ಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು ನಂಬದ ಸ್ಟೋರಿಯಿದು!

ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು

ಎಲ್.ಎಲ್.ಬಿ ಯಲ್ಲಿ   ರ್ಯಾಂಕ್​  ಪಡೆದವ ಮುಂದೆ ನಕ್ಸಲ್ ಆಗಿದ್ದೇಗೆ ಗೊತ್ತ? ನೀವು  ನಂಬದ ಸ್ಟೋರಿಯಿದು!
The life story of Naxal B.G. Krishnamurthy

The life story of Naxal B.G. Krishnamurthy /ಎಎಲ್.ಎಲ್.ಬಿ ಯಲ್ಲಿ ರ್ಯಾಂಕ್​ ಪಡೆದವ ಮುಂದೆ ನ್ಯಾಯಾಧೀಶನಾಗುತ್ತಾನೆಂದು ಅಂದುಕೊಂಡಿದ್ದರು ಸಹಪಾಠಿಗಳು, ಆದರೆ ಈತ ಕವಲುದಾರಿಯಲ್ಲಿ ಸಾಗಿ ನಕ್ಸಲನಾಗುತ್ತಾನೆಂದು ಯಾರು ಊಹಿಸಿರಲಿಲ್ಲ! ನೀವು ನಂಬದ ಸ್ಟೋರಿಯಿದು

ಬಿ. ಜಿ ಕೃಷ್ಣಮೂರ್ತಿ. ಸಧ್ಯ ಕರ್ನಾಟಕ ತಮಿಳುನಾಡು, ಕೇರಳ ಪೊಲೀಸರ ಹಿಟ್ ಲೀಸ್ಟ್ ನಲ್ಲಿರುವ ನಕ್ಸಲ್ ನಾಯಕ. ದಕ್ಷಿಣ ಭಾರತದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಯಲ್ಲಿ ಮುನ್ನೆಡುಸುತ್ತದ್ದ ಕೃಷ್ಣಮೂರ್ತಿಯನ್ನು ಕೇರಳದ ವೈನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಿ. ಜಿ ಕೃಷ್ಣಮೂರ್ತಿ ಮುಂದೆ ನಕ್ಸಲ್ ಆಗುತ್ತಾನೆಂದು ಶೃಂಗೇರಿ ಭಾಗದ ಒಂಟಿಮನೆಗಳಲ್ಲಿನ ಯಾರೋಬ್ಬರೂ ಸಹ ಊಹಿಸಿರಲಿಲ್ಲ. ಬಾಲ್ಯದಿಂದಲೇ ಅತ್ಯಂತ ಪ್ರತಿಭಾನ್ವಿತನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಓದಿನಲ್ಲಿ ಮುಂದಿದ್ದ.

ಶೃಂಗೇರಿ ಉಜಿರೆಯಲ್ಲಿ ವಿಧ್ಯಾಭ್ಯಾಸ ಮಾಡಿದ ಕೃಷ್ಣಮೂರ್ತಿ ಎಲ್.ಎಲ್. ಬಿ ಮಾಡಲು ಬಂದಾಗಲೇ ಶಿವಮೊಗ್ಗದ ನೆಲ ಕವಲು ದಾರಿಯಲ್ಲಿ ಸಾಗುವಂತೆ ಮಾಡಿತು.

ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜ್ ನಲ್ಲಿ ಎಲ್.ಎಲ್. ಬಿ ಓದುವಾಗಲೇ ಜಗತ್ತಿನ ಹಲವಾರು ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅರಿತಿದ್ದ, ಕೃಷ್ಣಮೂರ್ತಿ ಅವುಗಳ ಬಗ್ಗೆ ಕುಲಂಕುಷವಾಗಿ ಚರ್ಚಿಸುತ್ತಿದ್ದ. ಬಡವರು ಶೋಷತರ ಪರವಾಗಿ ಹೋರಾಡುವ ಕಿಚ್ಚು ಚಿಗುರೊಡೆದಿದ್ದೇ ಆಗ. 1999 ರ ಎಲ್.ಎಲ್.ಬಿ ಔಟ್ ಪುಟ್ ಬ್ಯಾಚ್ ನಲ್ಲಿ ಬಿ.ಜಿ ಕೃಷ್ಣಮೂರ್ತಿ ರ್ಯಾಂಕ್ ವಿಜೇತ.

