ನೋಡಲು ಮರೆಯದಿರಿ: ವೈಭವದ ಸೀತಾ ಕಲ್ಯಾಣ ಮಹೋತ್ಸವ! ಕೋಟೇ ರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ತಿಂಗಳಿಡಿ ಹಬ್ಬ

ajjimane ganesh

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗ ನಗರದ ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ ದಲ್ಲಿ (Kote Sitaramanjaneya Temple) ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿಯ ವತಿಯಿಂದ ಡಿಸೆಂಬರ್‌ 7, ಭಾನುವಾರದಿಂದ ಆರಂಭಗೊಂಡು ಜನವರಿ 5, ಸೋಮವಾರದವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾನಾಮಾರ್ಚನ ಮಹೋತ್ಸವವನ್ನು ವೈಭವದಿಂದ ನಡೆಸಲು ಸಕಲ ಸಿದ್ಧತೆ  ಕೈಗೊಳ್ಳಲಾಗಿದೆ. 

Kote Sitaramanjaneya Temple
Kote Sitaramanjaneya Temple
Kote Sitaramanjaneya Temple
Kote Sitaramanjaneya Temple
Kote Sitaramanjaneya Temple
Kote Sitaramanjaneya Temple

ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುವಂತೆ  ಶಿವಮೊಗ್ಗದಲ್ಲಿ 101 ಈಡುಗಾಯಿ ಸೇವೆ: ಯುವಕರಿಂದ ವಿಶೇಷ ಪೂಜೆ

ಇದರ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಒಂದು ತಿಂಗಳ ಪರ್ಯಂತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಅಂತಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಮಹೋತ್ಸವಕ್ಕೆ ಡಿಸೆಂಬರ್‌ 7 ರಂದು ಬೆಳಿಗ್ಗೆ ಮಹಾ ಸಂಕಲ್ಪ ಮತ್ತು ನವಗ್ರಹ ಪೂಜೆಯನ್ನು ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಗುತ್ತಿದೆ

ಡಿಸೆಂಬರ್‌ 8 ರಿಂದ ಡಿಸೆಂಬರ್‌ 17 ರವರೆಗೆ 10 ದಿನಗಳ ಕಾಲ ಶ್ರೀ ಭಾಗವತ ಮಹಾ ಪುರಾಣ ಹೋಮ ನಡೆಯಲಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಹೆಚ್. ಆರ್. ಶ್ರೀಧರ್‌ರವರಿಂದ ಪ್ರತಿನಿತ್ಯ ಸಂಜೆ 6:30 ಕ್ಕೆ ಭಾಗವತ ಸಪ್ತಾಹ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 

ಇದೇ ರೀತಿ ಡಿಸೆಂಬರ್‌ 15 ರಿಂದ ಡಿಸೆಂಬರ್‌ 17 ರವರೆಗೆ ಕಲ್ಲಾಪುರದ ಪವಮಾನ ಆಚಾರ್ಯ ಅವರಿಂದ ವಿಷ್ಣುವಿನ ದಶಾವತಾರಗಳ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವಗಳು ಜರುಗಲಿವೆ.

ಬಲೆಗೆ ಬಿದ್ದ ಬೀದಿ ನಾಯಿಗೆ ನಿರ್ದಯವಾಗಿ ಹೊಡೆದು ಸಾಯಿಸಿದ ದುಷ್ಕರ್ಮಿಗಳು! ವಿಡಿಯೋ ವೈರಲ್​!

ಡಿಸೆಂಬರ್‌ 18 ರಂದು ಸಪ್ತ ಚಿರಂಜೀವಿಗಳ ಪೂಜೆ ಮತ್ತು ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್‌ಕುಮಾರ್ ಮತ್ತು ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣದ ಕುರಿತು ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. 

