ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

How did Naxal leader BG Krishnamurthy fall into a police cage?

ಕಾರು ಕೆಟ್ಟು ಕೈಕೊಟ್ಟಾಗ  ಬಿಜಿ ಕೃಷ್ಣ ಮೂರ್ತಿ  ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?
How did Naxal leader BG Krishnamurthy fall into a police cage?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ ಎಂಬುದೇ ಗೊತ್ತಿರಲಿಲ್ಲ. ಈ ನಡುವೆ ಕೇರಳ ಪೊಲೀಸರಿಗೆ ಬಿ.ಜಿ.ಕೆ ಬಂಧನಕ್ಕೂ ಮುನ್ನಾ ನಕ್ಸಲ್ ವಿಚಾರದಲ್ಲಿ ದೊಡ್ಡ ಬ್ರೇಕ್ ಸಿಕ್ಕಿತ್ತು. ಲಿಜೇಶ್ ಅಲಿಯಾಸ್ ರಾಮು ಎಂಬಾತ ಕಳೆದ ಅಕ್ಟೋಬರ್ ಅಂತ್ಯದಲ್ಲಿ ಕೇರಳ ಪೊಲೀಸರ ಮುಂದೆ ಶರಣಾಗಿದ್ದ. ಅಲ್ಲದೆ ರಾಘವೇಂದ್ರ ಎಂಬಾತನನ್ನ ಕೇರಳ ಪೊಲೀಸರು ಅದಕ್ಕೂ ಎರಡು ದಿನದ ಹಿಂದಷ್ಟೆ ಬಂಧಿಸಿದ್ದರು. ಇವರಿಬ್ಬರ ವಿಚಾರಣೆ ವೇಳೆ ಹೇಳಿಕೊಂಡಂತೆ ಕಬಿನಿ ದಳದಲ್ಲಿ ಡೆಪ್ಯೂಟಿ ಕಮಾಂಡರ್ ಆಗಿದ್ದ ಲಿಜೇಶ್ ಅಲಿಯಾಸ್ ರಾಮು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದ.ಇನ್ನೂ ಕಳೆದ ಕೆಲವು ವರ್ಷಗಳಿಂದ ನಕ್ಸಲ್ ಗುಂಪಿನ ಕೊರಿಯರ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಬಿಜಿಕೆ ಹಾಗೂ ಸಾವಿತ್ರಿ ಸೇರಿದಂತೆ ಹಲವರ ಬಗ್ಗೆ ಮಾಹಿತಿ ನೀಡಿದ್ದ.

ಮೈಸೂರು ಊಟಿ ಮಾರ್ಗದಲ್ಲಿ ನಿಶ್ಚಿಂತೆಯಾಗಿ ಓಡಾಡಿಕೊಂಡಿದ್ದ ಬಿಜಿಕೆ /BG Krishnamurthy 

ಬಿ.ಜಿ ಕೃಷ್ಣಮೂರ್ತಿ ಕೇರಳದ ಗಡಿಭಾಗದಲ್ಲಿದ್ದರೂ. ಮೈಸೂರಿನಲ್ಲಿಯೇ ಹೆಚ್ಚು ಓಡಾಡಿಕೊಂಡಿದ್ದ ಎಂಬುದು ಮೂಲಗಳಿಂದ ತಿಳಿದು ಬಂದಿದೆ.ಮೈಸೂರಿನಲ್ಲಿ ಸಾರ್ವಜನಿಕವಾಗಿ ಓಡಾಡಿಕೊಂಡಿದ್ದರೂ ಪೊಲೀಸರಿಗೆ ಈತನೇ ಬಿಜಿಕೆ ಎಂದು ಗುರುತಿಸಲು ಸಾಧ್ಯವಾಗಿರಲಿಲ್ಲ.ಪೊಲೀಸರಿಗೆ ಶರಣಾದ ನಕ್ಸಲರು ಯಾವಾಗ ಮಾಹಿತಿದಾರರಾಗಿ ಬದಲಾಗುತ್ತಾರೋ, ಆಗ ಬಿಜಿಕೆಯ ಗೃಹಚಾರವೇ ಕೆಟ್ಟುಹೋಗಿತ್ತು. ನಕ್ಸಲ್ ಸಂಘಟನೆಗೆ ಅದು ದೊಡ್ಡ ಸೆಟ್ ಬ್ಯಾಕ್ ಕೂಡ ಆಗಿ ಹೋಯ್ತು.ಶರಣಾದ ನಕ್ಸಲರು ನೀಡಿದ ಮಾಹಿತಿ ಕೇರಳ ಪೊಲೀಸರಿದೆ ದೊಡ್ಡ ಲೀಡ್ ಸಿಕ್ಕಂತಾಯಿತು. ಆಗ ಕೇರಳ ಪೊಲೀಸರು ಬಿಜಿಕೆಗೆ ಬಲೆ ಬೀಸಿದ್ರು.ಅಂದುಕೊಂಡಂತೆ ಅಂದು ಮೈಸೂರು ಕೇರಳ ಗಡಿಭಾಗದ ಟ್ರೈ ಜಂಕ್ಷನ್ ಮಾರ್ಗವಾಗಿ ಬಿ.ಜಿ ಕೃಷ್ಣಮೂರ್ತಿ ಕಾರಿನಲ್ಲಿ ಪಯಣಿಸುತ್ತಿರುವ ಮಾಹಿತಿ ಕೇರಳ ವೈನಾಡು ಪೊಲೀಸರಿಗೆ ಲಭ್ಯವಾಗಿತ್ತು.