ಈತ ಮುಂದೆ ಜಡ್ಜ್ ಎಕ್ಸಾಮ್ ಬರೆದು ನ್ಯಾಯಾಧೀಶನಾಗುತ್ತಾನೆಂದು ಸಹಪಾಠಿಗಳು ಭಾವಿಸಿದ್ರು. ಯಾಕೆಂದ್ರೆ 1999 ರ ಬ್ಯಾಚ್ ನಲ್ಲಿ ಎಲ್.ಎಲ್.ಬಿ ಓದಿ ಪಾಸಾದವರು ವಿರಳಾತಿ ವಿರಳರಾಗಿದ್ರು.

ಇಂತಹ ಸಂದರ್ಭದಲ್ಲಿ ಬಿ.ಜಿ ಕೃಷ್ಣಮೂರ್ತಿ ರ್ಯಾಂಕ್ ಪಡೆದಿದ್ದ. ಮುಂದೆ ಹೈಕೋರ್ಟ್ ನಲ್ಲಿ ಪ್ರಾಕ್ಟಿಸ್ ಮಾಡಿದ ಬಿ.ಜಿ ಕೃಷ್ಣಮೂರ್ತಿ ಎಡಪಂಥೀಯ ವಿಚಾರಗಳತ್ತ ಒಲವು ತೋರಿದ.

2000 ಇಸವಿಯಲ್ಲಿ ಭೂಗತನಾದ ಬಿ.ಜೆ ಕೆ ಈಗ ಕೇರಳ ಪೊಲೀಸರು ಬಂಧಿಸಿದ್ದಾರೆ. ಅತೀ ಬುದ್ದಿವಂತನಾಗಿದ್ದ ಬಿಜಿಕೆ ಈ ರೀತಿ ನಕ್ಸಲ್ ಮಾರ್ಗದಲ್ಲಿ ಸಾಗುತ್ತಾನೆಂದು ಪೋಷಕರು ಭಾವಿಸಿರಲಿಲ್ಲ..ಆತನಿಗೆ ನಕ್ಸಲ್ ಸಂಘಟನೆಯತ್ತ ವಾಲುವಂತೆ ಮಾಡಿದ್ದೇ ಶಿವಮೊಗ್ಗ ನೆಲ.

ಶಿವಮೊಗ್ಗ ಬೀದಿಗಳಲ್ಲಿ ಹೋರಾಡುತ್ತಿದ್ದ ಯುವಕ ಯುವತಿಯರು

ಒಂದು ಕಾಲದಲ್ಲಿ ಶಿವಮೊಗ್ಗ ರಸ್ತೆಬೀದಿಗಳಲ್ಲಿ ಕಟೌಟ್ ಹಿಡಿದುಕೊಂಡು ಸಾಮಾಜಿಕ ಹಿತಾಸಕ್ತಿಗಾಗಿ ಹೋರಾಟ ನಡೆಸುತ್ತಿದ್ದ ಯುವಕ ಯುವತಿಯರು ನಿಘೂಡವಾಗಿ ಕಣ್ಮರೆಯಾಗಿ,ನಕ್ಸಲರಾಗುತ್ತಾರೆಂದು ಮಲೆನಾಡಿನ ಜನತೆ ಅಂದುಕೊಂಡಿರಲಿಲ್ಲ.

ಸಮಾಜದ ಮುಖ್ಯವಾಹಿನಿಯಲ್ಲಿಯೇ ಗುರುತಿಸಿಕೊಳ್ಳಬೇಕಾದ ಯುವಕ ಯುವತಿಯರು ಈ ರೀತಿ ಕೋವಿ ಹಿಡಿದು ಕಾಡು ಸೇರುತ್ತಾರೆಂದು ಯಾರು ಭಾವಿಸಿರಲಿಲ್ಲ..

