆ?
ತೀರ್ಥಹಳ್ಳಿ ಪೊಲೀಸರ ತಂಡವೊಂದು ಈ ಸಂಬಂಧ ಕೇರಳ ಪೊಲೀಸರ ಮೂಲಕ ಬಾಡಿವಾರಂಟ್ ಮೇಲೆ ಬಿ.ಜಿ.ಕೃಷ್ಣಮೂರ್ತಿ ಯವರನ್ನ ಕರೆದುಕೊಂಡು ಬರಲು ನಿನ್ನೆಯೆ ಎಎನ್ಎಫ್ ಟೀಂನ ಜೊತೆಗೆ ತೆರಳಿತ್ತು.
ನಕ್ಸಲ್ ಬಿಜಿ ಕೃಷ್ಣಮೂರ್ತಿ ವಿರುದ್ಧ ಚಿಕ್ಕಮಗಳೂರು , ಉಡುಪಿ ಹಾಗೂ ಶಿವಮೊಗ್ಗದಲ್ಲಿ ಕೇಸ್ಗಳು ದಾಖಲಾಗಿದ್ದವು. ಈ ಪ್ರಕರಣಗಳ ಸಂಬಂಧ ಈಗಾಗಲೇ ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬಿಜಿಕೆಯನ್ನು ಕೋರ್ಟ್ಗೆ ಹಾಜರುಪಡಿಸಿವೆ. ಇದೀಗ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸರು ಹಾಜರುಪಡಿಸುತ್ತಿದ್ದಾರೆ. ವಿಶೇಷ ಅಂದರೆ ಎಲ್ಎಲ್ಬಿ ಓದಿರುವ ಬಿಜಿಕೆ ತನ್ನ ವಿರುದ್ಧದ ಪ್ರಕರಣಗಳಲ್ಲಿ ತಾನೇ ಕೋರ್ಟ್ನಲ್ಲಿ ವಾದ ಮಂಡಿಸುತ್ತಿದ್ದಾನೆ.
ಆಗುಂಬೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿನ ತಲ್ಲೂರು ಅಂಗಡಿ ಬಸ್ ಸುಟ್ಟ ಪ್ರಕರಣವೂ ಸೇರಿದಂತೆ ಬಿಜಿಕೆ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಬಿ.ಜಿ.ಕೃಷ್ಣಮೂರ್ತಿಯನ್ನ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನೂ ಈ ವಿಚಾರವನ್ನ ಗೌಪ್ಯವಾಗಿ ಇಡಲಾಗಿದ್ದು, ಯಾವ್ಯಾವ ಕೇಸ್ಗಳ ಅಡಿಯಲ್ಲಿ ಹಾಜರುಪಡಿಸಲಾಗುತ್ತಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಬಿಜಿಕೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?
ಬಿ.ಜಿ ಕೃಷ್ಣಮೂರ್ತಿ ಮಲೆನಾಡು ತೊರದೆ ಬಳಿಕ ಕೇರಳದ ಗಡಿಭಾಗದಲ್ಲಿ ಆಕ್ಟೀವ್ ಆಗಿದ್ದ ಅಲ್ಲದೆ ಮೈಸೂರಿನಲ್ಲಿಯೇ ಹೆಚ್ಚು ಓಡಾಡಿಕೊಂಡಿದ್ದ ಎಂಬ ವಿಚಾರವೂ ಇತ್ತು. ಸಾರ್ವಜನಿಕವಾಗಿಯೇ ಬಿಜಿಕೆ ಓಡಾಡಿಕೊಂಡಿದ್ದ ಎಂಬ ಮಾಹಿತಿ ಪೊಲೀಸ್ ಮೂಲಗಳಲ್ಲಿಯೇ ಇತ್ತು. ಆದರೆ ಆತನ ಚಹರೆ ಗುರುತು ಡಿಪಾರ್ಟ್ಮೆಂಟ್ಗೆ ಕಂಡು ಹಿಡಿಯುವುದು ಕಷ್ಟವಾಗಿತ್ತು.