Kote Sitaramanjaneya Temple

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಡಿಸೆಂಬರ್‌ 19 ರಂದು ಎಳ್ಳು ಅಮಾವಾಸ್ಯೆಯ ಪ್ರಯುಕ್ತ ಶಕ್ತಿದೇವತೆಗಳ ಸಮಾವೇಶ ಜರುಗಲಿದ್ದು, ಡಿಸೆಂಬರ್‌ 20 ರಂದು ಮಾರುತಿ ಹೋಮವನ್ನು ನೆರವೇರಿಸಲಾಗುತ್ತದೆ. ಅಂದು ಸಂಜೆ ಉಸ್ತಾದ್ ಹುಮಾಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ ಮತ್ತು ನಿಷದ್ ಹರ್ಲಾಪುರ ಅವರ ತಂಡದಿಂದ ಸುಶ್ರಾವ್ಯ ಹಿಂದೂಸ್ಥಾನಿ ಸಂಗೀತ ಮತ್ತು ದಾಸವಾಣಿ ಕಾಯಕ್ರಮಗಳು ನಡೆಯಲಿವೆ.

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

ಡಿಸೆಂಬರ್‌ 21 ರಂದು ಶ್ರೀ ಗಾಯತ್ರಿ ಹೋಮವನ್ನು ನೆರವೇರಿಸಿದ ನಂತರ ಸಂಜೆ ಅರುಣ್ ಕುಮಾರ್ ಮತ್ತು ಸಂಗಡಿಗರಿಂದ ಭಕ್ತಿ ಸಂಕೀರ್ತನೆ ಇರುತ್ತದೆ. ಡಿಸೆಂಬರ್‌ 22 ರಂದು ವಿಷ್ಣು ಸಹಸ್ರನಾಮ ಹೋಮ, ಮೈಸೂರಿನ ಎಂ.ಜಿ. ಶ್ರೀಧರ್ ಮತ್ತು ಸಂಗಡಿಗರಿಂದ ನಾಗಸ್ವರ ವಾದನ ಕಾರ್ಯಕ್ರಮ ನಡೆಯಲಿದೆ. 

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

ಡಿಸೆಂಬರ್‌ 23 ರಂದು ಲಲಿತಾ ಸಹಸ್ರನಾಮ ಹೋಮ ಹಾಗೂ ಸಂಜೆ ನೃತ್ಯಗುರು ಸೌಮ್ಯ ರಂಗಸ್ವಾಮಿಯವರ ನವಭಾವ್ ಸ್ಕೂಲ್ ಆಫ್ ಆರ್ಟ್‌ನ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ. ಡಿಸೆಂಬರ್‌ 24 ರಂದು ಶ್ರೀ ಲಕ್ಷ್ಮಿ ನರಸಿಂಹ ಹೋಮ, ಸಂಜೆ ಶೃಂಗೇರಿ ಹೆಚ್. ಎಸ್. ನಾಗರಾಜ್ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 25 ರಂದು ಶ್ರೀ ಲಕ್ಷ್ಮೀ ಹಯಗ್ರೀವ ಹೋಮದ ನಂತರ ಸಂಜೆ ಸಹನಾ ಚೇತನ್ ತಂಡದಿಂದ ಭರತ ನಾಟ್ಯ, ಡಿಸೆಂಬರ್‌ 26 ರಂದು ಶ್ರೀ ಸೂಕ್ತ ಹೋಮದ ನಂತರ ಸಂಜೆ ಬೆಂಗಳೂರಿನ ಸೂಕ್ತ ಪಟ್ಟಾಭಿರಾಮನ್, ವಾಸುಕಿ ವೈಭವ್ ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ. ಡಿಸೆಂಬರ್‌ 27 ರಂದು ಶ್ರೀ ವೈನತೇಯ ಮಂತ್ರ ಹೋಮ, ಸಂಜೆ ವಿದುಷಿ ಸಂಭ್ರಮ ಹೆಚ್. ಎಸ್. ತಂಡದವರ ಕಾರ್ಯಕ್ರಮ ಹಾಗೂ ಡಿಸೆಂಬರ್‌ 28 ರಂದು ವರಾಹಸ್ವಾಮಿ ಮಂತ್ರ ಹೋಮ ಮತ್ತು ಸಂಜೆ ಗಜೇಂದ್ರ ಮೋಕ್ಷ ಕಾರ್ಯಕ್ರಮಗಳು ನಡೆಯಲಿವೆ.

ತೀರ್ಥಹಳ್ಳಿ: ಪೈನಾನ್ಸ್​ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!

ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವೈಭವದ ಶ್ರೀ ಸೀತಾ ಕಲ್ಯಾಣ ಮಹೋತ್ಸವವು ಡಿಸೆಂಬರ್‌ 29 ರಂದು ಸಂಜೆ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಉತ್ಸವ ರಾಮರಿಗೆ ಅಭಿಷೇಕ ನೆರವೇರಲಿದೆ. ಡಿಸೆಂಬರ್‌ 30 ರಂದು ವೈಕುಂಠ ಏಕಾದಶಿಯ ಅಂಗವಾಗಿ ಆನೆ ಉತ್ಸವ ಮತ್ತು ಸಂಜೆ ಕುಮಾರಸ್ವಾಮಿ ಸಂಗಡಿಗರಿಂದ ಸ್ಯಾಕ್ಸೋಫೋನ್ ವಾದನದ ನಾದ ವೈಭವವಿರುತ್ತದೆ. 

Thirthahalli Theppotsava 2024 / ತೀರ್ಥಹಳ್ಳಿ ತೆಪ್ಪೋತ್ಸವ ವಿಶೇಷ ಮತ್ತು ಫೋಟೋಗಳಲ್ಲಿ ಮಲೆನಾಡು ಟುಡೆ ಸ್ಟೋರಿ

ಡಿಸೆಂಬರ್‌ 31 ರಂದು ತೀರ್ಥ ಸ್ನಾನ ಹಾಗೂ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ, ಜನವರಿ 1 ರಂದು ಸುದರ್ಶನ ಹೋಮ, ಉರುಟಣೆ ಮತ್ತು 108 ಸತ್ಯನಾರಾಯಣ ವ್ರತಗಳು ನೆರವೇರಲಿವೆ. 

ಸಂಬಂಧಿ ಮೇಲೆ ಹಗೆತನ, 7 ವರ್ಷ ಕಠಿಣ ಶಿಕ್ಷೆ , ಕಲ್ಲಗಂಗೂರು ಕೇಸ್​ನಲ್ಲಿ ಶಿವಮೊಗ್ಗ ಕೋರ್ಟ್​ನ ತೀರ್ಪು!

ಜನವರಿ 2 ರಂದು ಪಲ್ಲಕ್ಕಿ ಉತ್ಸವ, ಶ್ರೀವತ್ಸ ಸಂಗಡಿಗರಿಂದ ವೇಣುವಾದನ ಹಾಗೂ ಶಯನೋತ್ಸವ ಜರುಗಲಿದ್ದು, ಜನವರಿ 3 ರಂದು ಶ್ರೀ ಧನ್ವಂತರಿ ಹೋಮದ ಬಳಿಕ ಸಂಜೆ ತುಂಗಾ ತೀರದಲ್ಲಿ ತೆಪ್ಪೋತ್ಸವ ಜರುಗಲಿದೆ. ಜನವರಿ 4 ರಂದು ಮಹಾಭಿಷೇಕ, ಮೋಹಿನಿ ಅಲಂಕಾರ, ಕೋಟಿ ತ್ರಯ ನಾಮಾರ್ಚನೆಯ ಸಮಾರೋಪ ನಡೆಯಲಿದ್ದು, ಜನವರಿ 5 ರಂದು ರಾಮತಾರಕ ಮಂತ್ರ ಹೋಮ, ಮಹಾಭಿಷೇಕ, ಕಿರೀಟ ಸಮರ್ಪಣೆ ಹಾಗೂ ಸಂಜೆ ಪ್ರಾಕಾರೋತ್ಸವದೊಂದಿಗೆ ಶತಮಾನೋತ್ಸವವು ಸಂಪನ್ನಗೊಳ್ಳಲಿದೆ. ಈ ಎಲ್ಲಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ವಿನಂತಿಸಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

Kote Sitaramanjaneya Temple ಶಿವಮೊಗ್ಗ ಕೋಟೇ ಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಡಿ. 7 ರಿಂದ ಜ. 5 ರವರೆಗೆ ಸೀತಾ ಕಲ್ಯಾಣ ಶತಮಾನೋತ್ಸವ Seetha Kalyana Shatamanotsava at Kote Sitaramanjaneya Temple from Dec 7 to Jan 5

Share This Article