ಸಾಮಾಜಿಕ ಹೋರಾಟದ ಪ್ರತಿರೂಪ ಈ ನಕ್ಸಲ್ ಹೋರಾಟ ಎಂದು ಅಂದುಕೊಂಡ,ಇವರಿಗೆ ನಾವು ಸಾಗುತ್ತಿರುವ ಹಾದಿ ಸರಿಯಿಲ್ಲ ಎಂದು ನಕ್ಸಲ್ ಸಂಘಟನೆಯನ್ನು ತೊರೆಯುವ ಹೊತ್ತಿಗೆ,ಕಾಲವೂ ಮಿಂಚಿಹೋಗಿತ್ತು.

ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಗರಿಗೆದರಿದ್ದೇ ಒಂದು ಇತಿಹಾಸ

ಶಿವಮೊಗ್ಗ ಜಿಲ್ಲೆ,ಹೇಳಿ ಕೇಳಿ ಎಲ್ಲಾ ಪ್ರಖ್ಯಾತಿ ಕುಖ್ಯಾತಿಗಳ ಹಣೆಪಟ್ಟೆಯನ್ನು ಕಟ್ಟಿಕೊಂಡ ಜಿಲ್ಲೆ.ಇದೇ ನೆಲದಲ್ಲಿ ಸಮಾಜವಾದಿ,ದಲಿತ ಚಳುವಳಿ ರೈತ ಚಳುವಳಿ,ಜೀತದಾಳುಗಳ ವಿರುದ್ಧ ಹೋರಾಟ ಕಾಗೋಡು ಹೋರಾಟ ಸೇರಿದಂತೆ ಹಲವು ಚಳುವಳಿಗಳಿಗೆ ಜೀವಕೊಟ್ಟ ತವರುನೆಲ.ರಾಜಕೀಯವಾಗಿ ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ನಾಡಿಗೆ ತನ್ನದೇ ಆದ ಕೊಡುಗೆ ನೀಡಿದೆ.

ಬಲಪಂಥೀಯ ಮತ್ತು ಎಡಪಂಥೀಯ ಚಿಂತನೆಗಳ ಗರ್ಭಗುಡಿ ಶಿವಮೊಗ್ಗ ಜಿಲ್ಲೆಯೇ ಆಗಿದೆ.ಹೀಗಾಗಿ ಇಲ್ಲಿ ನಕ್ಸಲ್ ವಾದ ಕೂಡ ಚಿಗುರೊಡೆಯಲು ಕಾರಣವಾಯ್ತು.ಕ್ರಮೇಣ ನಕ್ಸಲರ ಕಾರ್ಖಾನೆ ಶಿವಮೊಗ್ಗ ಎಂಬ ಅಪಖ್ಯಾತಿ ಕೂಡ ಬಂತು.

ಹೋರಾಟದ ಮನೋಭಾವ ಎಂಬುದು ಕೇವಲ ನ್ಯಾಯ ನೀತಿ,ಸತ್ಯದ ಪರ ಎಂಬುದಕ್ಕೆ ಮಾತ್ರ ಮೀಸಲಾಗಿದ್ದ ಸಂದರ್ಭದಲ್ಲಿಯೇ ರೌಡಿಸಂ ಗೂ ಸಹ ಶಿವಮೊಗ್ಗ ನೆಲದ ಮಣ್ಣೇ ಕಾರಣವಾಯ್ತು.

ಹೀಗಾಗಿ ಶಿವಮೊಗ್ಗ ಜಿಲ್ಲೆ ಎಲ್ಲಾ ರೀತಿಯ ಅಕ್ರಮ ಅಪರಾಧ,ಕಾನೂನು ಬಾಹಿರ ಚಟುವಟಿಕೆಗಳಿಂದ ಪ್ರಖ್ಯಾತಿ ಜೊತೆಗೆ ಕುಖ್ಯಾತಿ ಹಣೆಪಟ್ಟೆಯನ್ನು ಕೂಡ ಪಡೆಯುವಂತಾಯಿತು.