ಈ ನಡುವೆ ಪೊಲೀಸರಿಗೆ ಶರಣಾದ ನಕ್ಸಲರು ಕೇರಳ ಪೊಲೀಸರಿಗೆ ಮಾಹಿತಿದಾರರಾಗಿ ಮಾಹಿತಿ ನೀಡಿದ್ರು, ಮೈಸೂರು ಕೇರಳ ಗಡಿಭಾಗದ ಟ್ರೈ ಜಂಕ್ಷನ್ ಮಾರ್ಗವಾಗಿ ಬಿ.ಜಿ ಕೃಷ್ಣಮೂರ್ತಿ ಕಾರಿನಲ್ಲಿ ಪಯಣಿಸುತ್ತಿರುವ ಮಾಹಿತಿ ಕೇರಳ ವೈನಾಡು ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಕಾರ್ಯತಂತ್ರ ರೂಪಿಸಿದರು. ಕೇರಳ ಪೊಲೀಸರ ವಿಶೇಷ ಟೀಂ ಮಾರುವೇಷದಲ್ಲಿ ಶಸ್ತ್ರಸಜ್ಜಿತರಾದರೂ, ನಿರಾಯುಧರಂತೆ ಕುಟುಂಬದವರು ಪ್ರಯಾಣಕ್ಕೆ ಹೋಗುವಂತೆ ರಸ್ತೆಯಲ್ಲಿ ಬಿಜಿಕೆಯನ್ನು ಹಿಂಬಾಲಿಸಿದ್ದರು.
ಮುಂದೆ ಕಾರಿನಲ್ಲಿ ಸಾಗುತ್ತಿದ್ದ ಬಿಜಿಕೆ ಕಾರು ಇದ್ದಕ್ಕಿದ್ದ ಹಾಗೆ ಕೈ ಕೊಟ್ಟಿತ್ತು. ಆಗ ಬಿಜಿಕೆ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ದಾರಿಹೋಕರ ಬಳಿ ಡ್ರಾಪ್ ಕೇಳುತ್ತಿದ್ದ. ಹಿಂಬದಿಯಿಂದ ಮಾರುವೇಷದಲ್ಲಿ ಫಾಲೋ ಮಾಡಿಕೊಂಡ ಬಂದ ಪೊಲೀಸರು ವಾಹನ ಚಲಾಯಿಸಿಕೊಂಡು ಬಿಜಿಕೆ ಸನಿಹವೇ ಬಂದರು. ಬಿಜಿಕೆ ಆ ಮಾರುವೇಷದ ಪೊಲೀಸರಿಗೂ ಕೈ ಮಾಡಿ ನಿಲ್ಲಿಸುವಂತೆ ಮನವಿ ಮಾಡಿದ. ಪೊಲೀಸರು ಬಿಜಿಕೆ ಸಮಸ್ಯೆ ತಿಳಿಯುವ ನೆಪದಲ್ಲಿ ಡ್ರಾಪ್ ಮಾಡುವುದಾಗಿ ಕಾರು ಹತ್ತಿಸಿಕೊಂಡಿದ್ದಾರೆ ಅಷ್ಟೆ. ಆದ್ರೆ ಕಾರಿನಲ್ಲಿ ಸಾಗುತ್ತಿದ್ದಾಗಲೇ ಪೊಲೀಸರು ಗನ್ ಟ್ರಿಗ್ಗರ್ ಒತ್ತಿದಾಗಲೇ ನಾನು ಅಂದರ್ ಆಗಿದ್ದೇನೆ ಎಂದು ಬಿಜಿಕೆಗೆ ಗೊತ್ತಾಗಿತ್ತು. ಈ ಬಗ್ಗೆ ಇನ್ನಷ್ಟು ವಿಶೇಷವಾದ ಮಾಹಿತಿ ಇಲ್ಲಿದೆ ಓದಿ ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್ ಕೇಳ್ತಿದ್ದ ನಕ್ಸಲ್ ನಾಯಕ ಪೊಲೀಸ್ ಬೋನಿಗೆ ಬಿದ್ದಿದ್ದು ಹೇಗೆ?