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು.

ತಕ್ಷಣ ಅಲರ್ಟ್ ಆದ ಪೊಲೀಸರು ಕಾರ್ಯತಂತ್ರ ರೂಪಿಸಿದರು. ಮಾರುವೇಷದಲ್ಲಿ ಶಸ್ತ್ರಸಜ್ಜಿತರಾದರೂ, ನಿರಾಯುದರಂತೆ ಕುಟುಂಬದವರು ಪ್ರಯಾಣಕ್ಕೆ ಹೋಗುವಂತೆ ರಸ್ತೆಯಲ್ಲಿ ಬಿಜಿಕೆಯನ್ನು ಹಿಂಬಾಲಿಸಿದರು.ಮುಂದೆ ಕಾರಿನಲ್ಲಿ ಸಾಗುತ್ತಿದ್ದ ಬಿಜಿಕೆ ಕಾರು ಇದ್ದಕ್ಕಿದ್ದ ಹಾಗೆ ಕೆಟ್ಟಿದೆ. ಆಗ ಬಿಜಿಕೆ ರಸ್ತೆ ಪಕ್ಕದಲ್ಲಿ ಕಾರು ನಿಲ್ಲಿಸಿ ದಾರಿಹೋಕರ ಬಳಿ ಡ್ರಾಪ್ ಕೇಳುತ್ತಿದ್ದ. ಹಿಂಬದಿಯಿಂದ ಮಾರುವೇಷದಲ್ಲಿ ಫಾಲೋ ಮಾಡಿಕೊಂಡ ಬಂದ ಪೊಲೀಸರು ವಾಹನ ಚಲಾಯಿಸಿಕೊಂಡು ಬಿಜಿಕೆ ಸನಿಹವೇ ಬಂದರು. ಬಿಜಿಕೆ ಆ ಮಾರುವೇಷದ ಪೊಲೀಸರಿಗೂ ಕೈ ಮಾಡಿ ನಿಲ್ಲಿಸುವಂತೆ ಮನವಿ ಮಾಡಿದ.

ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಪೊಲೀಸರು ಬಿಜಿಕೆ ಸಮಸ್ಯೆ ತಿಳಿಯುವ ನೆಪದಲ್ಲಿ ಡ್ರಾಪ್ ಮಾಡುವುದಾಗಿ ಕಾರು ಹತ್ತಿಸಿಕೊಂಡಿದ್ದಾರೆ ಅಷ್ಟೆ.ಆದ್ರೆ ಕಾರಿನಲ್ಲಿ ಸಾಗುತ್ತಿದ್ದಾಗಲೇ ಪೊಲೀಸರು ಗನ್ ಟ್ರಿಗರ್​ ಒತ್ತಿದಾಗಲೇ ನಾನು ಅಂದರ್ ಆಗಿದ್ದೇನೆ ಎಂದು ಬಿಜಿಕೆಗೆ ಗೊತ್ತಾಗಿದೆ. ಹುಲಿ ಬೋನಿಗೆ ಕುರಿ ತಾನಾಗೆ ಹೋಗಿ ಸಿಕ್ಕಂತಾದ ಕಥೆಗೆ ಕೃಷ್ಣಮೂರ್ತಿ ಸಾಕ್ಷಿಭೂತನಾಗಿದ್ದ.22 ವರ್ಷಗಳಿಂದ ಬಿಜಿಕೆ ಹೇಗಿದ್ದಾನೆ ಎಂದು ಗೊತ್ತಿರದ ಪೊಲೀಸರಿಗೆ, ಬಿಜಿಕೆ ಅರೆಸ್ಟ್ ಆದಾಗ ಅಚ್ಚರಿ ಆಶ್ಚರ್ಯ ಎರಡು ಮೂಡಿತ್ತು.ಮೈಸೂರಿಗೆ ಹಲವು ಬಾರಿ ಬಂದೋಗುತ್ತಿದ್ದ ಬಿಜಿಕೆ ಹಲವು ಬಾರಿ ಪೊಲೀಸರ ಸಮ್ಮುಖದಲ್ಲಿಯೇ ಚೆಕ್ ಪೋಸ್ಟ್ ಹಾದು ಹೋಗಿದ್ರೂ, ಆತನ ಸುಳಿವು ಪತ್ತೆಯಾಗಿರಲಿಲ್ಲ.

ಆದರೆ, ಅಂತಿಮವಾಗಿ ಕೇರಳ ಪೊಲೀಸರು ಆತನನ್ನ ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದರು.ಸುಲ್ತಾನ್​ ಬತ್ತೇರಿ ಭಾಗದಲ್ಲಿ ಕೇರಳ ಪೊಲೀಸರು ದಕ್ಷಿಣ ಭಾರತದ ನಕ್ಸಲ್​ ನಾಯಕ ನನ್ನ ಆರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ನಕ್ಸಲ್​ರಿಗೆ ದೊಡ್ಡ ಸೆಟ್​ ಬ್ಯಾಕ್​ ಆಗಿದೆ.