ನಕ್ಸಲಿಸಂಗೆ ತಾಯಿ ಬೇರಾಗಿದ್ದ ಶಿವಮೊಗ್ಗ

ಒಂದು ಕಾಲದಲ್ಲಿ ನಕ್ಸಲ್ ತಾಯಿ ಬೇರಾಗಿದ್ದ ಶಿವಮೊಗ್ಗದಲ್ಲಿ, ಇತ್ತಿಚ್ಚಿನ ವರ್ಷಗಳಲ್ಲಿ ನಕ್ಸಲ್ ಚಟುವಟಿಕೆ ಕುಂಟಿತಗೊಂಡಿದೆ.ನಕ್ಸಲರ ಸಿದ್ದಾಂತಕ್ಕೆ ಮಲೆನಾಡ ಗಡಿಭಾಗದ ಜನರು ವಿಮುಖರಾಗಿದ್ದಾರೆ.

ಹೀಗಾಗಿ ನಕ್ಸಲರ ಸಂಘಟನಾ ಶಕ್ತಿ ಕುಸಿದಿದೆ.ವೈಚಾರಿಕಾ,ಸೈದ್ಧಾಂತಿಕ ಭಿನ್ನಾಬಿಪ್ರಾಯದಿಂದ ಬೇರೆಯಾದ ಮಂದಗಾಮಿ ಮತ್ತು ತೀವೃಗಾಮಿ ನಕ್ಸಲರಲ್ಲಿ ಬಹುತೇಕಮಂದಿ ಕಾಡನ್ನು ತೊರೆದು, ನಾಡನ್ನು ಸೇರಿದ್ದಾರೆ.

ಎಡಪಂಥೀಯ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ಯುವಕ ಯುವತಿಯರು

ಮಲೆನಾಡಿನಲ್ಲಿ ನಕ್ಸಲರ ಹುಟ್ಟಿಗೆ ಕಾರಣವಾಗಿದ್ದು,ಶಿವಮೊಗ್ಗ ನಗರದಲ್ಲಿ 90 ರ ದಶಕದಲ್ಲಿ ಸಕ್ರೀಯವಾಗಿದ್ದ ಎಡಪಂಥೀಯ ಚಿಂತನೆಯ ಸಾಮಾಜಿಕ ಹೋರಾಟಗಳು.

ಮಹಿಳಾ ಜಾಗೃತಿ ಸಂಘಟನೆ.ಕರ್ನಾಟಕ ವಿಮೋಚನಾ ರಂಗ,ಸಿವಿಲ್ ಲಿಬರ್ಟೀಸ್ ಪೋರಂ ನಂತಹ ಸಂಘಟನೆಗಳಲ್ಲಿ ಪಾರ್ವತಿ ಹಾಜಿಮ,ವರಲೆ ಸರೋಜ,ಹೊಸಗದ್ದೆ ಪ್ರಭಾ,ಬಿ.ಜಿ ಕೃಷ್ಣಮೂರ್ತಿ,ದೇವೇಂದ್ರಪ್ಪರಂತ ಯುವಕ ಯುವತಿಯರು ಶಿವಮೊಗ್ಗ ನಗರದ ಬೀದಿಗಳಲ್ಲಿ ಕಟೌಟ್ ಇಳಿದು ಬೀದಿಗಿಳಿದ್ರೆ,ಆ ಹೋರಾಟ ತಾರ್ಕಿಕ ಅಂತ್ಯ ಕಾಣುವವರೆಗೂ ಬಿಡುತ್ತಿರಲಿಲ್ಲ.

