KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
State news | ನಕ್ಸಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಬಂದಿದೆ. ಕೇರಳದ ನಕ್ಸಲ್ ನಿಗ್ರಹ ದಳವಾದ ಥಂಡರ್ ಬೋಲ್ಸ್ ಇಬ್ಬರು ನಕ್ಸಲರನ್ನ ಅರೆಸ್ಟ್ ಮಾಡಿ ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದೆ. ಅರೆಸ್ಟ್ ಆಗಿರುವ ಇಬ್ಬರು ಕರ್ನಾಟಕದ ಮೂಲದವರು ಎನ್ನಲಾಗುತ್ತಿದ್ದು, ಓರ್ವ ಮಹಿಳೆ ಶೃಂಗೇರಿಯ ಶ್ರೀಮತಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನನ್ನ ಚಂದ್ರು ಎನ್ನಲಾಗುತ್ತಿದ್ದು, ಆತನ ಪೂರ್ವಪರ ಇನ್ನಷ್ಟೆ ತಿಳಿದುಬರಬೇಕಿದೆ. ಇಬ್ಬರು ಸಹ ನಿನ್ನೆ ಕೋರ್ಟ್ಗೆ ಹಾಜರು ಪಡಿಸಲಾಗಿದೆ.
ಕೇರಳದ ವಯನಾಡು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಕ್ಸಲರ ಓಡಾಟ ಹೆಚ್ಚಿದೆ. ಈ ಬಗ್ಗೆ ಗುಪ್ತಚರ ಮಾಹಿತಿ ಆಧರಿಸಿ ಥಂಡರ್ ಬೋಲ್ಟ್ ಟೀಂ ಈ ಭಾಗದಲ್ಲಿ ಸಕ್ರಿಯೆವಾಗಿತ್ತು. ಈ ಮಧ್ಯೆ ನವೆಂಬರ್ ಏಳರ ರಾತ್ರಿ ಐವರು ನಕ್ಸಲರು( 4 ಮಹಿಳೆಯರು ಮತ್ತು 1 ಪುರುಷ) ವಯನಾಡು ಜಿಲ್ಲೆಯ ಬರಿಯಂ ಅರಣ್ಯದ ಪಕ್ಕದಲ್ಲಿರುವ ಪೆರಿಯಾ ಚಪ್ಪರತ್‌ನಲ್ಲಿರುವ ಅನೀಶ್ ಎಂಬುವವರ ಮನೆಗೆ ಬಂದಿದ್ದಾರೆ. ಮೊಬೈಲ್ ಫೋನ್ ಗಳನ್ನು ಚಾರ್ಜರ್ ಗೆ ಹಾಕಿ ಆಹಾರ ಪದಾರ್ಥಗಳನ್ನು ಅವರು ಪಡೆಯುತ್ತಿದ್ದರು.
ಈ ವೇಳೆ ವಿಚಾರ ತಿಳಿದು ಥಂಡರ್ ಬೋಲ್ಟ್ ಟೀಂ ಸ್ಥಳಕ್ಕೆ ದೌಡಾಯಿಸಿ ಆ್ಯಂಬುಷ್ ಆರಂಭಿಸಿದೆ. ನಕ್ಸಲರು ಹಾಗೂ ಸ್ಪೆಷಲ್ ಟೀಂನ ನಡುವೆ ಗುಂಡಿನ ದಾಳಿ ಆಗಿದ್ದು. ಈ ವೇಳೆ ಉನ್ನಿಮ್ಮಾಯ ಅಲಿಯಾಸ್ ಶ್ರೀಮತಿ ಮತ್ತು ಚಂದ್ರು ಗಾಯಗೊಂಡಿದ್ದಾರೆ. 45 ವರ್ಷದ ಇಬ್ಬರನ್ನ ಬಂಧಿಸಲಾಗಿದೆ. ಇನ್ನೂ ಘಟನೆಯಲ್ಲಿ ಮತ್ತೊಬ್ಬ ನಕ್ಸಲ್ ವುಮೆನ್ಗೆ ಗಾಯವಾಗಿದ್ದು ಪೊಲೀಸ್ ಮೂಲಗಳ ಪ್ರಕಾರ, ಅವರೆಲ್ಲಾ ಹೆಚ್ಚು ದೂರ ಕಾಡಿನೊಳಗೆ ಹೋಗಿರುವ ಸಾಧ್ಯತೆ ಇಲ್ಲ. ಹೀಗಾಗಿ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕೇರಳದಲ್ಲಿ ನಕ್ಸಲ್ ಚಟುವಟಿಕೆ ತೀವ್ರಗೊಂಡಿರುವ ಬೆನ್ನಲ್ಲೆ ಪೊಲೀಸ್ ಇಲಾಖೆ ಕೂಡ ಅಷ್ಟೆ ಸೀರಿಯಸ್ ಆಗಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸ್ತಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ತಾಲೂಕಿನ ಬೆಳಗೋಡುಕೊಡಿಗೆಯ ಶ್ರೀಮತಿ ಅಲಿಯಾಸ್ ಉನ್ನಿಮಾಯ ವಿರುದ್ಧ ಹಲವು ಕೇಸ್ಗಳಿವೆ ಮೂಲಗಳ ಪ್ರಕಾರ 30 ಕ್ಕೂ ಹೆಚ್ಚು ಕೇಸ್ಗಳು ಈಕೆ ಮೇಲೆ ಇವೆ ಎನ್ನಲಾಗಿದೆ. ಶೃಂಗೇರಿ ತಾಲೂಕು ಬೇಗಾರ್ ಗ್ರಾಮ ಪಂಚಾಯಿತಿಯ ಕೆ.ಮಸಿಗೆ ಗ್ರಾಮದ ಬೆಳಗೋಡುಕೊಡಿಗೆಯ ಪುಟ್ಟುಗೌಡ ಮತ್ತು ಗಿರಿಜಾ ಅವರ ಮಗಳಾದ ಶ್ರೀಮತಿಗೆ ಒಬ್ಬಳು ಸೋದರಿ, ಇಬ್ಬರು ಸೋದರರು ಇದ್ದಾರೆ. 2007 ಜನವರಿಯಿಂದ ಮನೆಯಿಂದ ನಾಪತ್ತೆಯಾದ ಈಕೆ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದಳು. 2009 ರ ತನಿಕೋಡು ಚೆಕ್‌ಪೋಸ್ಟ್‌ನ ಅರಣ್ಯ ಇಲಾಖೆಯ ತಪಾಸಣಾ ಕೊಠಡಿ ಧ್ವಂಸ, ಮಾತೊಳ್ಳಿಯಲ್ಲಿ ಲೋಕಸಭೆ ಚುನಾವಣೆ ಸಂದರ್ಭ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲೂ ಭಾಗಿಯಾಗಿದ್ದ ಆರೋಪ ಈಕೆ ಮೇಲಿದೆ..