ಎಡಪಂಥೀಯ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ಈ ಯುವಕರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಅದೇ ಹಾದಿಯಲ್ಲಿ ಮುಂದುವರೆದಿದ್ದರೆ,ಈಗ ಉತ್ತಮ ಜನಪ್ರತಿನಿಧಿಗಳಾಗುತ್ತಿದ್ರೇನೋ ಗೊತ್ತಿಲ್ಲ.ಆದ್ರೆ ಇವರಲ್ಲಿ ಬಹಳಷ್ಟು ಮಂದಿಯಲ್ಲಿ ಕ್ರಾಂತಿಕಾರಿ ಹೋರಾಟದ ಮನೋಭಾವ ಚಿಗುರೊಡೆದಿತ್ತು.

ಪರಿಸರವಾದಿಳಾಗಿ ಕಾಡು ಸೇರಿದ್ರು

1996 ರಿಂದ 2000 ರವರೆಗೆ ಶಿವಮೊಗ್ಗದಲ್ಲಿ ಈ ಯುವಕ ಯುವತಿಯರ ಹೋರಾಟ ಕುಂಟಿತವಾಯ್ತು.ಶಿವಮೊಗ್ಗ ನಗರದಿಂದ ನಿಘೂಡವಾಗಿ ಇವರಲ್ಲಿ ಬಹಳಷ್ಟು ಮಂದಿ ಭೂಗತರಾದ್ರು.

ನಾಡಿನಲ್ಲಿದ್ದ ಇವರೆಲ್ಲಾ ಇದ್ದಕ್ಕಿದ್ದಂತೆ ಕ್ರಾಂತಿಕಾರಿ ಪರಿಸರವಾದಿಳಾಗಿ ಕಾಡನ್ನು ಸೇರಿದ್ರುಶಿವಮೊಗ್ಗ, ಚಿಕ್ಕಮಗಳೂರು,ಉಡುಪಿ, ಮಂಗಳೂರು ನಾಲ್ಕು ಜಿಲ್ಲೆಗಳನ್ನು ಹಾದುಹೋಗುವ ಪಶ್ಚಿಮಘಟ್ಟ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಓಡಾಡತೊಡಗಿದರು.

ಪರಿಸರವಾದಿಗಳ ಹೆಸರಿನಲ್ಲಿ ಜನರ ವಿಶ್ವಾಸ ಗಳಿಸಿದ ಇವರೆಲ್ಲರು ಪಶ್ಚಿಮಘಟ್ಟ ಕಾಡಿನ ಮಾರ್ಗಗಳ ನಕಾಶೆಗಳನ್ನು ಸಿದ್ದಪಡಿಸಿದರು.ನಕ್ಸಲ್ ಸಂಘಟನೆ ಗಟ್ಟಿಗೊಳಿಸಲು ಹೋಗಿ ಎಲ್ಲರೂ ವಿಫಲರಾದರು.

ಹಿಗಾಗಿ ನಕ್ಸಲ್ ಸಂಘಟನೆಯನ್ನು ಕಟ್ಟಬೆಕೆಂದು ಬಿ.ಜಿ.ಕೆ ಕೇರಳ ತಮಿಳುನಾಡು ಕರ್ನಾಟಕ ಗಡಿಜಿಲ್ಲೆಗಳಲ್ಲಿ ಸಕ್ರೀಯನಾಗಿದ್ದ. ಆದ್ರೆ ಸದಾ ನಕ್ಸಲರ ಬೇಟೆಯಲ್ಲಿದ್ದ ಪೊಲೀಸರಿಗೆ ಅಂತಿಮವಾಗಿ ಬಿಜಿಕೆ ಸಿಕ್ಕಿಬಿದ್ದಿದ್ದಾನೆ.

ಇವನ ವಿರುದ್ಧ ಶಿವಮೊಗ್ಗದಲ್ಲಿಯೇ ಆಗುಂಬೆ ಬಸ್ ಸುಟ್ಟ ಪ್ರಕರಣ ಅರಣ್ಯ ಇಲಾಖೆ ಚೆಕ್ ಪೋಸ್ಟ್ ದಾಳಿ, ಶೇಷಪ್ಪಗೌಡ್ಲು ಹತ್ಯೆ ಪ್ರಕರಣದಂತ ಹಲವು ಕೇಸುಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